ಗುದ್ದೋಡು ಪ್ರಕರಣ; ನಟ ಸಲ್ಮಾನ್ ಗೆ ಮತ್ತೆ ರಿಲೀಫ್
ನವದೆಹಲಿ, ಸೆ.01: 2002ರ ಗುದ್ದೋಡು ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ನಟ ಸಲ್ಮಾನ್ ಖಾನ್ ಗೆ ಸುಪ್ರೀಂಕೋರ್ಟ್ ರಿಲೀಫ್ ನೀಡಿದೆ. ಸಲ್ಮಾನ್ ಖಾನ್‌ಗೆ ನೀಡಲಾಗಿರುವ ಜಾಮೀನನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸಲ್ಮಾನ್‌ರ ಜಾಮೀನನ್ನು ರದ್ದುಪಡಿಸಬೇಕು ಹಾಗೂ ಜಾಮೀನು ಅರ್ಜಿಯನ್ನು ಮಾಮೂಲಿ ರೀತಿಯಲ್ಲಿ ಸೂಕ್ತ ನ್ಯಾಯಾಲಯ ವಿಚಾರಣೆ ನಡೆಸಬೇಕು ಎಂದು ಮುಂಬೈನ ಮೃತ ಕಾನ್ಸ್ ಟೇಬಲ್ ನ ತಾಯಿ ಅವರು ಅರ್ಜಿ ಹಾಕಿದ್ದರು. ಆದರೆ, ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಸೋಮವಾರ ತಳ್ಳಿ ಹಾಕಿದೆ.[ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]

ಬಾಂಬೆ ಹೈಕೋರ್ಟ್ ಎರಡು ದಿನಗಳಲ್ಲೇ ಸಲ್ಮಾನ್ ಖಾನ್‌ಗೆ ಜಾಮೀನು ನೀಡಿದ್ದು, ಇದೇ ವಿಧಾನದಲ್ಲಿ ಇತರರಿಗೂ ಜಾಮೀನು ಪಡೆಯಲು ಸಾಧ್ಯವಾಗುವಂತೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
2002 ಸೆಪ್ಟಂಬರ್ 28ರಂದು ಅಪಘಾತ ನಡೆಸಿ ಪರಾರಿಯಾದ ಪ್ರಕರಣದಲ್ಲಿ ಮುಂಬೈ ವಿಚಾರಣಾ ನ್ಯಾಯಾಲಯವೊಂದು ಸಲ್ಮಾನ್‌ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. [ಸಲ್ಲೂಗೆ 'ದೇವರಾದ' ಸಾಳ್ವೆ]
ಅದರೆ, ಹೈಕೋರ್ಟ್ ಸಲ್ಮಾನ್‌ಗೆ ಮೇ 8ರಂದು ಜಾಮೀನು ನೀಡಿತ್ತು. ಸೆಷನ್ಸ್ ಕೋರ್ಟ್ ವಿಧಿಸಿದ್ದ 5 ವರ್ಷ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಮೇ.8ರಂದು ಅಮಾನತುಗೊಳಿಸಿತ್ತು. ಅದರೆ, ಪ್ರತಿ ಬಾರಿ ವಿದೇಶಿ ಪ್ರವಾಸ ಕೈಗೊಳ್ಳಬೇಕಾದರೆ ಕೋರ್ಟಿನ ಅನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿತ್ತು
ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದ ಪ್ರಮುಖ ಕಡತಗಳು 2012ರಲ್ಲೇ ಬೆಂಕಿ ಅನಾಹುತದಲ್ಲಿ ಭಸ್ಮವಾಗಿದೆ ಎಂಬ ಅಘಾತಕಾರಿ ಸುದ್ದಿ ಸಲ್ಮಾನ್ ಪಾಲಿಗೆ ವರವಾಗಿದೆ.












Click it and Unblock the Notifications