• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ರಿಲೀಸ್ ಟೈಮ್ ಲೈನ್

By Mahesh
|

ಮುಂಬೈ, ಮೇ.5: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಆರೋಪಿಯಾಗಿರುವ ಹಿಟ್ ಅಂಡ್ ರನ್ ಕೇಸಿನ ಮೊದಲ ತೀರ್ಪು ಮೇ.6ರಂದು ಪ್ರಕಟಗೊಂಡಿತ್ತು. ಸೆಷನ್ಸ್ ಕೋರ್ಟ್ 5 ವರ್ಷ ಶಿಕ್ಷೆ ವಿಧಿಸಿದರೆ, ಹೈಕೋರ್ಟ್ ತ್ವರಿತವಾಗಿ ಜಾಮೀನು ಮಂಜೂರು ಮಾಡಿತ್ತು. ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಮಾನ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಡಿಸೆಂಬರ್ 10ರಂದು ಅಂತಿಮ ತೀರ್ಪು ಪ್ರಕಟಿಸಿ, ಸಲ್ಮಾನ್ ಖಾನ್ ರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ಸಲ್ಮಾನ್ ಖಾನ್ ಅವರ ಕಾರು ಚಾಲಕ ಅಶೋಕ್ ಸಿಂಗ್ ಸೇರಿದಂತೆ ಸುಮಾರು 27 ಜನ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯಲಾಗಿತ್ತು. ಏ.20ಕ್ಕೆ ಎರಡು ಕಡೆ ವಾದ ಪ್ರತಿವಾದವನ್ನು ಆಲಿಸಿದ ಜಡ್ಜ್ ಡಿಡಬ್ಲ್ಯೂ ದೇಶಪಾಂಡೆ ಅವರು ಮೇ.6ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ಘೋಷಿಸಿದರು. [ಸಲ್ಮಾನ್ ಖಾನ್ ಪ್ರಕರಣದ ತೀರ್ಪು ಅಪ್ಡೇಟ್ಸ್]

ಸೆ.28, 2002ರಂದು ಸಲ್ಮಾನ್ ಖಾನ್ ಅವರಿದ್ದ ಲ್ಯಾಂಡ್ ರೋವರ್ ವಾಹನ ಅಡ್ಡಾದಿಡ್ಡಿ ಚಲಿಸಿ ಅಮೆರಿಕನ್ ಎಕ್ಸ್ ಪ್ರೆಸ್ ಲಾಂಡ್ರಿಯ ಫುಟ್ ಪಾತ್ ನಲ್ಲಿದ್ದ ಒಬ್ಬ ವ್ಯಕ್ತಿ ಸಾವಿಗೆ ಕಾರಣವಾಗಿತ್ತು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. [ಗುದ್ದೋಡು ಕೇಸ್ ತೀರ್ಪು: ಸಲ್ಮಾನ್ ದೋಷಿ]

ಸೆಪ್ಟೆಂಬರ್ 28, 2002ರಿಂದ ಇಲ್ಲಿ ತನಕದ ಟೈಮ್ ಲೈನ್ ಇಲ್ಲಿದೆ.

ಸೆಪ್ಟೆಂಬರ್ 28, 2002: ಮಧ್ಯರಾತ್ರಿ 2 AM ಬಾಲಿವುಡ್ ನಟ ಸಲ್ಮಾನ್ ಖಾನ್ ಟೊಯೊಟಾ ಲ್ಯಾಂಡ್ ಕ್ರೂಸರ್ ವಾಹನ ಬಾಂದ್ರಾ ಪಶ್ಚಿಮ ಪ್ರದೇಶದ ಬೇಕರಿ ಬಳಿ ಅಪಘಾತಕ್ಕೀಡಾಗಿತ್ತು. ಈ ಸಂದರ್ಭದಲ್ಲಿ ಫುಟ್ ಪಾತ್ ನಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದರು. [ಪ್ರಕರಣದಲ್ಲಿ ಟ್ವಿಸ್ಟ್: ಸಲ್ಲೂ ಪರ ಸಾಕ್ಷಿ ಹೇಳಿದ ಡ್ರೈವರ್]

* ಸಲ್ಮಾನ್ ಅವರ ಸೀಫ್ರಂಟ್ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಬಳಿಯಲ್ಲಿ ನಡೆದ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಅದೇ ದಿನ ಮಧ್ಯಾಹ್ನ ಸಲ್ಮಾನ್ ಖಾನ್ ಅವರನ್ನು ಬಂಧಿಸಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಅಕ್ಟೋಬರ್ 21, 2002: ಸಲ್ಮಾನ್ ಅವರ ಮೇಲೆ ಭಾರತೀಯ ದಂಡ ಸಂಹಿತೆ 304 ಅನ್ವಯ ಪ್ರಕರಣ ದಾಖಲಿಸಲಾಯಿತು.

