Get Updates
Get notified of breaking news, exclusive insights, and must-see stories!

ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ

Akshaya Tritiya 2026: ಅಕ್ಷಯ ತೃತೀಯವು ಯಾವುದೇ ಜ್ಯೋತಿಷ್ಯದ ಕಟ್ಟುಪಾಡುಗಳನ್ನು ಮೀರಿದ ಅಪಾರ ಆಧ್ಯಾತ್ಮ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಾರುವ ದಿನವಾಗಿದೆ. ಈ ದಿನದಂದು ನೀವು ಯಾವ ಶುಭ ಮುಹೂರ್ತ, ಘಳಿಗೆ ನೋಡದೇ ನಿಮ್ಮಿಷ್ಟದ ಕೆಲಸ ಕಾರ್ಯಗಳನ್ನು ಸಕಾರಾತ್ಮಕ ಮನಸ್ಸಿನಿಂದ ಆರಂಭಿಸಬಹುದು. ಈ ದಿನ ಏನೇ ಹೊಸದಾಗಿ ಶುರು ಮಾಡಿದರೆ ಅದು ಯಶಸ್ವಿ ಆಗುತ್ತದೆ ನಂಬಿಕೆ. ಪ್ರತಿ ವರ್ಷದಂತೆ 2026ರಲ್ಲೂ ಅಕೃಯ ತೃತೀಯ ಆಚರಣೆಗೆ ಬೆಂಗಳೂರು ಸೇರಿ ಕರ್ನಾಟಕ ಸಜ್ಜಾಗುತ್ತಿದೆ. ಆಚರಣೆ ದಿನಾಂಕ, ಸಮಯ, ಮಹತ್ವ, ಹಿನ್ನಲೆ ಸಂಪೂರ್ಣ ವಿವರ ಇಲ್ಲಿದೆ.

ಅಕ್ಷಯ ತೃತೀಯ ದಿನಾಂಕ, ಮುಹೂರ್ತ

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಅಕ್ಷಯ ತೃತೀಯ ಈ ವರ್ಷ 2026 ಏಪ್ರಿಲ್ 19ರಂದು ಆಚರಣೆ ಮಾಡಲು ನಿಗದಿ ಆಗಿದೆ. ಏಪ್ರಿಲ್ 18ರಂದು ಸಂಜೆ 5.31 ರಿಂದ ಏಪ್ರಿಲ್ 19 ಮಧ್ಯಾಹ್ನ 02.12ರವರೆಗೆ ಆಚರಣೆ ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್‌ನ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನ ಅಕ್ಷಯ ತೃತೀಯ ಆಚರಣೆ ನಡೆಸಲಾಗುತ್ತದೆ. ಈ ದಿನ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ.

Akshaya Tritiya 2026

ಅಕ್ಷಯ ತೃತೀಯದ ಹಿನ್ನೆಲೆ, ಇತಿಹಾಸ ಏನು?

ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯವು ವಿಷ್ಣುವಿನ ಆರನೇ ಅವತಾರ ಅಥವಾ ಅವತಾರವಾದ ಪರಶುರಾಮನ ಜನ್ಮ ದಿನ ಎಂಬ ಐತಿಹ್ಯವಿದೆ. ಇದೇ ದಿನ ಅನ್ನಪೂರ್ಣ ದೇವಿಯ ಜನ್ಮ ದಿನವು ಹೌದು. ಅಕ್ಷಯ ತೃತೀಯವು ಹಿಂದೂ ಧರ್ಮದಲ್ಲಿ ಎರಡನೇ ಯುಗವಾದ ತ್ರೇತಾಯುಗವು ಪ್ರಾರಂಭವಾಗುತ್ತದೆ. ಮೊದಲ ಯುಗ ಸತ್ಯಯುಗ ಅಂತ್ಯಗೊಳ್ಳುತ್ತದೆ. ತ್ರೇತಾಯುಗವು ವಾಮನ, ಪರಶುರಾಮ ಮತ್ತು ರಾಮನಂತಹ ಹಿಂದೂ ಪೌರಾಣಿಕ ದೇವರುಗಳು ವಾಸಿಸುತ್ತಿದ್ದ ಯುಗವಾಗಿದೆ.

ಅಕ್ಷಯ ತೃತಿಯ ದಿನವೇ ಮಹರ್ಷಿ ವೇದವ್ಯಾಸರು ಗಣೇಶನಿಗೆ ಮಹಾಭಾರತ ಕಾವ್ಯವನ್ನು ಹೇಳಲು ಪ್ರಾರಂಭಿಸಿದ್ದ ಮಹತ್ವದ ದಿನವಾಗಿದೆ. ಈ ಕಾವ್ಯವನ್ನು ವೇದವ್ಯಾಸರು ನಿರೂಪಿಸಿದ್ದಾರೆ. ಪವಿತ್ರ ನದಿ ಗಂಗಾ ಭೂಮಿಗೆ ಇಳಿದದ್ದು ಇದೇ ದಿನವೆಂದು ಪುರಾಣದಲ್ಲಿ ಉಲ್ಲೇಖವಿದೆ. ಶ್ರೀಕೃಷ್ಣನ ಬಡ ಸ್ನೇಹಿತ ಸುದಾಮನು ಅವನಿಗೆ ಅನ್ನವನ್ನು ಅರ್ಪಿಸಿ ಪ್ರತಿಯಾಗಿ ಕೃಷ್ಣನಿಂದ ಸಂಪತ್ತನ್ನು ಪಡೆದ ದಿನವಿದು. ಹೀಗಾಗಿ ಈ ದಿನವನ್ನು ಬೆಂಗಳೂರು ಸೇರಿ ಕರ್ನಾಟಕ ಹಾಗೂ ದೇಶದ ನಾನಾ ಕಡೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

ಆಧ್ಯಾತ್ಮಿಕ ಇತಿಹಾಸ

ಅಕ್ಷಯ' ಎಂದರೆ ಎಂದಿಗೂ ನಶಿಸದ, ಶಾಶ್ವತ ಎಂದು ಅರ್ಥ. ಇಂತಹ ಮಹಾಘಳಿಗೆಯಲ್ಲಿ (ಅಕ್ಷಯ ತೃತೀಯ ದಿನ) ಮಾಡುವ ಪೂಜೆ, ಜಪ, ತಪಸ್ಸು ಮತ್ತು ದಾನಗಳು ಹಾಗೂ ಹೊಸ ಕೆಲಸಗಳು ನಮಗೆ (ಅಕ್ಷಯ) ಪುಣ್ಯಫಲವನ್ನು ನೀಡುತ್ತವೆ ಎಂಬ ನಂಬಿಕೆ ಇದೆ. ಅನ್ನಪೂರ್ಣೇಶ್ವರಿ ಈ ದಿನ ಕಾಣಿಸಿಕೊಂಡಿದ್ದು, ದಾನಕ್ಕೆ ಶುಭದಿನ ಎನ್ನಲಾಗಿದೆ. ಹೀಗಾಗಿ ಜನರು ಉತ್ತಮ ಕೆಲಸ ಆರಂಭಿಸಲು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ.

ಇನ್ನೂ ಇದೇ ಇದನ ಜೈನ್ ಧರ್ಮದ ಮೊದಲ ತೀರ್ಥಂಕರರಾದ ರಿಷಭನಾಥರು ತಮ್ಮ ಒಂದು ವರ್ಷದ ಉಪವಾಸವನ್ನು ಕಬ್ಬಿನ ಹಾಲಿನ ಮೂಲಕ ಮುಕ್ತಾಯಗೊಳಿಸಿದ್ದು ಇದೇ ದಿನವೆಂದು ಜೈನ ಧರ್ಮದಲ್ಲಿ ವಿವರಿಸಲಾಗಿದೆ. ಅಕ್ಷಯ ತೃತೀಯಗೆ ಸಾಕಷ್ಟು ಅರ್ಥಗಳು, ಮಹತ್ವವನ್ನು, ಪೌರಾಣಿಕ, ಆಧ್ಯಾತ್ಮಿಕ ಇತಿಹಾಸ ಹೊಂದಿದೆ.

Akshaya Tritiya 2026

ಅಕ್ಷಯ ತೃತೀಯ ಆಚರಣೆ, ಪೂಜಾ ವಿಧಿ ವಿಧಾನಗಳು

ಈ ದಿನ ಮನೆ ಮಂದಿಯೆಲ್ಲ ಕುಟುಂಬ ಸಮೇತರಾಗಿ ವಿಶೇಷ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಈ ದಿನ ಮನೆಯಲ್ಲಿ ಲಕ್ಷ್ಮಿ, ಗಣಪತಿ ಮತ್ತು ವಿಷ್ಣು ಮೂರ್ತಿಯನ್ನಿಟ್ಟು ಪೂಜಿಸಲಾಗುತ್ತದೆ. ಶ್ರೀಕೃಷ್ಣನ ವಿಗ್ರಹಕ್ಕೆ ಶ್ರೀಗಂಧದ ಲೇಪ ಮಾಡುತ್ತಾರೆ. ಹೂವನಿಟ್ಟು ಮತ್ತು ಹಾಲು, ಜೇನುತುಪ್ಪದಂತಹ ಪವಿತ್ರ ವಸ್ತುಗಳನ್ನು ಅಭಿಷೇಕ ಮಾಡುತ್ತಾರೆ. ವೈಷ್ಣವ ಸಮುದಾಯದವರು ಇದೇ ದಿನ ಉಪವಾಸ ವ್ರತ ಆಚರಿಸುತ್ತಾರೆ. ಭಕ್ತರಿಗೆ, ಬಡವರಿಗೆ ಹಣ್ಣುಗಳು, ಬಟ್ಟೆಗಳು, ಇನ್ನಿತರ ವಸ್ತುಗಳನ್ನು ವಿತರಿಸುತ್ತಾರೆ. ಅನ್ನದಾನವು ಇದೇ ದಿನ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಜನರು ವ್ಯಾಪಾರ, ವ್ಯವಹಾರಗಳ ಅಂತಿಮ ನಿರ್ಧಾರವನ್ನು ಇದೇ ದಿನ ಕೈಗೊಳ್ಳುತ್ತಾರೆ. ಈ ದಿನ ಆರಂಭಿಸುವ ಪ್ರತಿ ಕೆಲಸವು ಉತ್ತಮ ಪ್ರಗತಿ ಕಾಣಲಿದೆ. ಹೀಗಾಗಿ ಈ ದಿನದ ಪೂಜೆಗಳು ಹೆಚ್ಚಿನ ವೈಶಿಷ್ಟ್ಯೆಗಳಿಂದ ಕೂಡಿರುತ್ತವೆ. ಪಂಚಮುಖದಿಂದ ಹಿಡಿದು ಏಳು, ಹತ್ತು, ಹದಿಮೂರು, ಹತ್ತೊಂಬತ್ತು ಮುಖಿಗಳ ರುದ್ರಾಕ್ಷಿ ಧಾರಣೆಯನ್ನು ಮಾಡಲಾಗುತ್ತದೆ.

ಅಕ್ಷಯ ತೃತೀಯ ದಿನ ಚಿನ್ನ-ಬೆಳ್ಳಿ ಖರೀದಿ

ಅಕ್ಷಯ ತೃತೀಯ ದಿನ ಬಹಳಷ್ಟು ಮಂದಿ ಚಿನ್ನ-ಬೆಳ್ಳಿ ಖರೀದಿಸುವುದು ವಾಡಿಕೆ. ಈ ವರ್ಷ ಸಹ ಚಿನ್ನಾಭರಣ ಖರೀದಿ ಜೊರಾಗಲಿದೆ. ಆದರೆ ಕಳೆದ ಮೂರು ತಿಂಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಗಗನಕ್ಕೇರಿದೆ. ಒಂದೂವರೆ ಲಕ್ಷವರೆಗೆ ಚಿನ್ನದ ದರ ಏರಿಕೆ ಕಂಡಿದೆ. ಇಂದು (ಮಾರ್ಚ್ 10) ಚಿನ್ನದ 24 ಕ್ಯಾರಟ್ ಹತ್ತು ಗ್ರಾಂ ದರ 1,62,380 ರೂ. ಹಾಗೂ 22 ಕ್ಯಾರಟ್ ಹತ್ತು ಗ್ರಾಂ ಬೆಲೆ 1,48,850 ರೂಪಾಯಿ ಇದೆ. ಬೆಳ್ಳಿ ಒಂದು ಕೆಜಿಗೆ 2,90,000 ರೂಪಾಯಿ ಇದೆ. ಈ ವರ್ಷವು ಹೆಚ್ಚಿನ ಚಿನ್ನ ಖರೀದಿ ಆಗುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+