ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ 2-3 ಹಂತದ ಪ್ರಯೋಗಕ್ಕೆ ಜೂನ್‌ನಲ್ಲಿ ಚಾಲನೆ

|
Google Oneindia Kannada News

ನವದೆಹಲಿ, ಮೇ 24: ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆಯನ್ನು 18 ವರ್ಷ ವಯೋಮಾನಕ್ಕಿಂತ ಕೆಳಗಿನವರ ಬಳಕೆಗೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. 2 ರಿಂದ 18 ವರ್ಷ ವಯಸ್ಸಿನವರ ಮೇಲೆ ಎರಡು ಹಾಗೂ ಮೂರನೇ ಹಂತದ ಪ್ರಯೋಗಗಳು ಜೂನ್ ತಿಂಗಳಿನಲ್ಲಿ ಆರಂಭಿಸಲಾಗುತ್ತದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

ಸದ್ಯ ಭಾರತದಲ್ಲಿ ನಡೆಯುತ್ತಿರುವ ಕೊರೊನಾವೈರಸ್ ಲಸಿಕೆ ಕಾರ್ಯಕ್ರಮದಲ್ಲಿ ಬಳಸುತ್ತಿರುವ ಎರಡು ಕೊರೊನಾ ಲಸಿಕೆಗಳ ಪೈಕಿ ಕೊವಾಕ್ಸಿನ್ ಕೂಡ ಒಂದಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಸ್ಥಳೀಯವಾಗಿ ಕೊವಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ. ಈ ಲಸಿಕೆಯನ್ನು 2ರಿಂದ 18 ವರ್ಷದೊಳಗಿನವರ ಮೇಲೆ 2 ಹಾಗೂ 3 ಹಂತದ ಪ್ರಯೋಗ ನಡೆಸಲು ಈ ತಿಂಗಳ 13ರಂದು ಭಾರತ್ ಬಯೋಟೆಕ್‌ಗೆ ಡಿಸಿಜಿಐ ಅನುಮತಿಯನ್ನು ನೀಡಿದೆ.

ಕೊರೊನಾಗೆ 'ಸ್ಟೀಮ್' ರಾಮಬಾಣ: ವೈರಲ್ ಆದ ವೈದ್ಯರ ಹೇಳಿಕೆಯ ಸತ್ಯಾಸತ್ಯತೆಕೊರೊನಾಗೆ 'ಸ್ಟೀಮ್' ರಾಮಬಾಣ: ವೈರಲ್ ಆದ ವೈದ್ಯರ ಹೇಳಿಕೆಯ ಸತ್ಯಾಸತ್ಯತೆ

ಈ ಪ್ರಯೋಗದ ವಿಚಾರವಾಗಿ ಭಾರತ್ ಬಯೋಟೆಕ್‌ನ ಮೂಲಗಳು ಇಂಡಿಯಾ ಟುಡೆಗೆ ಪ್ರತಿಕ್ರಿಯೆ ನೀಡಿದೆ. ಮಕ್ಕಳ ಮೇಲೆ ಜೂನ್ ತಿಂಗಳಿನಲ್ಲಿ 2 ಹಾಗೂ 3ನೇ ಹಂತದ ಪ್ರಯೋಗ ಆರಂಭವಾಗಲಿದ್ದು ಜುಲೈ ಮಧ್ಯದಲ್ಲಿ ಅಂತ್ಯವಾಗಲಿದೆ. ಕ್ಲಿನಿಕಲ್ ಅಧ್ಯಯನಕ್ಕಾಗಿ ನೇಮಕಗೊಂಡ ಕಿರಿಯ ಮಗು ಎರಡು ವರ್ಷ ವಯಸ್ಸಿನದ್ದಾಗಿದೆ ಎಂದು ಭಾರತ್ ಬಯೋಟೆಕ್ ಮೂಲಗಳು ತಿಳಿಸಿವೆ.

Clinical trials of Covaxin Phase 2-3 for 2-18 age group will starts from June

ಸಖತ್ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ನಿವಾರಣೆಗೆ UV-C ಬೆಳಕಿನ ಕಿರಣ!ಸಖತ್ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ನಿವಾರಣೆಗೆ UV-C ಬೆಳಕಿನ ಕಿರಣ!

ದೆಹಲಿ ಹಾಗೂ ಪಾಟ್ನಾದಲ್ಲಿರುವ ಏಮ್ಸ್, ನಾಗ್ಪುರದ ಮೆಡಿಟ್ರಿನಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸೇರಿದಂತೆ ವಿವಿಧ ತಾಣಗಳಲ್ಲಿ ಪ್ರಯೊಗವನ್ನು ನಡೆಸಲಾಗುತ್ತದೆ. ಈ 2-18 ವರ್ಷದೊಳಗಿನ ವಯೋಮಾನದ 525 ಮಕ್ಕಳ ಮೇಲೆ ಈ ವೈದ್ಯಕೀಯ ಪ್ರಯೋಗ ನಡೆಯಲಿದೆ. ಮೊದಲ ದಿನ ಮತ್ತು 28 ನೇ ದಿನದಲ್ಲಿ ಎರಡು ಡೋಸ್‌ಗಳನ್ನು ನೀಡಲಾಗುತ್ತದೆ.

English summary
Clinical trials of Covaxin Phase 2-3 for 2-18 age group will starts from june and ended by mid july sources in the Hyderabad-based vaccine maker have said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X