ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೇಕಿಂಗ್ ನ್ಯೂಸ್ :ಗುದ್ದೋಡು ಕೇಸ್ ತೀರ್ಪು: ಸಲ್ಮಾನ್ ದೋಷಿ

By Mahesh
|
Google Oneindia Kannada News

ಮುಂಬೈ, ಮೇ.6: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಆರೋಪಿಯಾಗಿರುವ ಹಿಟ್ ಅಂಡ್ ರನ್ ಕೇಸಿನ ಅಂತಿಮ ತೀರ್ಪು ಮೇ.6ರಂದು ಪ್ರಕಟಗೊಂಡಿದೆ. ಅನೇಕ ತಿರುವುಗಳನ್ನು ಪಡೆದ ಈ ಪ್ರಕರಣ ಸುಮಾರು 13 ವರ್ಷಗಳ ನಂತರ ತೀರ್ಪು ಹೊರ ಬಿದ್ದಿದ್ದು ಸಲ್ಮಾನ್ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿದೆ.

ಈ ಪ್ರಕರಣದಲ್ಲಿ ಸಲ್ಮಾನ್ ದೋಷಿ ಎಂದು ಜಡ್ಜ್ ಡಿಡಬ್ಲ್ಯೂ ದೇಶಪಾಂಡೆ ಆದೇಶ ನೀಡಿದ್ದಾರೆ. ಕೋರ್ಟ್ ರೂಮ್ 52ರಲ್ಲಿ ಮಧ್ಯಾಹ್ನ ತೀರ್ಪು ಪ್ರಕಟಿಸಿದ ಜಡ್ಜ್ ದೇಶಪಾಂಡೆ ಸಲ್ಮಾನ್ ಖಾನ್ ಗೆ 5 ವರ್ಷ ಶಿಕ್ಷೆ ಪ್ರಕಟಿಸಿದ್ದಾರೆ.ಈಗ ಸಲ್ಮಾನ್ ಪರ ವಕೀಲರು ಬಾಂಬೆ ಹೈಕೋರ್ಟಿನಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಬಹುದಾಗಿದೆ.

ಸಲ್ಮಾನ್ ಖಾನ್ ಅವರ ಕಾರು ಚಾಲಕ ಅಶೋಕ್ ಸಿಂಗ್ ಸೇರಿದಂತೆ ಸುಮಾರು 27 ಜನ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯಲಾಗಿತ್ತು. ಏ.20ಕ್ಕೆ ಎರಡು ಕಡೆ ವಾದ ಪ್ರತಿವಾದವನ್ನು ಆಲಿಸಿದ ಜಡ್ಜ್ ಡಿಡಬ್ಲ್ಯೂ ದೇಶಪಾಂಡೆ ಅವರು ಮೇ.6ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ಘೋಷಿಸಿದ್ದರು. [ಸೆ.28, 2002ರಿಂದ ಇಲ್ಲಿ ತನಕದ ಟೈಮ್ ಲೈನ್]

ಸೆ.28, 2002ರಂದು ಸಲ್ಮಾನ್ ಖಾನ್ ಅವರಿದ್ದ ಲ್ಯಾಂಡ್ ರೋವರ್ ವಾಹನ ಅಡ್ಡಾದಿಡ್ಡಿ ಚಲಿಸಿ ಅಮೆರಿಕನ್ ಎಕ್ಸ್ ಪ್ರೆಸ್ ಲಾಂಡ್ರಿಯ ಫುಟ್ ಪಾತ್ ನಲ್ಲಿದ್ದ ಒಬ್ಬ ವ್ಯಕ್ತಿ ಸಾವಿಗೆ ಕಾರಣವಾಗಿತ್ತು. ಘಟನೆಯಲ್ಲಿ ನಾಲ್ವರ ಗಾಯಗೊಂಡಿದ್ದರು. [ಸಲ್ಮಾನ್ ಖಾನ್ ಪ್ರಕರಣದ ತೀರ್ಪು ಅಪ್ಡೇಟ್ಸ್]

