ಸುಬ್ರಹ್ಮಣ್ಯದಲ್ಲಿ ನೂರಾರು ಮೀನುಗಳ ಮಾರಣ ಹೋಮ: ವಿಷ ಬೆರಕೆ ಶಂಕೆ
ಮಂಗಳೂರು, ಫೆಬ್ರವರಿ 11:ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಕ್ಕದಲ್ಲೇ ಹರಿಯುವ ಪುಣ್ಯನದಿ ದರ್ಪಣ ತೀರ್ಥದಲ್ಲಿ ನೂರಾರು ಮೀನುಗಳು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದರ್ಪಣ ತೀರ್ಥ ನದಿಯ ಕೆಳಭಾಗದಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ನದಿ ನೀರಿಗೆ ಕ್ರಿಮಿನಾಶಕ ಮಿಶ್ರಣ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲೇ ಇರುವ ದರ್ಪಣ ತೀರ್ಥ ನದಿ ಕುಮಾರಧಾರಾದ ಉಪನದಿ. ಕುಮಾರ ಪರ್ವತದಿಂದ ಹರಿದು ಬರುವ ಈ ನದಿಯೂ ಆದಿಸುಬ್ರಹ್ಮಣ್ಯ ಭಾಗದ ಮೂಲಕ ದೇವಸ್ಥಾನದ ಪಕ್ಕದಲ್ಲೇ ಹರಿದು ಕುಮಾರಧಾರಾ ಸೇರುತ್ತದೆ.ಇವೆರಡೂ ಸೇರಿ ಹರಿಯುವ ರುದ್ರಪಾದ ಬಳಿ ನದಿ ನೀರಿನಲ್ಲಿ ಮೀನುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.

ಪರಿಸರದಲ್ಲಿ ಮೀನುಗಳು ಸತ್ತು ದುರ್ವಾಸನೆ ಹರಡಿವೆ. ನದಿ ನೀರು ಬತ್ತಿ ಕಲುಷಿತಗೊಂಡು ಜಲಚರಗಳು ಸತ್ತಿರುವ ಸಂಶಯವೂ ಇದೆ. ಬಿಸಿಲ ಬೇಗೆ ಕೂಡ ಹೆಚ್ಚಾಗಿರುವ ಕಾರಣ ನದಿಯಲ್ಲಿ ನೀರಿನ ಪ್ರಮಾಣ ಕೂಡ ಕಡಿಮೆಗೊಂಡಿದೆ. ತಾಪದಿಂದ ನೀರು ಬಿಸಿಗೊಂಡು ಆಮ್ಲಜನಕ ಕಡಿಮೆಯಾಗಿ ಮೀನುಗಳು ಸತ್ತಿರುವ ಬಗ್ಗೆಯೂ ಸಂಶಯ ವ್ಯಕ್ತಪಡಿಸಲಾಗಿದೆ.












Click it and Unblock the Notifications