• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರ - ಚನ್ನಪಟ್ಟಣ ನನ್ನ ತಂದೆ-ತಾಯಿ ಇದ್ದಂತೆ: ಕುಮಾರಸ್ವಾಮಿ

By ರಾಮನಗರ ಪ್ರತಿನಿಧಿ
|

ರಾಮನಗರ, ಮೇ. 23: ರಾಮನಗರ - ಚನ್ನಪಟ್ಟಣ ನನ್ನ ತಂದೆ-ತಾಯಿ ಇದ್ದ ಹಾಗೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ಬಳಿಕ ಹೇಳಿಕೆ ನೀಡಿದ ಅವರು ರಾಮನಗರದಲ್ಲಿ ಪ್ರಚಾರಕ್ಕೆ ಬಾರದೇ ಇದ್ದರೂ ಕೂಡ ಜನತೆ ಹೆಚ್ಚಿನ ಬಹುಮತ ಕೊಟ್ಟು ಗೆಲ್ಲಿಸಿದ್ದಾರೆ. ಎರಡು ಕ್ಷೇತ್ರದಲ್ಲೂ ಅಭೂತಪೂರ್ವವಾಗಿ ಗೆಲ್ಲಿಸಿದ್ದಾರೆ ಎಂದು ಪ್ರಶಂಸಿಸಿದರು.

ರಾಮನಗರಕ್ಕೆ ಎಚ್‌ಡಿಕೆ ರಾಜೀನಾಮೆ: ಮುಂದಿನ ಅಭ್ಯರ್ಥಿ ಯಾರು?

ಎರಡೂ ಕ್ಷೇತ್ರದ ಋಣ ನನ್ನ ಮೇಲಿದೆ. ರಾಮನಗರಕ್ಕೆ ನನಗೆ ತಾಯಿ-ಮಗನ ಸಂಬಂಧ ಹಿಂದಿನಿಂದಲೂ ಇದೆ. ಇಂದಿಗೂ ಕೂಡ ಆ ಸಂಬಂಧಕ್ಕೆ ಧಕ್ಕೆ ಬಾರದ ಹಾಗೇ ನೋಡಿಕೊಳ್ಳುವೆ ಎಂದರು.

'ಆಲ್‌ ಈಸ್ ವೆಲ್‌', ಅಸಮಾಧಾನದ ಕಿಡಿಯನ್ನು ಹೊಸಕಿ ಹಾಕಿದ ಡಿಕೆಶಿ

ಡಿ.ಕೆ.ಶಿವಕುಮಾರ್ ಗೆ ಡಿಸಿಎಂ ಪಟ್ಟ ಸಿಗದ ಹಿನ್ನೆಲೆ ಡಿ.ಕೆ.ಶಿ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನನಗೆ ಆ ವಿಚಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ಕೇವಲ ಮಾಧ್ಯಮಗಳ ಸೃಷ್ಠಿ. ಈ ವಿಚಾರಕ್ಕೆ ಹೆಚ್ಚಿನ ಮಹತ್ವ ಬೇಡ ಎಂದರು.

English summary
HD Kumaraswamy said that Ramanagara -Channapatna was like my father and mother. Even though I am not promoted Ramanagara in election time. but they won a majority.but i am won a majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X