ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಕರ್ತವ್ಯದ ವೇಳೆ ಮೋಜು-ಮಸ್ತಿ: 6 ಜನ ಮೆಸ್ಕಾಂ ನೌಕರರ ಅಮಾನತ್ತು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ನವೆಂಬರ್ 8: ಕರ್ತವ್ಯದ ವೇಳೆ ಮೋಜು-ಮಸ್ತಿ, ಗುಂಡು, ತುಂಡು, ಅರೆಬೆತ್ತಲಾಗಿ ನೃತ್ಯ ಮಾಡಿದ ಮೆಸ್ಕಾಂ ನೌಕರರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 6 ಜನ ಮೆಸ್ಕಾಂ ನೌಕರರನ್ನು ಅಮಾನತುಗೊಳಿಸಿ ಕಾರ್ಯಪಾಲಕ ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ.

ಏನಿದು ಘಟನೆ:

ಶಿಕಾರಿಪುರ ಪಟ್ಟಣದ‌ ಮೆಸ್ಕಾಂ ಸಿಬ್ಬಂದಿಗಳಾದ ಚಂದ್ರಶೇಖರ ರಾಥೋಡ್, ಎಸ್.ಎ ರವಿ ಹಾಗೂ ವಿನಯ್ ಕುಮಾರ್ ಕೆ.ಎಲ್, ಮಂಜುನಾಥ್ ಕೆ.ಎಸ್, ಸುರೇಶ್ ಎಲ್, ಮಹೇಶ್ವರಪ್ಪ.ಟಿ ಅವರುಗಳು ನ.4 ರಂದು ಕಚೇರಿ ಕರ್ತವ್ಯದ ವೇಳೆಯಲ್ಲಿ ಕಂಪನಿಯ ಸಮವಸ್ತ್ರ ಧರಿಸಿ ಮದ್ಯಪಾನ ಮಾಡಿ ಅರೆಬೆತ್ತಲಾಗಿ, ಮೋಜು‌ಮಸ್ತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿವಮೊಗ್ಗದಲ್ಲಿ ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್: ಮೂವರ ಬಂಧನ ಶಿವಮೊಗ್ಗದಲ್ಲಿ ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್: ಮೂವರ ಬಂಧನ

ಕಂಪನಿ ಘನತೆ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಈ ಘಟನೆಯನ್ನು ಗಂಭೀರ ಸ್ವರೂಪದ ಕರ್ತವ್ಯಲೋಪ ಎಂದು ಪರಿಗಣಿಸಿ ಈ ನೌಕರರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

Shivamogga: Fun On Duty; 6 MESCOM Employees Suspended

ಅಂಜನಾಪುರ ಜಲಾಶಯದ ಬಳಿ ಕರ್ತವ್ಯ ಸಮಯದಲ್ಲಿ ಮೆಸ್ಕಾಂ ಸಮವಸ್ತ್ರದಲ್ಲಿ ಮದ್ಯಪಾನ, ಅರೆಬೆತ್ತಲಾಗಿರುವ ವಿಡಿಯೋ ಹಾಗೂ ಬೈಕ್ ನಲ್ಲಿ ಸ್ಟೇಟ್ ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದ ಸಖತ್ ವೈರಲ್ ಆಗಿದ್ದು, ಮೆಸ್ಕಾಂ ನೌಕರರ ಈ ವರ್ತನೆ ಇಡೀ ಅತ್ಯಂತ ಖಂಡನೀಯವಾಗಿದೆ.

Shivamogga: Fun On Duty; 6 MESCOM Employees Suspended

ಅಮಾನತ್ತು ಮಾಡಿರುವುದು ಒಳ್ಳೆಯ ಪಾಠ ಕಲಿಸಿದಂತಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
Excutive Engineer has ordered the suspension of 6 mescom employees for fun on duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X