ನಾನು ನಿರಪರಾಧಿ ಎಂದಿದ್ದ ಸಲ್ಮಾನ್

ನಾನು ನಿರಪರಾಧಿ ಎಂದಿದ್ದ ಸಲ್ಮಾನ್

ಅಪಘಾತ ನಡೆದ ಸಂದರ್ಭದಲ್ಲಿ ತಮ್ಮ ಕಾರಿನ ಚಾಲಕ ಅಶೋಕ್ ಅವರು ವಾಹನ ಚಲಾಯಿಸುತ್ತಿದ್ದರು. ನಾನು ಕಾರು ಚಲಾಯಿಸುತ್ತಿರಲಿಲ್ಲ ಎಂದು ಸಲ್ಮಾನ್ ಹೇಳಿಕೆ ನೀಡಿದ್ದರು. ಜೊತೆಗೆ ಅಪಘಾತವಾದ ಸಂದರ್ಭದಲ್ಲಿ ಕುಡಿದು ವಾಹನ ಚಲಾಯಿಸಿದ ಆರೋಪವನ್ನು ತಳ್ಳಿ ಹಾಕಿದರು. ಇಲ್ಲಿ ತನಕ ನನ್ನ ವಿರುದ್ಧ ಸಲ್ಲಿಸಿರುವ ಸಾಕ್ಷಿಗಳೆಲ್ಲ ಸುಳ್ಳು ಎಂದು ಸಲ್ಲೂ ಸ್ಪಷ್ಟಪಡಿಸಿದ್ದರು.

ಮುಳುವಾದ ಆಲ್ಕೋಹಾಲ್ ಬರ್ಕಾಡಿ ರಮ್

ಮುಳುವಾದ ಆಲ್ಕೋಹಾಲ್ ಬರ್ಕಾಡಿ ರಮ್

ಘಟನೆ ನಡೆದ ದಿನ ಸಲ್ಮಾನ್ ಖಾನ್ ಅವರ ದೇಹದ ರಕ್ತದಲ್ಲಿ ಮದ್ಯದ ಅಂಶ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿತ್ತು. ಬರ್ಕಾಡಿ ರಮ್ ಸೇವಿಸಿದ್ದರು. ತಜ್ಞರ ಹೇಳಿಕೆ ಪ್ರಕಾರ ರಕ್ತದಲ್ಲಿ ಆಲ್ಕೋಹಾಲ್ ಅಂಶ 30 ಮಿಲಿ ಗ್ರಾಮ್ ನಷ್ಟಿರಬಹುದು. ಸಲ್ಮಾನ್ ಅವರ ರಕ್ತದಲ್ಲಿ 62 ಮಿಲಿಗ್ರಾಂನಷ್ಟಿದೆ. ಹೀಗಾಗಿ ಸಲ್ಮಾನ್ ಖಾನ್ ಅವರು ಘಟನೆ ನಡೆದ ವೇಳೆ ಕಾರಿನಲ್ಲಿದ್ದರು ಹಾಗೂ ವಾಹನ ಚಲಾಯಿಸುವಾಗ ಕುಡಿದಿದ್ದರು ಎಂದು ಸಲ್ಮಾನ್ ವಿರುದ್ಧ ದಾಖಲೆ ಸಲ್ಲಿಸಲಾಗಿತ್ತು.

ಸಾಕ್ಷಿಗಳ ವ್ಯತಿರಿಕ್ತ ಹೇಳಿಕೆಗಳು

ಸಾಕ್ಷಿಗಳ ವ್ಯತಿರಿಕ್ತ ಹೇಳಿಕೆಗಳು

ಸಲ್ಮಾನ್ ಅವರು ಏಪ್ರಿಲ್ ತಿಂಗಳಿನಲ್ಲಿ ಮೊದಲ ಬಾರಿಗೆ ಕೋರ್ಟಿಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಅವರ ಕಾರಿನ ಚಾಲಕ ನೀಡಿರುವ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಕಾರು ಚಾಲಕ ಅಶೋಕ್ ಸಿಂಗ್ ನೀಡಿದ ಉಲ್ಟಾ ಹೇಳಿಕೆ ಮುಳುವಾಯಿತು. ಮೊದಲಿಗೆ ಸಲ್ಮಾನ್ ಕಾರು ಚಲಾಯಿಸುತ್ತಿದ್ದರು ಎಂದಿದ್ದ ಚಾಲಕ ನಂತರ ನಾನೇ ಚಲಾಯಿಸುತ್ತಿದ್ದೆ ಎಂದು ಹೇಳಿದ್ದು ಸಲ್ಮಾನ್ ಗೆ ಮಾರಕವಾಯಿತು. 27 ಸಾಕ್ಷಿಗಳ ವಿಚಾರಣೆಯಲ್ಲೂ ಸಲ್ಮಾನ್ ವಿರುದ್ಧ ಹೇಳಿಕೆಗಳೇ ಅಧಿಕವಾಯಿತು.

ಕಡಿಮೆ ಶಿಕ್ಷೆಗಾಗಿ ಮನವಿ

ಕಡಿಮೆ ಶಿಕ್ಷೆಗಾಗಿ ಸಲ್ಮಾನ್ ಖಾನ್ ಪರ ವಕೀಲ ಶ್ರೀಕಾಂತ್ ಶಿವಾಡೆ ಮನವಿ. 10 ವರ್ಷ ಶಿಕ್ಷೆ ಅಧಿಕವಾಗುತ್ತದೆ. ಸಲ್ಮಾನ್ ಅವರು ನಟರಷ್ಟರಲ್ಲದೆ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಅವರು ಜೈಲಿನಲ್ಲಿ ಕುಳಿತರೆ ಇಲ್ಲಿ ಅನೇಕ ನಿರ್ಗತಿಕರಿಗೆ ತೊಂದರೆಯಾಗುತ್ತದೆ ಎಂದು ವಾದ.

ತಮಿಳು ಸಂಘಟನೆಯಿಂದ ಪ್ರತಿಭಟನೆ

ಮೃತ ವ್ಯಕ್ತಿಯ ಪರ ತಮಿಳು ಸಂಘಟನೆಯ ಬೆಂಬಲ, ಸಲ್ಮಾನ್ ಗೆ ಶಿಕ್ಷೆಯಾಗಲಿ ಎಂದು ಪ್ರತಿಭಟನೆ

ಸಲ್ಮಾನ್ ಗೆ ಶಿಕ್ಷೆ ಆಗದಿರಲಿ: ಪ್ರತ್ಯಕ್ಷ ಸಾಕ್ಷಿ

ಸಲ್ಮಾನ್ ಗೆ ಶಿಕ್ಷೆ ಆಗದಿರಲಿ ಎಂದು ಪ್ರತ್ಯಕ್ಷ ಸಾಕ್ಷಿ ಜಾನ್ ಫ್ರಾನ್ಸಿಸ್ ಫರ್ನಾಂಡೀಸ್ ಹೇಳಿದ್ದಾರೆ. ಸಲ್ಮಾನ್ ಡ್ರೈವ್ ಮಾಡುತ್ತಿದ್ದರೆ ಇಲ್ಲವೇ ಎಂಬುದನ್ನು ನಾನು ನೋಡಿಲ್ಲ. ಘಟನೆ ಸ್ಥಳದಲ್ಲಿ ಸಲ್ಮಾನ್ ಇದ್ದರು ಎಂಬುದನ್ನು ಕಂಡಿದ್ದೇನೆ.

ಕಾನ್ ಪುರದಲ್ಲಿ ಸಲ್ಮಾನ್ ಪರ ಪೂಜೆ

ಕಾನ್ ಪುರದಲ್ಲಿ ಸಲ್ಮಾನ್ ಪರ ಪೂಜೆ ಪುನಸ್ಕಾರ,

English summary
Hit-and-run case: Actor Salman Khan on Wednesday(May.6) was convicted of all the charges against him in the 2002 hit-and-run-case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X