• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಲು ಪ್ರಸಾದ್ ಆರೋಗ್ಯ ಸ್ಥಿತಿ ಕ್ಷೀಣ: ಆಸ್ಪತ್ರೆಗೆ ದಾಖಲು

|
Google Oneindia Kannada News

ರಾಂಚಿ, ಜನವರಿ 22: ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಅವರನ್ನು ರಾಂಚಿಯ ಆರ್‌ಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಸಂಜೆ ಅವರ ಆರೋಗ್ಯದಲ್ಲಿ ತೀವ್ರ ಏರಿಳಿತ ಉಂಟಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

72 ವರ್ಷದ ಲಾಲು ಪ್ರಸಾದ್ ಅವರು ಹಲವು ವರ್ಷಗಳಿಂದ ಅನೇಕ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಲಾಲು ಅವರ ಪತ್ನಿ ರಾಬ್ಡಿ ದೇವಿ ಮತ್ತು ಕಿರಿಯ ಮಗ ತೇಜಸ್ವಿ ಯಾದವ್ ಚಾರ್ಟರ್ಡ್ ವಿಮಾನದಲ್ಲಿ ರಾಂಚಿಗೆ ಪ್ರಯಾಣಿಸಿದ್ದಾರೆ. ಲಾಲು ಮಗಳು ಮಿಸಾ ಭಾರ್ತಿ ಕೂಡ ರಿಮ್ಸ್ ಆಸ್ಪತ್ರೆಗೆ ತಲುಪಿದ್ದಾರೆ.

ಬಿಜೆಪಿ ಶಾಸಕರಿಗೆ ಫೋನ್ ಕರೆ; ಲಾಲೂ ಪ್ರಸಾದ್ ಯಾದವ್ ವಿರುದ್ಧ ಎಫ್‌ಐಆರ್ಬಿಜೆಪಿ ಶಾಸಕರಿಗೆ ಫೋನ್ ಕರೆ; ಲಾಲೂ ಪ್ರಸಾದ್ ಯಾದವ್ ವಿರುದ್ಧ ಎಫ್‌ಐಆರ್

'ಲಾಲು ಅವರ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿದೆ. ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ನ್ಯುಮೋನಿಯಾ ಮಾದರಿ ಸಮಸ್ಯೆ ಉಂಟಾಗಿದೆ. ಅವರ ಚಿಕಿತ್ಸೆಗೆ ನೆರವು ನೀಡುವಂತೆ ಏಮ್ಸ್‌ನ ಶ್ವಾಸಕೋಶ ವಿಭಾಗದ ಮುಖ್ಯಸ್ಥರನ್ನು ಸಂಪರ್ಕಿಸಿದ್ದೇವೆ. ಲಾಲು ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಂಟಿಜೆನ್ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಆರ್‌ಟಿ-ಪಿಸಿಆರ್ ಪರೀಕ್ಷೆಯ ವರದಿ ನಾಳೆ ಬರಲಿದೆ' ಎಂದು ರಿಮ್ಸ್ ನಿರ್ದೇಶಕ ಡಾ. ಕಾಮೇಶ್ವರ್ ಪ್ರಸಾದ್ ತಿಳಿಸಿದ್ದಾರೆ.

ಮಗನಿಗೆ ಹಿನ್ನಡೆ: ಸಿಟ್ಟಿನಿಂದ ಟಿವಿ ಆರಿಸಿ ಬಿಸಿಲಲ್ಲಿ ಕುಳಿತ ಲಾಲೂ ಪ್ರಸಾದ್ ಮಗನಿಗೆ ಹಿನ್ನಡೆ: ಸಿಟ್ಟಿನಿಂದ ಟಿವಿ ಆರಿಸಿ ಬಿಸಿಲಲ್ಲಿ ಕುಳಿತ ಲಾಲೂ ಪ್ರಸಾದ್

ಭ್ರಷ್ಟಾಚಾರದ ವಿವಿಧ ಪ್ರಕರಣಗಳಲ್ಲಿ ಲಾಲು ಪ್ರಸಾದ್ ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ, ಅನಾರೋಗ್ಯದ ಕಾರಣ ಅವರು ಹೆಚ್ಚಿನ ಸಮಯ ಆಸ್ಪತ್ರೆ ಹಾಗೂ ವಿಶ್ರಾಂತಿ ಗೃಹದಲ್ಲಿಯೇ ಕಳೆದಿದ್ದಾರೆ.

English summary
Former Bihar Chief Minister Lalu Prasad has been admitted to RIMS in Ranchi after found an infection in his lungs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X