ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಮಾನ್ ಖಾನ್ ಪ್ರಕರಣದ ತೀರ್ಪು : ಕ್ಷಣ-ಕ್ಷಣದ ಮಾಹಿತಿ

|
Google Oneindia Kannada News

ಮುಂಬೈ, ಮೇ 6 : ಹಿಟ್ ಅಂಡ್ ರನ್ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಅಪರಾಧಿ ಎಂದು ಮುಂಬೈ ಸೆಷನ್ಸ್ ಕೋರ್ಟ್ ಬುಧವಾರ ತೀರ್ಪು ನೀಡಿದೆ. 2002ರಲ್ಲಿ ನಡೆದ ಪ್ರಕರಣದ ತೀರ್ಪು ಇಂದು ಹೊರಬಿದ್ದಿದೆ. ಸಲ್ಮಾನ್ ಇದ್ದ ಕಾರು ಪುಟ್‌ಪಾತ್ ಮೇಲೆ ಮಲಗಿದ್ದವರ ಮೇಲೆ ಹರಿದಿತ್ತು. ಈ ದುರ್ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದರು.

ಸಲ್ಮಾನ್ ಖಾನ್ ಅಪರಾಧಿ ಎಂದು ತೀರ್ಪು ನೀಡಿರುವ ಕೋರ್ಟ್, 5 ವರ್ಷಗಳ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡವನ್ನು ವಿಧಿಸಿದೆ. ಸಲ್ಮಾನ್ ಖಾನ್ ಪರ ವಕೀಲರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. [ಸಲ್ಮಾನ್ ಪ್ರಕರಣದ timeline]

Salman khan verdict

ಸಮಯ 4.51 : ಸಲ್ಮಾನ್‌ ಖಾನ್‌ಗೆ ಬಾಂಬೆ ಹೈಕೋರ್ಟ್‌ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿದೆ.

ಸಮಯ 4.35 : ನ್ಯಾಯಮೂರ್ತಿ ಅಭಯ್ ತಿಪ್ಸೆ ಅವರ ಏಕಸದಸ್ಯ ಪೀಠದಲ್ಲಿ ಸಲ್ಮಾನ್ ಖಾನ್ ಅರ್ಜಿ ವಿಚಾರಣೆ ಆರಂಭವಾಗಿದೆ. ಖ್ಯಾತ ವಕೀಲ ಹರೀಶ್ ಸಾಳ್ವೆ ಸಲ್ಮಾನ್‌ ಪರ ವಾದ ಮಂಡನೆ ಮಾಡುತ್ತಿದ್ದಾರೆ

ಸಮಯ 4.15 : ಸಲ್ಮಾನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ 4.30ಕ್ಕೆ ಮುಂದೂಡಿಕೆ

ಸಮಯ 4.05 ಗಂಟೆ : ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಮಾನ್ ಜಾಮೀನು ಅರ್ಜಿ ವಿಚಾರಣೆ ಆರಂಭ

ಸಮಯ 3 ಗಂಟೆ : ಸಲ್ಮಾನ್ ಖಾನ್ ಪರ ವಕೀಲರು ಜಾಮೀನು ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 4 ಗಂಟೆಗೆ ಅರ್ಜಿಯ ವಿಚಾರಣೆ ನಡೆಯಲಿದೆ. [ಸಲ್ಮಾನ್ ಶಿಕ್ಷೆ ಟ್ವಿಟ್ಟರ್ ನಲ್ಲಿ ಜನತೆ ಕೊಟ್ಟ ತೀರ್ಪೇನು?]

ಸಮಯ 2.47 : ಸಲ್ಮಾನ್ ಖಾನ್ ಪರ ವಕೀಲರು ಗುರುವಾರ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ. ಮೇ 11ರಿಂದ 29ರವರೆಗೆ ಬಾಂಬೆ ಹೈಕೋರ್ಟ್‌ಗೆ ಬೇಸಿಗೆ ರಜೆ ಇದೆ ಅದಕ್ಕೂ ಮೊದಲು ವಿಚಾರಣೆ ನಡೆದು ಜಾಮೀನು ದೊರಕಿದರೆ ಸಲ್ಮಾನ್ ಜೈಲಿನಿಂದ ಹೊರಬರಲಿದ್ದಾರೆ.

ಸಮಯ 2.30 : ಮುಂಬೈ ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಮಾನ್ ಖಾನ್ ಪರ ವಕೀಲರು ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ. ಶಿಕ್ಷೆರದ್ದು ಮತ್ತು ಜಾಮೀನು ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ. [ಸಲ್ಮಾನ್‌ಗೆ ಜೈಲು ವಿಡಿಯೋ ನೋಡಿ]

ಸಮಯ 2 ಗಂಟೆ : ಸಲ್ಮಾನ್ ಖಾನ್ ಅವರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಲಾಗಿದೆ. ನ್ಯಾಯಾಲಯದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿರುವುದರಿಂದ ಕೋರ್ಟ್ ಆದೇಶದ ಪ್ರತಿ ಸಂಜೆ 4 ಗಂಟೆಗೆ ಲಭ್ಯವಾಗಲಿದೆ.

ಸಮಯ .1.32 : ಸಲ್ಮಾನ್ ಕೋರ್ಟ್‌ನಿಂದ ನೇರವಾಗಿ ಜೈಲಿಗೆ ತೆರಳಲಿದ್ದಾರೆ. ಸೆಷೆನ್ಸ್ ಕೋರ್ಟ್ ತೀರ್ಪನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಬಹುದಾಗಿದೆ.

ಸಮಯ 1.27 : ಸಲ್ಮಾನ್ ಖಾನ್‌ಗೆ 5 ವರ್ಷಗಳ ಜೈಲು ಶಿಕ್ಷೆ

ಸಮಯ 1.10 : ಕೋರ್ಟ್ ಕಲಾಪ ಆರಂಭ. ಸೆಷನ್‌ ಕೋರ್ಟ್‌ನಲ್ಲಿ ಕೈ ಕೊಟ್ಟ ಕರೆಂಟ್

ಸಮಯ 12.30 : ಕೋರ್ಟ್ ಕಲಾಪ 1.10ಕ್ಕೆ ಮುಂದೂಡಿಕೆ. ಮಧ್ಯಾಹ್ನ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಪ್ರಕಟಿಸಲಿದೆ.

Salman Khan

ಸಮಯ 12.28 : ಸಲ್ಮಾನ್‌ ಖಾನ್‌ಗೆ 10 ವರ್ಷ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದ್ದಾರೆ.

ಸಮಯ 12.16 : ಸಲ್ಮಾನ್ ಖಾನ್ ಅವರಿಗೆ 3 ವರ್ಷಕ್ಕಿಂತ ಹೆಚ್ಚು ಶಿಕ್ಷೆ ವಿಧಿಸಬಾರದು ಎಂದು ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಸಮಯ 12.10 : ಸಲ್ಮಾನ್ ಖಾನ್ ಅವರನ್ನು ನ್ಯಾಯಾಲಯ ಪೊಲೀಸರ ವಶಕ್ಕೆ ಒಪ್ಪಿಸಿದೆ ಎಂದು ಡಿಡಿ ನ್ಯೂಸ್ ವರದಿ ಮಾಡಿದೆ.

ಸಮಯ 12 ಗಂಟೆ : ಕೋರ್ಟ್‌ನಲ್ಲಿ ಕಣ್ಣೀರು ಹಾಕಿದ ಸಲ್ಮಾನ್ ಖಾನ್, ಸಂತ್ರಸ್ತರಿಗೆ ಪರಿಹಾರ ನೀಡಲು ಸಿದ್ಧವಿದ್ದೇವೆ ಎಂದು ವಾದ ಮಂಡಿಸಿದ ಸಲ್ಮಾನ್‌ ಪರ ವಕೀಲರು.

ಸಮಯ 11.50 : ಕೋರ್ಟ್‌ನಿಂದ ಹೊರಹೋದ ಸಲ್ಮಾನ್ ಕುಟುಂಬ ಸದಸ್ಯರು. ಕೋರ್ಟ್‌ನಲ್ಲಿ ತಂಗಿ ಅರ್ಪಿತಾ ಮಾತ್ರ ಇದ್ದಾರೆ.

ಸಮಯ 11.40 : ಸಲ್ಮಾನ್ ಖಾನ್ ವಿರುದ್ಧ ಲೈಸೆನ್ಸ್‌ ಇಲ್ಲದೆ ವಾಹನ ಚಾಲನೆ, ಅಜಾಗರೂಕತೆಯ ಚಾಲನೆ, ಉದ್ದೇಶರಹಿತ ಮಾನವ ಹತ್ಯೆಯ ಆರೋಪಗಳು ಸಾಬೀತಾಗಿವೆ. [ಗುದ್ದೋಡು ಕೇಸ್ ತೀರ್ಪು: ಸಲ್ಮಾನ್ ದೋಷಿ]