ಅಕ್ಟೋಬರ್ 24, 2002: ಸಲ್ಮಾನ್ ಮತ್ತೊಮ್ಮೆ ಬಂಧನ ಮಾಡಲಾಗಿತ್ತು: ಸೆಷನ್ಸ್ ಕೋರ್ಟಿನಿಂದ ಜಾಮೀನು ಪಡೆದು ಹೊರಬಂದಿದ್ದರು.

2003

* ಮಾರ್ಚ್: ಸೆಕ್ಷನ್ 302 II ಅಡಿಯಲ್ಲಿ ಪ್ರಕರಣ ದಾಖಲಾಗಿರುವುದನ್ನು ಪ್ರಶ್ನಿಸಿದ ಸಲ್ಮಾನ್ ಖಾನ್.

* ಮೇ: ಸಲ್ಮಾನ್ ಅರ್ಜಿ ತಿರಸ್ಕರಿಸಿದ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಸೆಕ್ಷನ್ 302 II ಅಡಿಯಲ್ಲೇ ಪ್ರಕರಣ ನಡೆಸುವಂತೆ ಸೂಚನೆ.

* ಜೂನ್: ಬಾಂಬೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಸಲ್ಮಾನ್ ಖಾನ್. ಈ ಪ್ರಕರಣದಲ್ಲಿ ಆ ಸೆಕ್ಷನ್ ಅನ್ವಯವಾಗುವುದಿಲ್ಲ ಎಂದ ಕೋರ್ಟ್.

* ಅಕ್ಟೋಬರ್: ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಪ್ರತಿವಾದಿಗಳು.

* ಡಿಸೆಂಬರ್: ಸಾಕ್ಷಿಗಳ ವಿಚಾರಣೆ ನಂತರ ಸೆಕ್ಷನ್ 302 II ಅನ್ವಯವಾಗುವುದೋ ಇಲ್ಲವೋ ಎಂಬುದನ್ನು ನಿರ್ಧರಿಸುವಂತೆ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಸುಪ್ರೀಂಕೋರ್ಟ್ ನಿರ್ದೇಶನ. [ಖಾನ್ ಗಳ ಚಿತ್ರಗಳನ್ನು ನಿಷೇಧಿಸಿ: ಸಾಧ್ವಿ ಪ್ರಾಚಿ ಕರೆ]

2006 : ಅಕ್ಟೋಬರ್: ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಸಲ್ಮಾನ್ ಖಾನ್ ಮೇಲೆ ಐಪಿಸಿ ಸೆಕ್ಷನ್ 302 II ಹಾಗೂ ಇನ್ನಿತರ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲು. ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆ.

2007: ಮೇ 22 : ಘಟನೆ ನಡೆದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ಮದ್ಯಪಾನ ಮಾಡಿದ್ದರು ಎಂದು ಪರೀಕ್ಷೆಯಿಂದ ಸಾಬೀತು.

2011 :

* ಮಾರ್ಚ್: ಸಲ್ಮಾನ್ ಖಾನ್ ಮೇಲೆ ಇನ್ನಷ್ಟು ಆರೋಪ ಚಾರ್ಜ್ ಶೀಟ್ ಸಲ್ಲಿಕೆಗೆ ಸಜ್ಜಾದ ಪೊಲೀಸರು.

2012 : ಡಿಸೆಂಬರ್ 2012: ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟೇಟ್ ಕೋರ್ಟ್ ನಿಂಡ ಪ್ರಕರಣದ ವಿಚಾರಣೆ ಮುಂಬೈ ಸೆಷನ್ಸ್ ಕೋರ್ಟ್ ಗೆ ವರ್ಗ.

2013:

* ಮಾರ್ಚ್: ಕೆಳಹಂತದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸೆಷನ್ಸ್ ಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿ ಹಾಕಿದ ಸಲ್ಮಾನ್.

* ಜೂನ್ 24: ಸಲ್ಮಾನ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ತಿರಸ್ಕರಿಸಿದ ಸೆಷನ್ಸ್ ಕೋರ್ಟ್.

