ಅಂಧರ ಟಿ20 ವಿಶ್ವಕಪ್: ಕಿವೀಸ್ ಕಿವಿ ಹಿಂಡಿದ ಭಾರತ

Posted By: Ramesh
Subscribe to Oneindia Kannada

ಭುವನೇಶ್ವರ, ಫೆಬ್ರವರಿ. 08 : ಅಂಧರ ಟ್ವೆಂಟಿ-20 ವಿಶ್ವಕಪ್‌ ನಲ್ಲಿ ಸತತ ಎರಡನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಭಾರತ ತಂಡ ಗೆಲುವಿನ ನಾಗಾಲೋಟ ಮುಂದುವರಿಸಿದೆ.

ಮಂಗಳವಾರ ಕೆಐಐಟಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಗೆಲುವಿನ ನಗೆ ಬೀರಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 136ರನ್ ಕಲೆಹಾಕಿತು.[ಅಂಧರ ಟಿ20 ವಿಶ್ವಕಪ್: ಆಸೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ]

T20 World Cup for Blind: India thrash New Zealand for 7th win

ಈ ಮೊತ್ತವನ್ನು ಬೆನ್ನಟ್ಟಿದ ಭಾರತ ಕೇವಲ 1 ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ಇದರಿಂದ ಭಾರತ ಈ ಟೂರ್ನಿಯಲ್ಲಿ ಸತತ ಏಳನೇ ಗೆಲವು ಸಾಧಿಸಿತು.[ಅಂಧರ ಟಿ20 ವಿಶ್ವಕಪ್ : ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ]

ಭಾರತ ಪರ ಸುಖರಾಮ್ ಮಝಿ ಔಟಾಗದೆ 25 ಎಸೆತಗಳಲ್ಲಿ 11ಬೌಂಡರಿಗಳ ನೆರವಿನಿಂದ 56 ಮತ್ತು ನಾಯಕ ಅಜಯ್ ಕುಮಾರ್‌ ರೆಡ್ಡಿ ಔಟಾಗದೆ 28 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ 75 ರನ್ ಬಾರಿಸಿ ತಂಡದ ಗೆಲುವಿನ ರೂವಾರಿಗಳಾದರು. ಸುಖರಾಮ್ ಮಝಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್‌
ನ್ಯೂಜಿಲೆಂಡ್: 20 ಓವರ್‌ ಗಳಲ್ಲಿ 6 ವಿಕೆಟ್‌ಗೆ 136.
ಭಾರತ: 9 ಓವರ್‌ ಗಳಲ್ಲಿ 1 ವಿಕೆಟ್‌ಗೆ 140.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Continuing their dominance in the ongoing T20 cricket World Cup for the Blind, defending champions India registered their seventh win of the tournament by defeating New Zealand by nine wickets at the KIIT Stadium here on Tuesday (February 7).
Please Wait while comments are loading...