ಶಿವಮೊಗ್ಗದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ
ಶಿವಮೊಗ್ಗ, ನವೆಂಬರ್ 4: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರನ್ನು ಬಂಧಿಸಿ, ಆರೋಪಿಗಳಿಂದ 2.21 ಲಕ್ಷ ರೂ. ಹಾಗೂ 3 ಮೊಬೈಲ್ ಫೋನ್ ಗಳನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗದ ಜಯನಗರ ಠಾಣಾ ವ್ಯಾಪ್ತಿಯ ತಿಲಕ್ ನಗರ ಮುಖ್ಯ ರಸ್ತೆಯ ವಿಶ್ವೇಶ್ವರಯ್ಯ ಕಾಂಪ್ಲೆಕ್ಸ್‌ನಲ್ಲಿರುವ ಮೊಬೈಲ್ ಆಂಗಡಿಯಲ್ಲಿ ಆರೋಪಿಗಳು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಸಿಇಎನ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಯ್ ಬಿನ್ ಯಲ್ಲೋಜಿರಾವ್ (35 ವರ್ಷ), ಮೊಬೈಲ್ ಅಂಗಡಿ ಮಾಲೀಕ ವಾಸ: 1ನೇ ತಿರುವು ಶಾಂತಿನಗರ, ರಾಗಿಗುಡ್ಡ, ಶಿವಮೊಗ್ಗ ಇವರನ್ನು ಬಂಧಿಸಲಾಗಿದೆ.

ಕಿರಣ ಬಿನ್ ಹನುಮಂತಪ್ಪ, 32ವರ್ಷ, ಪೈನಾನ್ಸ್ ನಲ್ಲಿ ಕೆಲಸ, ವಾಸ: ದ್ರೌಪದಮ್ಮ ಸರ್ಕಲ್ ಹತ್ತಿರ, 1ನೇ ತಿರುವು ಗೋಪಾಳ, ಶಿವಮೊಗ್ಗ.
ಸಂದೀಪ್ ಬಿನ್ ವಿಠಲ್ ರಾವ್, 28ವರ್ಷ, ಮೊಬೈಲ್ ಅಂಗಡಿಯಲ್ಲಿ ಕೆಲಸ. ವಾಸ: 1ನೇ ತಿರುವು, ರಾಗಿಗುಡ್ಡ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications