ದುಬೈಗೆ ಹಾರಲು ಸಲ್ಮಾನ್ ಗೆ ಸಿಕ್ಕಿತು ರಹದಾರಿ
ಮುಂಬೈ, ಮೇ.26: ಹಿಟ್ ಅಂಡ್ ರನ್ ಕೇಸಿನಲ್ಲಿ ಜಾಮೀನು ಪಡೆದುಕೊಂಡ ನಟ ಸಲ್ಮಾನ್ ಖಾನ್ ಗೆ ಈಗ ವಿದೇಶಕ್ಕೆ ತೆರಳಲು ಬಾಂಬೆ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.
ಜಸ್ಟೀಸ್ ಶಾಲಿನಿ ಫಾನಾಸಾಲ್ಕಾರ್ ಅವರು ಸಲ್ಮಾನ್ ಖಾನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಅನುಮತಿ ನೀಡಿದ್ದಾರೆ. [ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]
ಮೇ 29ರಂದು ದುಬೈನಲ್ಲಿ ನಡೆಯಲಿರುವ ಅರಬ್ ಇಂಡೋ ಬಾಲಿವುಡ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ ಕೋರಿ ನಟ ಸಲ್ಮಾನ್ ಖಾನ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ಸಲ್ಮಾನ್ ಖಾನ್ ಅವರಿಗೆ ದುಬೈಗೆ ಹಾರಲು ರಹದಾರಿ ನೀಡಿದೆ.

2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ಅಪರಾಧಿ ಎನಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಜೈಲುವಾಸ ತಪ್ಪಿಸಿಕೊಂಡಿದ್ದರು. [ಸಲ್ಮಾನ್ ಖಾನ್‌ಗೆ ಮಧ್ಯಂತರ ಜಾಮೀನು ಮಂಜೂರು]
ಸೆಷನ್ಸ್ ಕೋರ್ಟ್ ವಿಧಿಸಿದ್ದ 5 ವರ್ಷ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಮೇ.8ರಂದು ಅಮಾನತುಗೊಳಿಸಿತ್ತು. ಅದರೆ, ಪ್ರತಿ ಬಾರಿ ವಿದೇಶಿ ಪ್ರವಾಸ ಕೈಗೊಳ್ಳಬೇಕಾದರೆ ಕೋರ್ಟಿನ ಅನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿತ್ತು.
ಸೆ.28, 2002ರಂದು ಸಲ್ಮಾನ್ ಖಾನ್ ಅವರಿದ್ದ ಲ್ಯಾಂಡ್ ರೋವರ್ ವಾಹನ ಅಡ್ಡಾದಿಡ್ಡಿ ಚಲಿಸಿ ಫುಟ್ ಪಾತ್ ನಲ್ಲಿದ್ದ ಒಬ್ಬ ವ್ಯಕ್ತಿ ಸಾವಿಗೆ ಕಾರಣವಾಗಿತ್ತು. ಘಟನೆಯಲ್ಲಿ ನಾಲ್ವರ ಗಾಯಗೊಂಡಿದ್ದರು.












Click it and Unblock the Notifications