* ಜುಲೈ 23: ಮುಂಬೈ ಸೆಷನ್ಸ್ ಕೋರ್ಟ್ ನಿಂದ ಮಹತ್ವದ ನಿರ್ಣಯ, ಸಲ್ಮಾನ್ ಮೇಲೆ ಕೊಲೆಗೆ ಸಮಾನವಾದ ಅಪರಾಧ ಎಸಗಿರುವ ಆರೋಪದಡಿ ಪ್ರಕರಣ ದಾಖಲಿಸಲು ಸೂಚನೆ.

* ಡಿಸೆಂಬರ್ : ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಸಾಕ್ಷಿಗಳ ವಿಚಾರಣೆ ಅಗತ್ಯವಿದೆ. ಸಲ್ಮಾನ್ ಖಾನ್ ಹಾಗೂ ಚಾಲಕ ಅಶೋಕ್ ಸಿಂಗ್ ಹೇಳಿಕೆ ದಾಖಲಿಸಬೇಕಿದೆ. ಸಾಕ್ಷಿಗಳನ್ನು ಮೆಟ್ರೊಪಾಲಿಟನ್ ನ್ಯಾಯಾಲಯದಲ್ಲಿ ಹಾಜರುಪಡಿಸಲು ಸೂಚನೆ.

2014: ಏಪ್ರಿಲ್: ಮೊದಲ ಸಾಕ್ಷಿ ಸಾಂಬ ಗೌಡ ಮರು ವಿಚಾರಣೆಗೆ ಹಾಜರು. ಸೆಷನ್ಸ್ ಕೋರ್ಟಿನಲ್ಲಿ ವಿಚಾರಣೆ ಮುಂದುವರಿಕೆ.

2015

* ಮಾರ್ಚ್ 25: ಸರ್ಕಾರಿ ವಿಶೇಷ ಅಭಿಯೋಜಕ ಪ್ರದೀಪ್ ಘರಾತ್ ಅವರು 27 ಸಾಕ್ಷಿಗಳ ಮರು ವಿಚಾರಣೆ ನಡೆಸಿದ ಬಳಿಕ ವಾದ ಮುಕ್ತಾಯಗೊಳಿಸಿದರು.

* ಏಪ್ರಿಲ್ 20: ಡಿಫೆನ್ಸ್ ಲಾಯರ್ ಶ್ರೀಕಾಂತ್ ಶಿವಾಡೆ ಅವರು ಪ್ರತಿವಾದ ಮಂಡಿಸಿ ಆರೋಪಗಳನ್ನು ಸುಳ್ಳು ಎಂದರು.

* ಏಪ್ರಿಲ್ 24: ಈ ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿರುವ ಗಾಯಕ ಕಮಲ್ ಆರ್ ಖಾನ್ ರನ್ನು ವಿಚಾರಣೆಗೆ ಒಳಪಡಿಸಲು ಸಮನ್ಸ್ ಜಾರಿ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ಸಂತೋಷ್ ದಾಂಡ್ಕರ್ ರಿಂದ ಮನವಿ.

ಮೇ 6: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಆರೋಪಿಯಾಗಿರುವ ಹಿಟ್ ಅಂಡ್ ರನ್ ಕೇಸಿನ ಅಂತಿಮ ತೀರ್ಪು ಮೇ.6ರಂದು ಪ್ರಕಟಗೊಂಡಿದೆ. ಅನೇಕ ತಿರುವುಗಳನ್ನು ಪಡೆದ ಈ ಪ್ರಕರಣ ಸುಮಾರು 13 ವರ್ಷಗಳ ನಂತರ ತೀರ್ಪು ಹೊರ ಬಿದ್ದಿದ್ದು ಸಲ್ಮಾನ್ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿದೆ.

* ಸೆಷನ್ಸ್ ಕೋರ್ಟಿನಲ್ಲಿ 5 ವರ್ಷ ಶಿಕ್ಷೆ ಪಡೆದ ಸಲ್ಮಾನ್ ಖಾನ್ ಗೆ ಬಾಂಬೆ ಹೈಕೋರ್ಟಿನಿಂದ 2 ದಿನಗಳ ಮಧ್ಯಂತರ ಜಾಮೀನು ಮಂಜೂರಾಗಿದೆ.

