ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್: ಒಂದು ಆಟೋ ಒಂದು ಕುಟುಂಬ 27 ಪ್ರಯಾಣಿಕರು - ಪೊಲೀಸರು ಶಾಕ್

|
Google Oneindia Kannada News

ಒಂದು ಆಟೋದಲ್ಲಿ ಸಾಮಾನ್ಯವಾಗಿ ಮೂರು ಜನ ಸುಖಕರವಾಗಿ ಪ್ರಯಾಣ ಮಾಡಬಹುದು. ಇಕ್ಕಟ್ಟಾದರೂ ಸಹ ಗಂಡ-ಹೆಂಡತಿ ಇಬ್ಬರು ಅಥವಾ ಮೂವರು ಮಕ್ಕಳು ಪ್ರಯಾಣ ಮಾಡಿದರೆ ಹೆಚ್ಚು. ಅಮ್ಮಮ್ಮಾ ಅಂದರೆ ಪೊಲೀಸರ ಕಣ್ಣು ತಪ್ಪಿಸಿ ಹತ್ತು ಜನರ ಒಳಗೆ ಪ್ರಯಾಣ ಮಾಡಬಹುದೇನೋ. ಆದರೆ ಇಲ್ಲೊಂದು ಆಟೋದಲ್ಲಿ ಚಾಲಕ 27 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿರುವುದನ್ನು ಕಂಡು ಉತ್ತರಪ್ರದೇಶದ ಪೊಲೀಸರು ದಿಗ್ಭ್ರಮೆಗೊಂಡಿದ್ದಾರೆ.

ಆಟೋರಿಕ್ಷವನ್ನು ತಡೆದ ಉತ್ತರ ಪ್ರದೇಶದ ಪೊಲೀಸರೊಬ್ಬರು ಆಶ್ಚರ್ಯಗೊಂಡಿದ್ದಾರೆ. ಪೊಲೀಸರು ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ಎಣಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಧ್ಯ ಉತ್ತರ ಪ್ರದೇಶದ ಫತೇಪುರದಲ್ಲಿ ಈ ಘಟನೆ ವರದಿಯಾಗಿದೆ. ಆಟೋರಿಕ್ಷಾವು ಆರು ಜನರ ಸಾಮರ್ಥ್ಯವನ್ನು ಹೊಂದಿದೆ. ಆದರೆ ಅದನ್ನು ನಿಲ್ಲಿಸಿದಾಗ ವಾಹನದಲ್ಲಿ ವೃದ್ಧರು ಮತ್ತು ಮಕ್ಕಳು ಸೇರಿದಂತೆ ಒಟ್ಟು 27 (ಚಾಲಕನನ್ನು ಹೊರತುಪಡಿಸಿ) ಜನ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ದಾರಿಹೋಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಅತಿ ವೇಗದಿಂದ ಬಂದ ವಾಹನವನ್ನು ಪೊಲೀಸರು ಹಿಂಬಾಲಿಸಿದ್ದಾರೆ. ಜೊತೆಗೆ ಫತೇಪುರದ ಬಿಂಡ್ಕಿ ಕೊಟ್ವಾಲಿ ಪ್ರದೇಶದ ಬಳಿ ಆಟೋರಿಕ್ಷಾವನ್ನು ನಿಲ್ಲಿಸಿದ್ದಾರೆ. ಪೊಲೀಸರು ಅಂತಿಮವಾಗಿ ಪ್ರಯಾಣಿಕರನ್ನು ಕೆಳಗಿಳಿಸಲು ಕೇಳಿದಾಗ, ಎರಡು ಡಜನ್‌ಗಿಂತಲೂ ಹೆಚ್ಚು ಜನರು ಅದರಿಂದ ಹೊರಬರುವುದನ್ನು ಕಂಡು ದಿಗ್ಭ್ರಮೆಗೊಂಡರು ಎಂದು ವರದಿಗಳು ತಿಳಿಸಿವೆ. ಘಟನೆ ಬಳಿಕ ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.

Viral: One Auto, One Family, 27 Passengers - Police Shocked

ಎರಡು ತಿಂಗಳ ಹಿಂದೆ ಆಟೋ ಛಾವಣಿಯ ಮೇಲೆ ಉದ್ಯಾನವನ್ನು ಹೊಂದಿರುವ ಆಟೋರಿಕ್ಷಾದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಆಲೋಚನೆಯೊಂದಿಗೆ ಚಾಲಕ ಟ್ವಿಟರ್ ಮತ್ತು ಇತರ ವೇದಿಕೆಗಳಲ್ಲಿ ಭಾರಿ ಪ್ರಶಂಸೆ ಗಳಿಸಿದರು. ಸುಡುವ ಬೇಸಿಗೆಯ ಬೇಗೆಯಲ್ಲಿ ತನ್ನನ್ನು ಮತ್ತು ತನ್ನ ಪ್ರಯಾಣಿಕರನ್ನು ತಂಪಾಗಿರಿಸಲು ಚಾಲಕ ಮಹೇಂದ್ರ ಕುಮಾರ್ ಈ ಸೃಜನಶೀಲ ಉಪಾಯವನ್ನು ಮಾಡಿದ್ದರು.

ಸುದ್ದಿ ಸಂಸ್ಥೆ AFP ವರದಿಯ ಪ್ರಕಾರ, ಕುಮಾರ್ ಅವರು ತಮ್ಮ ಆಟೋ ಛಾವಣಿಯ ಮೇಲಿನ ಉದ್ಯಾನದಲ್ಲಿ 20ಕ್ಕೂ ಹೆಚ್ಚು ವಿವಿಧ ಸಸಿಗಳು, ತರಕಾರಿ ಗಿಡಗಳನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಆಟೋ ಉದ್ಯಾನದಲ್ಲಿ ಟೊಮೆಟೊ ಮತ್ತು ರಾಗಿ ಮುಂತಾದ ಬೆಳೆಗಳನ್ನು ಸಹ ನೆಟ್ಟಿದ್ದಾರೆ.

Viral: One Auto, One Family, 27 Passengers - Police Shocked

ಕುಮಾರ್ ಅವರು ಮೊದಲು ಛಾವಣಿಗೆ ಚಾಪೆ ಹಾಕಿ ನಂತರ ಗೋಣಿಚೀಲದಲ್ಲಿ ಮಣ್ಣು ಹಾಕಿ ಗಿಡಗಳನ್ನು ಬೆಳೆಸಿದ್ದಾರೆ. ಅವರು ಸಸ್ಯಗಳನ್ನು ಹಸಿರು ಮತ್ತು ಆರೋಗ್ಯಕರವಾಗಿಡಲು ದಿನಕ್ಕೆ ಎರಡು ಬಾರಿ ನೀರು ಹಾಕುತ್ತಾರೆ ಎಂದು ಎಎಫ್‌ಪಿ ವರದಿ ತಿಳಿಸಿದೆ.

English summary
A policeman in Uttar Pradesh was left stunned after stopping an autorickshaw to find that the driver was carrying 27 passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X