ಅಂಧರ ಭವಿಷ್ಯ ಕಟ್ಟುತ್ತಿರುವ 'ಅಮೃತ ಬಿಂದು'

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಮೇ 18: 'ನೇತ್ರದಾನ ಮಹಾದಾನ' ಎಂದು ದೊಡ್ಡವರು ಹೇಳಿದ್ದಾರೆ. ಇದೇ ಮಾತಿನಂತೆ ನಟರಾದ ಡಾ. ರಾಜ್ ಕುಮಾರ್, ಲೊಕೇಶ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು ತಮ್ಮ ಸಾವಿನ ನಂತರ ಅಂಧರಿಗೆ ತಮ್ಮ ಕಣ್ಣುಗಳನ್ನು ದಾನ ಮಾಡಿ ಇತರರಿಗೆ ಮಾದರಿಯಾದವರು. ಇಷ್ಟಾದರೂ ನಮ್ಮ ಸುತ್ತಮುತ್ತ ಅಸಂಖ್ಯಾತ ಕುರುಡರಿದ್ದಾರೆ.

ಅದರಲ್ಲೂ ಎಲ್ಲಾ ಅಂಗಗಳು ಸರಿಯಾಗಿದ್ದ ನಮ್ಮನ್ನು ಮೀರಿಸುವಂತಹ ಅಪ್ರತಿಮ ಪ್ರತಿಭೆಗಳು ಅವರಲ್ಲಿದೆ. ಇಂತಹ ಪ್ರತಿಭೆಗಳನ್ನು ಗುರುತಿಸುವಂತಹ ಸಂಸ್ಥೆಯೊಂದು ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ. ವಿಶೇಷ ಅಂದರೆ ಅದನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಿದ್ದಾರೆ.[ಕರ್ನಾಟಕ ಪಿಯುಸಿ ಫಲಿತಾಂಶ: ಇವರ ಫಲಿತಾಂಶ ಕಂಡು ಅಂಧತ್ವವೂ ನಾಚಿತು!]

ಪ್ರಶಾಂತ್.ಎನ್. ರಾವ್ ಎಂಬುವವರು 2012ರಲ್ಲಿ ಬೆಂಗಳೂರಿನಲ್ಲಿ 'ಅಮೃತಬಿಂದು' ಎಂಬ ಸರ್ಕಾರೇತರ ಸಂಸ್ಥೆಯೊಂದನ್ನು ಸ್ಥಾಪಿಸಿ ಆ ಮೂಲಕ ಅಂಧ ಮಕ್ಕಳಿಗೆ ತಮ್ಮಿಂದಾದ ಸಹಾಯಹಸ್ತ ಚಾಚುತ್ತಿದ್ದಾರೆ. ಅದೀಗ ಮಂಗಳೂರಿನಲ್ಲೂ ಕೆಲಸ ನಿರ್ವಹಿಸುತ್ತಿದೆ. ಇವರಿಗೆ ಬೆನ್ನೆಲುಬಾಗಿ ಬಿಂದು, ಅಕ್ಷತಾ, ಅನೂಪ್, ಭಾಸ್ಕರ್, ಕಾರ್ತಿಕ್ ಮತ್ತಿತರರು ಸೇರಿ ತಮ್ಮ ಬಿಡುವಿಲ್ಲದ ಚಟುವಟಿಕೆಗಳ ನಡುವೆ ಇವರಿಗೆ ಸಹಾಯ ಮಾಡುತ್ತಿದ್ದಾರೆ.[ಕಣ್ಣು ಕಾಣದಿದ್ದರೇನಂತೆ, ಚೆಸ್ ಬೋರ್ಡ್ ಮೇಲೆ ಇವರೇ ಚಾಂಪಿಯನ್]

ಈ ಪ್ರತಿಭಾವಂತ ಅಂಧಮಕ್ಕಳು ಪರೀಕ್ಷೆ ಬರೆಯಲು ಅನುವು ಮಾಡಿಕೊಡುವ ದೃಷ್ಟಿಯಿಂದ ಈ ಸಂಸ್ಥೆಯು ರಾಜ್ಯಾದ್ಯಾಂತ ಪ್ರಚಾರ ನಡೆಸಿ ಮಕ್ಕಳ ಪರೀಕ್ಷಾ ಸಮಯದಲ್ಲಿ ಅವರಿಗೆ ಪರೀಕ್ಷೆಗಳನ್ನು ಬರೆದುಕೊಡುವ ನಿಟ್ಟಿನಲ್ಲಿ ಸ್ವಯಂಸೇವಕರನ್ನು ಹುಡುಕುತ್ತಿದ್ದಾರೆ. ಈಗಾಗಲೇ 1500ಕ್ಕಿಂತಲೂ ಅಧಿಕ ಸ್ವಯಂ ಸೇವಕರು ಈ ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕೆಲಸ ಕೇವಲ ಅಂಧ ಮಕ್ಕಳು ಪರೀಕ್ಷೆಗೆ ಓದಿ ಅದನ್ನು ಪರೀಕ್ಷೆಯಲ್ಲಿ ಹೇಳಿದಂತೆ ಬರೆಯುವ ಕೆಲಸವನ್ನು ಮಾಡುವುದು.

