• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಕ್ಕೆ ಸುಬ್ರಮಣ್ಯದಲ್ಲಿ ಅರ್ಚಕರ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

|

ಮಂಗಳೂರು, ಜೂನ್ 02 : ಕುಕ್ಕೆ ಸುಬ್ರಮಣ್ಯದಲ್ಲಿ ದುಷ್ಕರ್ಮಿಯೊಬ್ಬರು ಅರ್ಚಕರ ಮೇಲೆ ಹಲ್ಲೆ ನಡೆಸಿದ್ದಾರೆ. ದೇವಸ್ಥಾನ ಮತ್ತು ಮಠದ ನಡುವೆ ಕಿತ್ತಾಟ ನಡೆಯುತ್ತಿದ್ದು,ಇದರಿಂದಲೇ ಹಲ್ಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಅರ್ಚಕ ಕುಮಾರ್ ಬನ್ನಿಂತಾಯ (61) ಅವರ ಮೇಲೆ ಹಲ್ಲೆ ನಡೆದಿದೆ. ಶನಿವಾರ ರಾತ್ರಿ ದೇವಸ್ಥಾನದ ಹೊರಗೆ ಅರ್ಚಕ ನಿಂತಿದ್ದಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕುಕ್ಕೆ ಸುಬ್ರಮಣ್ಯ ಚಿನ್ನದ ರಥ ವಿವಾದ : ಸರ್ಕಾರದ ಸ್ಪಷ್ಟನೆ

ಸರ್ಪ ಸಂಸ್ಕಾರ ವಿಷಯಕ್ಕೆ ಮಠ ಮತ್ತು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ನಡುವೆ ಗಲಾಟೆ ನಡೆದಿತ್ತು. ಇದರಿಂದಾಗಿ ದೇವಸ್ಥಾನ ಮತ್ತು ಮಠದ ಸಿಬ್ಬಂದಿ ನಡುವೆ ಭಿನ್ನಾಭಿಪ್ರಾಯವೂ ಉಂಟಾಗಿತ್ತು. ದೇವಾಲಯದ ಅರ್ಚಕ ಕುಮಾರ್ ಅವರು ಮಠದ ಪರವಾಗಿ ನಿಂತಿದ್ದರು. ಆದ್ದರಿಂದ ಹಲ್ಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಸುಬ್ರಹ್ಮಣ್ಯದಲ್ಲಿ ನೂರಾರು ಮೀನುಗಳ ಮಾರಣ ಹೋಮ

ಪಳನಿಸ್ವಾಮಿ ಎಂಬುವವರು ಸರ್ಪ ಸಂಸ್ಕಾರ ಮಾಡಿಸಲು 7 ಸಾವಿರ ರೂ. ನೀಡಿ ಮಠದಿಂದ ರಶೀದಿ ಪಡೆದಿದ್ದರು. ಇದನ್ನು ದೇವಸ್ಥಾನದಲ್ಲಿ ನೀಡಿದಾಗ, ಮಠಕ್ಕೂ ನಮಗೂ ಸಂಬಂಧಿವಿಲ್ಲ ಎಂದು ಹೇಳಿ ವಾಪಸ್ ಕಳಿಸಿದ್ದಾರೆ.

ಸುಬ್ರಹ್ಮಣ್ಯ ದೇಗುಲದಲ್ಲಿ ಅವಘಡ: ಕಳಚಿ ಬಿದ್ದ ಗರುಡ, ಕಿರುಗಂಟೆ

ಇದನ್ನು ಮಠದ ಸಿಬ್ಬಂದಿ ಬಳಿ ಪ್ರಶ್ನೆ ಮಾಡಿದಾಗ ಹಣ ವಾಪಸ್ ಕೊಡಲು ನಿರಾಕರಿಸಿದ್ದಾರೆ. ಆಗ ಪಳನಿಸ್ವಾಮಿ ಅವರು ಕುಕ್ಕೆ ಸುಬ್ರಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಮಠ ಮತ್ತು ದೇವಾಲಯದ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ.

English summary
Unknow person attacked on priest in Kukke Subramanya temple. Priest Kumar (61) admitted to the hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X