ಮೇ.7: 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ಅಪರಾಧಿ ಎನಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೈಲು, ಬೇಲ್ ಎರಡು ಮೂರು ಗಂಟೆಯೊಳಗೆ ಸಿಕ್ಕಿದ್ದು ಹೇಗೆ? ಎಂದು ಜನ ಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಇದೇ ವಿಷಯವನ್ನು ವಕೀಲರೊಬ್ಬರು ಸುಪ್ರೀಂಕೋರ್ಟಿಗೆ ಎಳೆದಿದ್ದಾರೆ.[ವಿವರ ಇಲ್ಲಿದೆ]

ಮೇ.26, 2015:ಹಿಟ್ ಅಂಡ್ ರನ್ ಕೇಸಿನಲ್ಲಿ ಜಾಮೀನು ಪಡೆದುಕೊಂಡ ನಟ ಸಲ್ಮಾನ್ ಖಾನ್ ಗೆ ಈಗ ವಿದೇಶಕ್ಕೆ ತೆರಳಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.

ಮೇ.28, 2015: ಮನ್ಸೂರ್ ದರ್ವೇಶ್ ಎಂಬ ಹೆಸರಿನ ಆರ್ ಟಿಐ ಕಾರ್ಯಕರ್ತ ಈ ಬಗ್ಗೆ ವಿವರಣೆ ಕೋರಿ ಅರ್ಜಿ ಸಲ್ಲಿಸಿ ಪ್ರಕರಣದ ಕಡತಗಳ ಬಗ್ಗೆ ವಿವರಣೆ ಕೇಳಿದ್ದರು. ಅದರೆ, 2012ರಲ್ಲೇ ಬೆಂಕಿ ಅನಾಹುತದಲ್ಲಿ ಭಸ್ಮವಾಗಿದೆ ಎಂಬ ಅಘಾತಕಾರಿ ಸುದ್ದಿ ಬಂದಿದೆ.[ಸುದ್ದಿಗೆ ಲಿಂಕ್]

ಸೆಪ್ಟೆಂಬರ್ 01, 2015: ಸಲ್ಮಾನ್ ಖಾನ್‌ಗೆ ನೀಡಲಾಗಿರುವ ಜಾಮೀನನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. [ವಿವರ ಇಲ್ಲಿದೆ]

ಡಿ.10, 2015: ಸಾಕ್ಷಿಗಳ ಕೊರತೆ ಎದುರಿಸಿದ ಪ್ರಾಸಿಕ್ಯೂಷನ್, ಮುಂಬೈ ಪೊಲೀಸರ ತನಿಖೆಯಲ್ಲಿ ವೈಫಲ್ಯದಿಂದಾಗಿ ಸಲ್ಮಾನ್ ಈ ಪ್ರಕರಣದಲ್ಲಿ ದೋಷಿಯಲ್ಲ ಎಂದು ಖುಲಾಸೆಗೊಳಿಸಲಾಗಿದೆ ಎಂದು ತೀರ್ಪು ನೀಡಿದ ಬಾಂಬೆ ಹೈಕೋರ್ಟ್ ನ್ಯಾ. ಎಆರ್ ಜೋಶಿ. ತೀರ್ಪು ಕೇಳಿಸಿಕೊಂಡು ಕಣ್ಣೀರಿಡುತ್ತಾ ಕುಸಿದ ಸಲ್ಮಾನ್ ಖಾನ್. [ಪೂರ್ಣ ವರದಿ ಇಲ್ಲಿ ಓದಿ]

* ಸಲ್ಮಾನ್ ಖಾನ್ ಅವರ ಪಾಸ್ ಪೋರ್ಟ್ ಕೂಡಾ ಕೈ ಸೇರಲಿದೆ ಎಂದು ಸಲ್ಮಾನ್ ಪರ ವಕೀಲ ಅಮಿತ್ ದೇಸಾಯಿ

* ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸಲಾಗುವುದು ಮಹಾರಾಷ್ಟ್ರ ಸರ್ಕಾರದ ಪರ ವಕೀಲೆ ಅಭಾ ಸಿಂಗ್ ಹೇಳಿದ್ದಾರೆ. ಜಡ್ಜ್ ಮೇಂಟ್ ಕಾಪಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಗೃಹ ಇಲಾಖೆ ರಾಮ್ ಶಿಂಧೆ ಹೇಳಿಕೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All charges against the actor Salman Khan in connection with infamous 2002 hit-and-run case have been dropped by the Bombay High Court which has delivered its final verdict today(Dec.10). Here is a timeline of events from September 28, 2002 to December10, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more