ಸೇವೆಗೆ ಕೈಜೋಡಿಸಿದವರು

ಸೇವೆಗೆ ಕೈಜೋಡಿಸಿದವರು

ಈಗಾಗಲೇ ಮಂಗಳೂರಿನಿಂದ 20ಕ್ಕೂ ಅಧಿಕ ಸ್ವಯಂಸೇವಕರಿದ್ದಾರೆ. ಇದರ ವಿಶೇಷ ಎಂದರೆ ಹಿರಿಯ ನಾಗರೀಕರು, ಇಂಜಿನಿಯರ್, ಡಾಕ್ಟರ್, ಓದುವ ವಿದ್ಯಾರ್ಥಿಗಳು ಹೀಗೆ ಹಲವರು ಸ್ವಯಂಸೇವಕರಾಗಿದ್ದಾರೆ. ಈ ಅಂಧ ವಿದ್ಯಾರ್ಥಿಗಳು ಶೈಕ್ಷಣಿಕ ಅಥವಾ ಸರ್ಕಾರಿ ಸೇವೆಗೆ ಬರೆಯುವ ಯಾವುದೇ ಪರೀಕ್ಷೆಗಳನ್ನು ಸ್ವಯಂಸೇವಕರ ಮೂಲಕ ಬರೆಸಬಹುದಾಗಿದೆ.ಪ್ರಶಾಂತ್.ಎನ್. ರಾವ್ [ಅಂಧರ ಟಿ20 ವಿಶ್ವಕಪ್: ಕಿವೀಸ್ ಕಿವಿ ಹಿಂಡಿದ ಭಾರತ]

ಸುಪ್ರೀಂ ಮಹತ್ತರ ತೀರ್ಪು

ಸುಪ್ರೀಂ ಮಹತ್ತರ ತೀರ್ಪು

ಅಂಧಮಕ್ಕಳು ಬೇರೆಯವರಿಂದ ಪರೀಕ್ಷೆ ಬರೆಯುವ ಕುರಿತು ಉಂಟಾದ ಗೊಂದಲಕ್ಕೆ ತೆರೆ ಎಳೆಯುವ ದೃಷ್ಟಿಯಿಂದ 1994ರಲ್ಲಿ ಮೊದಲ ಬಾರಿ ಸುಪ್ರಿಂ ಕೋರ್ಟ್ ತೀರ್ಪು ನೀಡಿತ್ತು. ಅದರಲ್ಲಿ ಕೆಲವು ಷರತ್ತು ವಿಧಿಸಿತ್ತು. ಮುಖ್ಯವಾಗಿ ಪರೀಕ್ಷೆ ಬರೆಯುವ ಅಂಧ ವಿದ್ಯಾರ್ಥಿಯ ಸಮಾನಂತರವಾದ ಅಂದರೆ ಅಂಧ ವಿದ್ಯಾರ್ಥಿಯು ವಿಜ್ಞಾನ ವಿದ್ಯಾರ್ಥಿಯಾಗಿದ್ದರೆ ಅಂತಹದೇ ವಿಷಯದ ವಿದ್ಯಾರ್ಥಿ ಪರೀಕ್ಷೆ ಬರೆಯಬೇಕಿತ್ತು. ಈ ತೀರ್ಪಿನ ಬಗ್ಗೆ ಅಪಸ್ವರ ಬಂದ ಹಿನ್ನೆಲೆಯಲ್ಲಿ 2003ರಲ್ಲಿ ಈ ಪರೀಕ್ಷೆಗಳನ್ನು ಯಾರೂ ಬೇಕಾದರೂ ಬರೆಯಬಹುದೆಂಬ ತೀರ್ಪು ಹೊರಡಿಸಿತ್ತು.

ಶಾಲೆಗಳಿಂದ ಸಿಗುತ್ತಿಲ್ಲ ಅನುಮತಿ

ಶಾಲೆಗಳಿಂದ ಸಿಗುತ್ತಿಲ್ಲ ಅನುಮತಿ

ಆದ್ದರಿಂದ ಈ ಸಂಸ್ಥೆ ಮೂಲಕ ಇಂತಹ ಅಂಧ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮುಂದಾದರೆ ಅಂಥವರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡುವುದಿಲ್ಲ. ಅವರು ಸುಪ್ರೀಂ ಕೋರ್ಟ್ ಮೊದಲ ತೀರ್ಪು ಉಲ್ಲೇಖಿಸುತ್ತಾರೆ. ಕೆಲವೊಮ್ಮೆ ದೇಶದ ಮುಖ್ಯ ಸರ್ಕಾರೇತರ ಸಂಸ್ಥೆಯಾದ ನ್ಯಾಷನಲ್ ಫೆಡರೇಷನ್ ಆಫ್ ಬ್ಲೈಂಡ್ ಅಧಿಕಾರಿಗಳ ಮೂಲಕ ತಿಳಿಸಿದರೆ ಪರೀಕ್ಷೆಗೆ ಅನುಮತಿ ಕೊಡುವುದುಂಟು ಎನ್ನುತ್ತಾರೆ ಅಮೃತ ಬಿಂದು ಸಂಸ್ಥೆಯವರು.ಅಮೃತ.

ಅರ್ಧದಲ್ಲಿ ಕೈ ಕೊಡುತ್ತಾರೆ:

ಅರ್ಧದಲ್ಲಿ ಕೈ ಕೊಡುತ್ತಾರೆ:

ಅಂಧಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವ ರಾಜ್ಯ ಎಂದರೆ ತಮಿಳುನಾಡು. ಅಲ್ಲಿ ಸಂಬಂಧಪಟ್ಟ ಶಿಕ್ಷಕರೇ ತಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ಕರೆದು ಪರೀಕ್ಷೆ ಬರೆಸುತ್ತಾರೆ. ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳು ಇವರಿಗೆ ಕೈಜೋಡಿಸುತ್ತಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ಪ್ರತಿಭಾವಂತ ಅಂಧಮಕ್ಕಳನ್ನು ಕೇಳುವವರಿಲ್ಲ. ಅಕ್ಷತ

ಈ ಬಗ್ಗೆ ಅಂಧ ಮಕ್ಕಳನ್ನೇ ಕೇಳಿದರೆ, 'ನಾವು ಪರೀಕ್ಷೆ ಬರೆಯಲು ಸಹಾಯ ಕೇಳಿದರೆ ಕೆಲವರು 'ಆಯ್ತು' ಎಂದು ಪರೀಕ್ಷೆ ಸಮಯದಲ್ಲಿ ಕೈಕೊಡುತ್ತಾರೆ. ಇದರಿಂದ ನಮ್ಮ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ' ಎಂದು ಅಳಲು ತೋಡಿಕೊಳ್ಳುತ್ತಾರೆ.

ನಯನದಿಂದ ಜಾಗೃತಿ

ನಯನದಿಂದ ಜಾಗೃತಿ

ಈ ಸಂಸ್ಥೆಯು ಅಂಧ ವಿದ್ಯಾರ್ಥಿಗಳಿಗಾಗಿ ರಾಜ್ಯದ ವಿವಿಧ ಕೇಂದ್ರಗಳಾದ ಮಂಗಳೂರು, ಮೈಸೂರು, ಬೆಂಗಳೂರು, ಬೆಳಗಾವಿ, ಹುಬ್ಬಳಿ, ದಾವಣಗೆರೆ ಹಾಗೂ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಸೇರಿದಂತೆ ವಿವಿಧೆಡೆ 'ನಯನ' ಎಂಬ ವಿಶೇಷ ಕಾರ್ಯಕ್ರಮ ಏರ್ಪಡಿಸುತ್ತಿದೆ. ಇದರ ಮೂಲಕ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸ್ವಯಂ ಸೇವಕರನ್ನು ಹೆಚ್ಚಿಸುವ ನಿಟ್ಟಿನಲ್ಲಿ www.amruthabindu.in ಎಂಬ ವೆಬ್‍ಸೈಟ್ ತೆರೆದಿದ್ದಾರೆ. ಈ ಮೂಲಕ ಸಹೃದಯಿಗಳು ಅವರಿಗೆ ಸಹಾಯಹಸ್ತ ಮಾಡುವ ಮೂಲಕ ಭವಿಷ್ಯದ ಕನಸುಗಳಿಗೆ ನೀರೆರೆಯುವ ಕೆಲಸ ಮಾಡಲಿ ಎಂಬುದು ನಮ್ಮ ಹಾರೈಕೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Bangaluru based NGO, named Amruta Bindu, has established to serve blind students by helping them to write examination.
Please Wait while comments are loading...