ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡದಲ್ಲಿ ಈ ಬಾರಿ 22,513 ಹೊಸ ಮತದಾರರು

|
Google Oneindia Kannada News

ಮಂಗಳೂರು, ಮಾರ್ಚ್ 5: ಮುಂಬರುವ ವಿಧಾನಸಭೆ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಈಗಾಗಲೇ ಮತದಾರರ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ದಪಡಿಸಿದ್ದು ಜಿಲ್ಲೆಯಲ್ಲಿ ಒಟ್ಟು 16,66,814 ಮತದಾರರಿದ್ದಾರೆ. ಇವರಲ್ಲಿ 8,20,764 ಪುರುಷ ಹಾಗೂ 8,46,050 ಮಂದಿ ಮಹಿಳಾ ಮತದಾರರಾಗಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ ಒಟ್ಟು 22,513 ಹೊಸ ಮತದಾರರು ಸೇರ್ಪಡೆಗೊಂಡಿದ್ದು, ಇದರಲ್ಲಿ 10,461 ಪುರುಷ ಮತ್ತು 12,053 ಮಹಿಳಾ ಮತದಾರರಾಗಿದ್ದಾರೆ.

ಎಲ್ಲಾ ಅಭ್ಯರ್ಥಿಗಳನ್ನು ರಿಜೆಕ್ಟ್ ಮಾಡಲು, ಬ್ರಹ್ಮಾಸ್ತ್ರ ಬಳಸಿಎಲ್ಲಾ ಅಭ್ಯರ್ಥಿಗಳನ್ನು ರಿಜೆಕ್ಟ್ ಮಾಡಲು, ಬ್ರಹ್ಮಾಸ್ತ್ರ ಬಳಸಿ

ನೋಂದಣಿಯಾದ ಮತದಾರರ ಸಂಖ್ಯೆ ಮತ್ತು 2018 ರ ಅಂದಾಜು ಜನಸಂಖ್ಯೆಯ ವಿಶ್ಲೇಷಣೆ ನಡೆಸಿದರೆ ಕ್ರಮವಾಗಿ ಜಿಲ್ಲೆಯಲ್ಲಿ ಶೇ. 73.02 ಪುರುಷರು ಮತ್ತು ಶೇ. 73.77 ಮಹಿಳೆಯರು ಸೇರಿ ಒಟ್ಟು ಶೇ. 73.40 ಜನರು ಮತದಾನದ ಹಕ್ಕು ಹೊಂದಿದ್ದಾರೆ.

Dakshina Kannada district administration prepared for assembly election

ಜಿಲ್ಲೆಯಲ್ಲಿ ಒಟ್ಟು 9,289 ವಿಶೇಷ ಚೇತನ ಮತದಾರರಿದ್ದು ಮುಂಬರುವ ಚುನಾವಣೆಯಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಕಳೆದ ಬಾರಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ 1766 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆದರೆ ಈ ಬಾರಿ ಹೆಚ್ಚುವರಿ ಮತದಾರರು ಸೇರ್ಪಡೆಗೊಂಡಿರುವ ಹಿನ್ನಲೆಯಲ್ಲಿ 24 ಹೆಚ್ಚುವರಿ ಮತಗಟ್ಟೆಗಳನ್ನು ಗುರುತಿಸಿ 1790 ಮತಗಟ್ಟೆಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಬೆಂಗಳೂರು ದಕ್ಷಿಣದಲ್ಲಿ ಹೆಚ್ಚು, ಶೃಂಗೇರಿಯಲ್ಲಿ ಅತೀ ಕಡಿಮೆ ಮತದಾರರುಬೆಂಗಳೂರು ದಕ್ಷಿಣದಲ್ಲಿ ಹೆಚ್ಚು, ಶೃಂಗೇರಿಯಲ್ಲಿ ಅತೀ ಕಡಿಮೆ ಮತದಾರರು

ಈಗಾಗಲೇ ದಕ್ಷಿಣ ಕನ್ನಡಕ್ಕೆ 2,330 ವಿವಿಪ್ಯಾಟ್, 2,690 ಬ್ಯಾಲೆಟ್ ಯುನಿಟ್, 2,290 ಕಂಟ್ರೋಲ್ ಯುನಿಟ್ ಗಳು ಬಂದಿದ್ದು ಅವುಗಳ ಮೊದಲ ಹಂತದ ಪರಿಶೀಲನೆ ನಡೆಸಲಾಗುತ್ತಿದೆ.

English summary
DK district administration prepared for next assembly election. The final electoral list of the district prepared covering 8 assembly constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X