ಸಮಯ 11.36 : ಸಲ್ಮಾನ್ ಖಾನ್ ಅವರ ಸಮಾಜ ಸೇವಾ ಕಾರ್ಯಗಳನ್ನು ಪರಿಗಣಿಸಿ 2 ವರ್ಷ ಶಿಕ್ಷೆ ವಿಧಿಸಿ ಎಂದು ವಕೀಲ ಶ್ರೀಕಾಂತ್ ಶಿವಾಡೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಸಮಯ 11.22 : ಶಿಕ್ಷೆ ಪ್ರಮಾಣದ ಬಗ್ಗೆ ಏನು ಹೇಳುವಿರಿ? ಎಂದು ನ್ಯಾಯಮೂರ್ತಿಗಳು ಅಪರಾಧಿ ಸಲ್ಮಾನ್ ಖಾನ್‌ ಅವರನ್ನು ಪ್ರಶ್ನಿಸಿದ್ದಾರೆ. ಆದರೆ, ಸಲ್ಮಾನ್ ಮೌನವಾಗಿದ್ದು, ಅವರ ಪರ ವಕೀಲರು ವಾದ ಮಂಡನೆ ಮಾಡುತ್ತಿದ್ದಾರೆ.

ಸಮಯ 11.18 : ಸಲ್ಮಾನ್ ಖಾನ್ ಕುಡಿದು ವಾಹನ ಚಾಲನೆ ಮಾಡಿದ್ದಾರೆ ಎಂಬುದು ಸಾಬೀತು. ಪ್ರಕರಣದಲ್ಲಿ ಸಲ್ಮಾನ್ ಖಾನ್ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಈ ಪ್ರಕರಣದಲ್ಲಿ ಕನಿಷ್ಠ 10 ವರ್ಷ ಶಿಕ್ಷೆ ವಿಧಿಸಲು ಅವಕಾಶವಿದೆ.

ಸಮಯ 11.14 : ಸಲ್ಮಾನ್ ಖಾನ್ ವಿರುದ್ಧದ ಎಲ್ಲಾ ಆರೋಪಗಳು ಸಾಬೀತು. ಸಲ್ಮಾನ್ ದೋಷಿ ಎಂದ ಕೋರ್ಟ್

ಸಮಯ 10.47 : ಬೆಳಗ್ಗೆ 11.15ಕ್ಕೆ ಕೋರ್ಟ್ ಕಲಾಪ ಆರಂಭವಾಗಲಿದ್ದು, ನ್ಯಾಯಮೂರ್ತಿ ಡಿ.ಡಬ್ಯೂ.ದೇಶಪಾಂಡೆ ಅವರು ತೀರ್ಪು ಪ್ರಕಟಿಸಲಿದ್ದಾರೆ.]

ಸಮಯ 10.46 : ಸೆಷೆನ್ಸ್ ಕೋರ್ಟ್ ತಲುಪಿದ ಸಲ್ಮಾನ್ ಖಾನ್

ಸಮಯ 10.30 : ಮುಂಬೈ ಸೆಷನ್ಸ್ ಕೋರ್ಟ್‌ಗೆ ಭಾರೀ ಪೊಲೀಸ್ ಭದ್ರತೆ. ಕೋರ್ಟ್‌ ಬಳಿ ಆಗಮಿಸಿರುವ ನೂರಾರು ಅಭಿಮಾನಿಗಳು [ಜೈಲಾ, ಬೇಲಾ ಸಲ್ಲು ಮೇಲೆ 2000 ಕೋಟಿ ಬೆಟ್ಟಿಂಗ್!]

ಸಮಯ 10 ಗಂಟೆ : ಬಾಂದ್ರಾದ ನಿವಾಸದಿಂದ ಮುಂಬೈ ಸೆಷೆನ್ಸ್ ಕೋರ್ಟ್‌ನತ್ತ ಹೊರಟ ಸಲ್ಮಾನ್ ಖಾನ್, ಮಗನನ್ನು ಅಪ್ಪಿಕೊಂಡು ಬೀಳ್ಕೊಟ್ಟ ತಂದೆ.

49 ವರ್ಷದ ಸಲ್ಮಾನ್ ಖಾನ್ ಅವರ ಸಾಲು ಸಾಲು ಚಿತ್ರಗಳು ಈ ವರ್ಷ ಬಿಡುಗಡೆಗೆ ಕಾದಿವೆ. ಹಲವಾರು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಕರೀನಾ ಕಪೂರ್ ಜೋಡಿಯಾಗಿ ಸಲ್ಮಾನ್‌ 'ಬಜರಂಗಿ ಭಾಯಿಜಾನ್' ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದೆ.

English summary
Mumbai sessions court on Wednesday sentenced Bollywood star Salman Khan to five years in jail in 2002 hit-and-run case. Here is live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X