Karadi Sanganna: ಮುನಿಸು ಶಮನದಲ್ಲಿ ಬಿಜೆಪಿ ವಿಫಲ: ಕಾಂಗ್ರೆಸ್ ಸೇರ್ತಾರಾ ಸಂಗಣ್ಣ ಕರಡಿ!
ಕೊಪ್ಪಳ ಮಾರ್ಚ್ 29: ಕೊಪ್ಪಳದ ಪ್ರಬಲ ಲಿಂಗಾಯತ ನಾಯಕ ಸಂಗಣ್ಣ ಕರಡಿ ಮುನಿಸು ಶಮನಕ್ಕೆ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಬಿಜೆಪಿ ಟಿಕೆಟ್ ವಂಚಿತ ಹಾಲಿ ಸಂಸದ ಸಂಗಣ್ಣ ಕರಡಿ ಮಾತ್ರ ಬಿಜೆಪಿ ಮಾತಿಗೆ ಕಿವಿಗೊಡುತ್ತಿಲ್ಲ. ಹೀಗಾಗಿ ಸಂಗಣ್ಣ ಕರಡಿ ಮುನಿಸು ಶಮನದಲ್ಲಿ ಬಿಜೆಪಿ ವಿಫಲವಾಗಿದೆ.
ಹೌದು... ಟಿಕೆಟ್ ವಂಚಿತ ಸಂಗಣ್ಣ ಕರಡಿ ಈಗಾಗಲೇ ಕೊಪ್ಪಳದಲ್ಲಿ ನೀಡಿದ ಬಿಜೆಪಿ ಟಿಕೆಟ್ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈ ನಡುವೆ ಕಾಂಗ್ರೆಸ್ ಇದರ ಲಾಭವನ್ನು ಪಡೆಯಲು ಮುಂದಾಗಿದೆ. ಸಂಗಣ್ಣ ಕರಡಿಗೆ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನವೂ ಸಿಕ್ಕಿದೆ. ಈ ಮೂಲಕ ಕೊಪ್ಪಳದಲ್ಲಿ ಕಾಂಗ್ರೆಸ್ ಗೆಲ್ಲಲು ತಂತ್ರ ಹೂಡಿದೆ.

ಇದನ್ನು ತಡೆಯಲು ಬಿಜೆಪಿ ಕೆಲ ಆಫರ್ ನೀಡಿದರು ಸಂಗಣ್ಣ ಜಗ್ಗುತ್ತಿಲ್ಲ. ಕೊಪ್ಪಳದಲ್ಲಿ ಈಗಾಗಲೇ ನೀಡಿದ ಟಿಕೆಟ್ ಬದಲಾವಣೆ ಮಾಡಿ ತಮಗೆ ಟಿಕೆಟ್ ನೀಡಲು ಒತ್ತಾಯಿಸಿದ್ದಾರೆ. ಜೊತೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ತಮಗೆ ಸಾಕಷ್ಟು ಅವಮಾನವಾಗಿದೆ ಎಂದು ಸಂಗಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಂಗಣ್ಣ ಮನವೊಲಿಕೆ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಆದರೆ ಇದೆಲ್ಲದರ ನಡುವೆ ಸಂಗಣ್ಣ ಕರಡಿ ಮುಂದಿನ ನಡೆ ಏನು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ವಂಚಿತರಿಂದ ಜಿಗಿಜಿತ ಆರಂಭವಾಗಿದೆ. ಒಂದು ವೇಳೆ ಕಾಂಗ್ರೆಸ್ ಆಹ್ವಾನಕ್ಕೆ ಓಗೊಟ್ಟು ಸಂಗಣ್ಣ ಕರಡಿ ಬಿಜೆಪಿ ತೊರೆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಲಿಂಗಾಯತ ಮತಗಳನ್ನು ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಕಮಲ ನಾಯಕರು ತುಂಬ ಎಚ್ಚರಿಕೆ ನಡೆಯನ್ನು ಇಡುತ್ತಿದ್ದಾರೆ.

ಒಂದು ವೇಳೆ ಬಿಜೆಪಿ ನಾಯಕರು ಕರಡಿ ಸಂಗಣ್ಣ ಒತ್ತಡಕ್ಕೆ ಮಣಿಯದೇ ಹೋದಲ್ಲಿ ಅವರು ಕಾಂಗ್ರೆಸ್ ಸೇರುವ ಲಕ್ಷಣಗಳು ಇವೆ. ಹೀಗಾಗಿ ಕರಡಿ ಸಂಗಣ್ಣ ಮುಮದಿನ ನಡೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications