ಕೊಪ್ಪಳದ ಮತದಾರರ ಪಟ್ಟಿ ಅಂತಿಮ, ಕ್ಷೇತ್ರವಾರು ಮತದಾರರು

ಕೊಪ್ಪಳ, ಮಾರ್ಚ್ 07 : ಕೊಪ್ಪಳ ಜಿಲ್ಲೆಯ ಮತದಾರರ ಪಟ್ಟಿ ಅಂತಿಮವಾಗಿದೆ. ಜಿಲ್ಲೆಯಲ್ಲಿ ಒಟ್ಟು 1069199 ಮತದಾರರಿದ್ದಾರೆ. ಮತ್ತೊಮ್ಮೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಹೇಳಿದರು.

ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ, ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಸೇರಿ 5 ವಿಧಾನಸಭಾ ಕ್ಷೇತ್ರಗಳಿವೆ. ಜಿಲ್ಲೆಯಲ್ಲಿ 535874 ಪುರುಷ, 533325 ಮಹಿಳಾ ಸೇರಿದಂತೆ ಒಟ್ಟು 1069199 ಮತದಾರರಿದ್ದಾರೆ.

Koppal district voters list finalized

ಕ್ಷೇತ್ರವಾರು ಮತದಾರರ ವಿವರ : ಕುಷ್ಟಗಿ ಕ್ಷೇತ್ರದಲ್ಲಿ 113134 (ಪುರುಷ), 110531(ಮಹಿಳೆ) ಸೇರಿ 223665 ಮತದಾರರಿದ್ದಾರೆ. ಕನಕಗಿರಿ ಕ್ಷೇತ್ರದಲ್ಲಿ 104085 (ಪುರುಷ), 105779 (ಮಹಿಳೆ) ಸೇರಿ 209864 ಮತದಾರರು. ಗಂಗಾವತಿ ಕ್ಷೇತ್ರದಲ್ಲಿ 96178 (ಪುರುಷ), 96538 (ಮಹಿಳೆ) ಸೇರಿ 192716ಮತದಾರರಿದ್ದಾರೆ.

ಯಲಬುರ್ಗಾ ಕ್ಷೇತ್ರದಲ್ಲಿ 103313 (ಪುರುಷ), 101213 (ಮಹಿಳೆ) ಸೇರಿ 204526 ಮತದಾರರು. ಕೊಪ್ಪಳದಲ್ಲಿ 119164 (ಪುರುಷ), 119264 (ಮಹಿಳೆ) ಸೇರಿ 238428 ಮತದಾರರಿದ್ದಾರೆ.

ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದವರೆಗೂ ಇದಕ್ಕೆ ಅವಕಾಶವಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+