ವಾಹನ ಸವಾರರಿಗೆ ಗುಡ್‌ನ್ಯೂಸ್: ಕರ್ನಾಟಕದ 66 RTOಗಳಲ್ಲಿ Geo-Fencing ಆಧಾರಿತ mVahan ಅಪ್ಲಿಕೇಷನ್ ಆರಂಭ

Vehicle: ಕರ್ನಾಟಕ ಸರ್ಕಾರವು ವಾಹನ ಸವಾರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಕರ್ನಾಟಕದ 66 ಆರ್‌ಟಿಒ ಕಚೇರಿಗಳಲ್ಲಿ Geo-fencing ಆಧಾರಿತ mVahan ಫಿಟೈಸ್ ಮೊಬೈಲ್ ಅಪ್ಲಿಕೇಷನ್ ಅನುಷ್ಠಾನ ಮಾಡಿದೆ. ಇದರ ಉಪಯೋಗವೇನು ಹಾಗೂ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ರಾಜ್ಯದಲ್ಲಿ ನೋಂದಣಿಯಾಗಿ ಚಾಲ್ತಿಯಲ್ಲಿರುವ ವಾಣಿಜ್ಯ (ಸಾರಿಗೆ) ವಾಹನಗಳ ಅರ್ಹತಾ (ಫಿಟೈಸ್) ಪ್ರಮಾಣ ಪತ್ರ ವಿತರಣೆಯಲ್ಲಿ ನಡೆಯುತ್ತಿದ್ದ ದೋಷಪೂರಿತ ಕ್ರಮಗಳನ್ನು ತಡೆಯುವ ಸಲುವಾಗಿ ಸಾರಿಗೆ ಇಲಾಖೆಯು Geo-fencing ಆಧಾರಿತ mVahan ಫಿಟೈಸ್ ಮೊಬೈಲ್ ಅಪ್ಲಿಕೇಷನ್‌ನನ್ನು ರಾಜ್ಯಾದ್ಯಾಂತ ಎಲ್ಲಾ 66 ಆರ್‌ಟಿಒ ಕಚೇರಿಗಳಲ್ಲಿ ಆರಂಭಿಸಿದೆ.

Vehicle

ಸಾರಿಗೆ ಇಲಾಖೆಯ ರಾಜ್ಯದ ಎಲ್ಲಾ ಆರ್‌ಟಿಒ ಕಚೇರಿಗಳಲ್ಲಿ mVahan ಫಿಟೈಸ್ ಮೊಬೈಲ್ ಅಪ್ಲಿಕೇಷನ್ ಎಂದು ಕರೆಯಲ್ಪಡುವ ಈ ವ್ಯವಸ್ಥೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿರುತ್ತದೆ ಹಾಗೂ ಈ ಮೂಲಕ ವಾಹನ ಮಾಲೀಕರು ಮತ್ತು ಸಾರ್ವಜನಿಕರ ವಿಶ್ವಾಸಾರ್ಹತೆ ಹೆಚ್ಚಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ. ವಾಹನಗಳ ಸಮರ್ಪಕ ಪರಿಶೀಲನೆಯ ನಂತರ ಮಾತ್ರ ಅರ್ಹತಾ (ಫಿಟೈಸ್) ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಸಂಭವನೀಯ ಎಲ್ಲಾ ದೋಷಗಳನ್ನು ನಿವಾರಿಸುವ ಉದ್ದೇಶದಿಂದ ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ.

ಕರ್ನಾಟಕದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ವಾಣಿಜ್ಯ (ಸಾರಿಗೆ) ವಾಹನಗಳು ನೋಂದಣಿಯಾಗಿ ಚಾಲ್ತಿಯಲ್ಲಿದ್ದು, ವಾಹನಗಳ ಅರ್ಹತಾ (ಫಿಟೈಸ್) ಪ್ರಮಾಣ ಪತ್ರ ನೀಡುವಿಕೆಯಲ್ಲಿ ಏಕರೂಪತೆ ಇಲ್ಲ, ಪಾರದರ್ಶಕ ವ್ಯವಸ್ಥೆಯಿಲ್ಲ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಿದ್ದವು. ಇದೀಗ ಈ ಸಮಸ್ಯೆಗಳಿಗೆ ಬ್ರೇಕ್ ಹಾಕುವುದಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ.

mVahan ಫಿಟೈಸ್ ಮೊಬೈಲ್ ಅಪ್ಲಿಕೇಷನ್ ಹೇಗೆ ಉಪಯೋಗ

ಈ ಹಿನ್ನೆಲೆಯಲ್ಲಿ NIC ಅಭಿವೃದ್ಧಿಪಡಿಸಿರುವ ಹೊಸ mVahan ಫಿಟೈಸ್ ಮೊಬೈಲ್ ಅಪ್ಲಿಕೇಷನ್ ಅನ್ನು ಜಾರಿಗೆ ತರಲಾಗಿದೆ. ಈ ಅಪ್ಲಿಕೇಷನ್ ಮೂಲಕ ಪ್ರತಿಯೊಂದು ಆರ್‌ಟಿಒ ಕಚೇರಿಗಳಿಗೆ ವಾಹನಗಳನ್ನು ಭೌತಿಕವಾಗಿ ಪರಿಶೀಲಿಸಲಾಗುವ ಪ್ರದೇಶಗಳನ್ನು ನಿಗದಿಪಡಿಸಿ Geo-fencing ಮಾಡಲಾಗಿದೆ. ನಿಗದಿತ ಪ್ರದೇಶಗಳಿಗೆ ವಾಹನಗಳು ಭೌತಿಕವಾಗಿ ಹಾಜರಾದ ನಂತರವೇ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಾನುಸಾರ ಪರಿಶೀಲನೆ ನಡೆಸಲಾಗುತ್ತದೆ.

ಪರಿಶೀಲನೆಯ ವೇಳೆ ವಾಹನದ ವಿವಿಧ ಆರು (6) ಛಾಯಾಚಿತ್ರಗಳನ್ನು ಕಡ್ಡಾಯವಾಗಿ ತೆಗೆದು ಅಪ್ಲಿಕೇಷನ್‌ನಲ್ಲಿ ಅನುಮೋದನೆಗೊಂಡ ನಂತರವೇ ವಾಹನದ ಅರ್ಹತಾ ಪ್ರಮಾಣ ಪತ್ರ ನೀಡಲಾಗುತ್ತದೆ. ಈಗಾಗಲೇ ನಿಗದಿಪಡಿಸಿರುವ ನಿಗದಿತ ಪ್ರದೇಶಗಳನ್ನು ಹೊರತುಪಡಿಸಿ ಇನ್ನಿತರ ಪ್ರದೇಶಗಳಲ್ಲಿ ವಾಹನದ ಅರ್ಹತಾ ಪ್ರಮಾಣ ಪತ್ರವನ್ನು ನೀಡಲು ಸಾಧ್ಯವಿಲ್ಲ. ವಾಹನದ ಅರ್ಹತಾ ಪ್ರಮಾಣ ಪತ್ರ ಕೋರಿ ಬರುವ ವಾಹನಗಳ ಪೈಕಿ ಕನಿಷ್ಠ ಶೇ.20ರಷ್ಟು ವಾಹನಗಳನ್ನು ಮರುತಪಾಸಣೆ ಮಾಡಲು ನೋಂದಣಿ ಪ್ರಾಧಿಕಾರಗಳಿಗೆ ಸೂಚನೆಯನ್ನು ನೀಡಲಾಗಿದೆ.

mVahan ಫಿಟೈಸ್ ಮೊಬೈಲ್ ಅಪ್ಲಿಕೇಷನ್‌ಅನ್ನು ದೇಶದ ಕೆಲವು ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಪ್ರಸ್ತುತ ಅಳವಡಿಸಿ ಕೊಳ್ಳಲಾಗುತ್ತಿದೆ. ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸಲು ಹಾಗೂ ಸಮಗ್ರ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಈ ವ್ಯವಸ್ಥೆ ಸಹಾಯಕವಾಗಲಿದೆ. ಈ ಉಪಕ್ರಮದ ಮೂಲಕ ದೀರ್ಘಕಾಲದಿಂದ ಅರ್ಹತಾ ಪ್ರಮಾಣ ಪತ್ರ ನೀಡಿಕೆಯಲ್ಲಿ ಕೇಳಿ ಬರುತ್ತಿದ್ದ ಅಪಸ್ವರಕ್ಕೆ ತೆರೆ ಬೀಳಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+