ಮಗನಿಗೆ ಹಿನ್ನಡೆ: ಸಿಟ್ಟಿನಿಂದ ಟಿವಿ ಆರಿಸಿ ಬಿಸಿಲಲ್ಲಿ ಕುಳಿತ ಲಾಲೂ ಪ್ರಸಾದ್
ಪಟ್ನಾ, ನವೆಂಬರ್ 10: ಫಲಿತಾಂಶ ದಿನದಂದು ಬಿಹಾರದ ಜನತೆ ತಮ್ಮ ಮಗ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಅವರಿಗೆ ಉಡುಗೊರೆ ನೀಡಲಿದ್ದಾರೆ ಎಂದು ಮತ ಎಣಿಕೆ ಆರಂಭಕ್ಕೂ ಮುನ್ನ ಸಂತೋಷದಿಂದ ಹೇಳಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಅವರ ನಿರೀಕ್ಷೆಗಳು ತಲೆಕೆಳಗಾಗುವ ಸನ್ನಿವೇಶ ನಿರ್ಮಾಣವಾಗಿದೆ.
ಮೇವು ಹಗರಣದಲ್ಲಿ ಜೈಲು ಪಾಲಾಗಿ, ಪ್ರಸ್ತುತ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಪ್ರಸಾದ್, ತಮ್ಮ ಮಗ ಮುಖ್ಯಮಂತ್ರಿ ಆಗುವುದು ಖಚಿತ ಎಂಬ ಭರವಸೆಯೊಂದಿಗೆ ಬೆಳಿಗ್ಗಿನಿಂದಲೇ ಟಿವಿ ಮುಂದೆ ಕುಳಿತು ಫಲಿತಾಂಶದ ನೇರ ಪ್ರಸಾರ ವೀಕ್ಷಿಸುತ್ತಿದ್ದರು. ಆದರೆ ಎನ್‌ಡಿಎ ಆರಂಭಿಕ ಹಂತಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವುದರಿಂದ ಸಿಟ್ಟಿಗೆದ್ದು ಟಿವಿ ಆಫ್ ಮಾಡಿ ಬಿಸಿಲಿಗೆ ಮೈಯೊಡ್ಡಿ ಕುಳಿತುಕೊಂಡರು ಎಂದು ವರದಿಯಾಗಿದೆ.
ತಮ್ಮ ಎದುರಾಳಿ ರಾಜಕೀಯ ಪಕ್ಷಗಳ ಮುನ್ನಡೆಯಿಂದ ಕಸಿವಿಸಿಗೊಂಡ ಲಾಲೂ, ರಿಮ್ಸ್ ಆಸ್ಪತ್ರೆಯ ಕೆಲ್ಲಿ ಬಂಗಲೆಯಲ್ಲಿನ ಆವರಣದ ಹುಲ್ಲು ಹಾಸಿಗೆ ಮೇಲೆ ಕುಳಿತು ಬಿಸಿಲು ಕಾಯಿಸಿಕೊಂಡರು. ಮಹಾಘಟಬಂಧನದ ಸುಲಭ ಗೆಲುವುನ್ನು ನಿರೀಕ್ಷಿಸಿದ್ದ ಲಾಲೂ, ಮಂಗಳವಾರ ಬೆಳಿಗ್ಗೆಯೇ ಎದ್ದು ಟಿವಿ ವೀಕ್ಷಿಸಲು ಆರಂಭಿಸಿದ್ದರು. ಆದರೆ ಆರಂಭದ ಟ್ರೆಂಡ್‌ನಲ್ಲಿ ಎನ್‌ಡಿಎ ಪಾರಮ್ಯ ಮೆರೆದಿದ್ದು ಅವರಿಗೆ ಕೋಪ, ಬೇಸರ ಉಂಟುಮಾಡಿತು. ಇದರಿಂದ ಟಿವಿ ಆಫ್ ಮಾಡಿ ಮನೆಯಿಂದ ಹೊರಗೆ ನಡೆದರು.

ತಂದೆಯ ಗೈರು ಹಾಜರಿಯಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ತೇಜಸ್ವಿ ಯಾದವ್, ಮಹಾಘಟಬಂಧನ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಒಂದು ವೇಳೆ ಮಹಾಘಟಬಂಧನ ನಿರೀಕ್ಷಿತ ಪ್ರಮಾಣದಲ್ಲಿ ಸೀಟುಗಳನ್ನು ಪಡೆದು 122ರ ಮ್ಯಾಜಿಕ್ ಸಂಖ್ಯೆಯನ್ನು ದಾಟಿದರೆ ಲಾಲೂ ಅವರ ಮಗ ಮುಖ್ಯಮಂತ್ರಿಯಾಗುವುದು ಬಹುತೇಕ ನಿಶ್ಚಿತ. ಒಂದೇ ಕುಟುಂಬದ ಮೂವರು ಸಿಎಂ ಆದ ಹೊಸ ದಾಖಲೆ ನಿರ್ಮಾಣವಾಗಲಿದೆ. ಲಾಲೂ ಪ್ರಸಾದ್ ಮತ್ತು ಅವರ ಪತ್ನಿ ರಾಬ್ಡಿ ದೇವಿ ಬಿಹಾರದ ಸಿಎಂ ಆಗಿದ್ದರು. ಅವರ ಮಗ ಕೂಡ ಮುಖ್ಯಮಂತ್ರಿಯಾದರೆ ಭಾರತೀಯ ರಾಜಕೀಯ ಇತಿಹಾಸದಲ್ಲಿ ಅಪರೂಪದ ದಾಖಲೆಯಾಗಲಿದೆ.
ಸೋಮವಾರವಷ್ಟೇ ಜನ್ಮದಿನ ಆಚರಿಸಿದ್ದ ತೇಜಸ್ವಿ ಯಾದವ್‌ಗೆ ಬೆಳಿಗ್ಗೆ ಕರೆ ಮಾಡಿದ್ದ ಲಾಲೂ ಪ್ರಸಾದ್, ಬಿಹಾರದ ಜನತೆಯು ನಿನಗೆ ನಾಳೆ ಹುಟ್ಟುಹಬ್ಬದ ಉಡುಗೊರೆ ನೀಡಲಿದ್ದಾರೆ ಎಂದು ಶುಭ ಹಾರೈಸಿದ್ದರು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications