ವಾಸ್ತು ಎಂದರೇನು, ಮನೆ ಕಟ್ಟುವಾಗ ವಾಸ್ತು ಯಾಕೆ ಮುಖ್ಯ: ಪ್ರಯೋಜನ, ಅನಾನುಕೂಲಗಳ ಸಂಪೂರ್ಣ ಮಾಹಿತಿ
ಭಾರತಿಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಕಾಲ ಇತಿಹಾಸ ಹೊಂದಿರುವ ಒಂದು ಪ್ರಮುಖ ಶಾಸ್ತವೇ ಈ ವಾಸ್ತು ಶಾಸ್ತ್ರ. ಮನೆ, ಕಚೇರಿ, ಅಥವಾ ಯಾವುದೇ ಕಟ್ಟಡವನ್ನು ನಿರ್ಮಿಸುವಾಗ ನಮ್ಮ ಪ್ರಕೃತಿಯ ಐದು ಅಂಶಗಳಾದ ಭೂಮಿ, ಗಾಳಿ, ನೀರು ಬೆಂಕಿ ಮತ್ತು ಆಕಾಶದ ಸಮತೋಲನವನ್ನು ಕಾಯ್ದುಕೊಳ್ಳುವುದಕ್ಕೆ ವಾಸ್ತು ಎಂದು ಕರೆಯಲಾಗುತ್ತದೆ.
ವಾಸ್ತು ಎಂಬ ಪದದ ಪೂರ್ಣ ಅರ್ಥ ವಾಸಿಸುವ ಸ್ಥಳ ಅಥವಾ ಭೂಮಿ ಎಂದು ಕರೆಯಲಾಗುತ್ತದೆ. ನಾವು ಕಟ್ಟುವ ಕಟ್ಟಡ ದಿಕ್ಕುಗಳು, ಗಾಳಿ, ಬೆಳಕು, ಕೋಣೆಗಳ ವಿನ್ಯಾಸ ಇವುಗಳ ಹೊಂದಾಣಿಕೆಯಿರುವ ಮನೆಯಲ್ಲಿ ಸಕಾರತ್ಮಕ ಶಕ್ತಿಯನ್ನು ಹೆಚ್ಚಿಸುವಂತೆ ಮಾಡುವುದೇ ವಾಸ್ತು ಶಾಸ್ತ್ರದ ಮುಖ್ಯ ಉದೇಶವಾಗಿದೆ.

ವಾಸ್ತು ಪ್ರಕಾರ ಮನೆಯಲ್ಲಿ ಸಮರ್ಪಕವಾಗಿ ಸೂರ್ಯನ ಬೆಳಕು ಮತ್ತು ಗಾಳಿ ಬರುವಂತೆ ಇರಬೇಕು. ಇದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ನಮ್ಮ ಮನಸ್ಸಿಗೆ ಶಾಂತಿ ದೊರೆಯುತ್ತದೆ. ದಿಕ್ಕುಗಳನ್ನು ನಾವು ಸರಿಯಾಗಿ ಪಾಲಿಸದಿದ್ದರೆ ನಮ್ಮ ಮನೆ ಅಥವಾ ಇನ್ನಿತರ ಕಟ್ಟಡಗಳಲ್ಲಿಯು ನಕರಾತ್ಮಕ ಶಕ್ತಿಗಳು ಹೆಚ್ಚಾಗಬಹುದು ಎಂದು ನಂಬಿಕೆ ಇದೆ.
ವಾಸ್ತು ಸಂಬಂಧಿಸಿದ ಕೆಲವು ಉದಾಹರಣೆಗಳು ಇಲ್ಲಿವೆ
ವಾಸ್ತು ಶಾಸ್ತ್ರದ ಪ್ರಯೋಜನಗಳು
ಈಶಾನ್ಯ ದಿಕ್ಕು ದೇವರ ದಿಕ್ಕು ಎಂದು ಪರಗಣಿಸಲಾಗುತ್ತದೆ. ಈ ದಿಕ್ಕನ್ನು ಯಾವಾಗಲು ಹಗುರವಾಗಿ ಇಟ್ಟು ಕೊಳಬೇಕಾಗುತ್ತದೆ. ಪೂಜಾ ಸ್ಥಳವಾಗಿ ಬಳಸುವುದರಿಂದ ಶಾಂತಿ ಮತ್ತು ಬುದ್ದಿವಂತಿಕೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆಗ್ನೇಯ ದಿಕ್ಕು ಬೆಂಕಿಗೆ ಸಂದಿಸಿದಾಗಿರುತ್ತದೆ. ಈ ದಿಕ್ಕು ಅಡುಗೆಮನೆಗೆ ಸೊಕ್ತವಾದ ಸ್ಥಳ ಎಂದು ವಾಸ್ತುಶಾಸ್ತ್ರದಲ್ಲಿ ಉಲ್ಲೆಖಿಸಲಾಗಿದೆ.
ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ಕುಟುಂಬದಲ್ಲಿ ಐಕ್ಯತೆ, ಆರ್ಥಿಕ ಸ್ಥಿರತೆ ಮತ್ತು ಆರೋಗ್ಯ ಹೆಚ್ಚುತ್ತದೆ ಎಂಬ ನಂಬಿಕೆಯು ಇದೆ. ವ್ಯಾಪಾರ ಸಂಸ್ಥೆಗಳು ಮತ್ತು ಕಚೇರಿಗಳಲ್ಲಿ ವಾಸ್ತುಶಾಸ್ತ್ರದ ತತ್ವಗಳನ್ನು ಪಾಲಿಸಿದರೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ ಮತ್ತು ವೃತ್ತಿಪರ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.
ವಾಸ್ತು ಶಾಸ್ತ್ರದ ಅನಾನುಕೂಲಗಳು
ವಾಸ್ತುವಿಗೆ ಕೆಲವು ಅನಾನುಕೂಲಗಳೂ ಇದ್ದಾವೆ. ಕಟ್ಟಡ ನಿರ್ಮಾಣದ ವೇಳೆ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕೆಲವೊಮ್ಮೆ ಕಷ್ಟಕರ ಆಗಬಹುದು. ನಗರ ಪ್ರದೇಶಗಳಲ್ಲಿ ಜಾಗದ ಕೊರತೆಯಿಂದ ವಾಸ್ತು ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸುವುದು ಸಾಧ್ಯವಾಗದ ಸಂದರ್ಭಗಳೂ ಇರುತ್ತವೆ. ಜೊತೆಗೆ ವಾಸ್ತು ಪ್ರಕಾರ ಬದಲಾವಣೆ ಮಾಡಲು ಹೆಚ್ಚುವರಿ ವೆಚ್ಚವೂ ತಗುಲುತ್ತದೆ.
ನಾವು ಕಟ್ಟುವ ಕಟ್ಟಡವನ್ನು ಗಾಳಿ, ಬೆಳಕು ಮತ್ತು ಸುತ್ತಲಿನ ಪರಿಸರವಾಗಲಿ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡಗಳನ್ನು ನಿರ್ಮಿಸುವುದು ವಾಸ್ತುಶಾಸ್ತ್ರದ ಮೂಲ ತತ್ವವಾಗಿದೆ. ಆದ್ದರಿಂದ ಇಂದಿನ ಆಧುನಿಕ ಕಾಲದಲ್ಲಿಯೂ ಸನೇಕ ಎಂಜನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳು ಈ ತತ್ವವನ್ನು ಪರಿಗಣಿಸಿ ಕಟ್ಟಡಗಳ ವಿನ್ಯಾಸ ಮಾಡುತ್ತಿದ್ದಾರೆ.
ತಪ್ಪು ದಿಕ್ಕಿನಲ್ಲಿ ವಸ್ತುಗಳಿದ್ದರೆ ಉದಾಹಣೆಗೆ ಈಶಾನ್ಯ ದಿಕ್ಕಿನಲ್ಲಿ ಶೌಚಾಲಯ ಇದರಿಂದ ನಕಾರತ್ಮಕ ಪರಿಣಾಮಗಳು ಆಗುತ್ತವೆ. ಈ ತರಹದ ತೊಂದರೆಗಳು ಸರಿಪಡಿಸಲು ವಾಸ್ತು ತಜ್ಞರ ಸಲಹೆ ಮತ್ತು ಪರಿಹಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.












Click it and Unblock the Notifications