ಮಂಡ್ಯ ಜಿಲ್ಲೆಯ ಮತದಾರರ ಪಟ್ಟಿ ಅಂತಿಮ
ಮಂಡ್ಯ, ಮಾರ್ಚ್ 07 : ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಮೇಲುಕೋಟೆ ಅತೀ ಕಡಿಮೆ ಮತದಾರರನ್ನು ಹೊಂದಿರುವ ತಾಲೂಕಾಗಿದೆ.
ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಏಳು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 14,61,031 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ.
ಫೆಬ್ರವರಿ 28 ರಂದು ಮತದಾರರ ಅಂತಿಮಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 7,32,527 ಪುರುಷರು ಹಾಗೂ 7,28,504 ಮಹಿಳೆಯರು ಮತದಾರರ ಪಟ್ಟಿಗೆ ಹೆಸರು ಸೇರಿಸಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ತಾಲೂಕುವಾರು ಮತದಾರರು : ಮಳವಳ್ಳಿ 2,35,324 (1,18,857 ಪುರುಷ, 1,16,467 ಮಹಿಳೆಯರು). ಮದ್ದೂರು 2,02,326 (1,00,105 ಪುರುಷ, 1,02,221 ಮಹಿಳೆ). ಮೇಲುಕೋಟೆ 1,92,963 (96,813 ಪುರುಷ, 96,150 ಮಹಿಳೆ).
ಮಂಡ್ಯ 2,21,555 (1,09,834 ಪುರುಷ, 1,11,721 ಮಹಿಳೆ). ಶ್ರೀರಂಗಪಟ್ಟಣ 2,04,059 (1,01,503 ಪುರುಷ, 1,02,556 ಮಹಿಳೆ). ನಾಗಮಂಗಲ 2,03,209 (1,02,776 ಪುರುಷ, 1,00,433 ಮಹಿಳೆ). ಕೆ.ಆರ್.ಪೇಟೆ 2,01,595 (1,02,639 ಪುರುಷ, 98,956 ಮಹಿಳೆ).












Click it and Unblock the Notifications