Get Updates
Get notified of breaking news, exclusive insights, and must-see stories!

Lok Sabha Election 2024: ಮೋದಿಯವರ ಮುಂದೆ ಕೈಕಟ್ಟಿ ನಿಲ್ಲುವ ಪ್ರಶ್ನೆಯೇ ಇಲ್ಲ: ಮಾಜಿ ಸಿಎಂ ಹೀಗೆ ಹೇಳಿದ್ಯಾಕ

ಹುಬ್ಬಳ್ಳಿ, ಏಪ್ರಿಲ್‌ 10: ನರೇಂದ್ರ ಮೋದಿಯವರ ಕಾಲದಲ್ಲಿ ಯಾವುದೇ ಕೂಡ ಲಾಭಿ ಮಾಡುವ ಪ್ರಶ್ನೆ ಬರೋದಿಲ್ಲ. ಅಧಿಕಾರಿಗಳು ಕೆಲಸ ಮಾಡ್ತಾರೆ ಹಾಗಾಗಿ ರಾಜ್ಯಕ್ಕೆ ಕೇಂದ್ರಕ್ಕೆ ಏನು ಸಿಗಬೇಕು ಎಲ್ಲವೂ ಸಿಗುತ್ತೆದೆ. ಕಾಂಗ್ರೆಸ್‌ನವರಂತೆ ನಾವು ಮೋದಿಯವರ ಮುಂದೆ ಕೈಕಟ್ಟಿ ನಿಲ್ಲುವ ಪ್ರಶ್ನೆಯೇ ಇಲ್ಲ. ನಾವು ಮೋದಿಯವರ ಜೊತೆಗೆ ನಿಲ್ಲುತ್ತೇವೆ. ಅವರನ್ನು ಬೆಂಬಲಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 15 ನೇ ಹಣಕಾಸು ಕಡಿಮೆ ಆಗಲು ಸಿದ್ದರಾಮಯ್ಯನವರು ಕಾರಣ. ರಾಜ್ಯದ ನೈಜ್ಯಸ್ಥಿತಿಯನ್ನ ಈಗಿನ ಸರ್ಕಾರ ಹೇಳಿಕೊಳ್ಳಲಿಲ್ಲಾ ಅದಕ್ಕೆ ಈ ಪರಿಸ್ಥಿತಿ ನಿರ್ಮಾಣವಾಗಿದೆ, ಯುಪಿಎ ಸರ್ಕಾರ ಇದ್ದಾಗ 8-10 ತಿಂಗಳ ನಂತರ ಪರಿಹಾರ ಇದೆ. ಸದ್ಯ ಅವರು ತಮ್ಮ ಬೊಕ್ಕಸದಿಂದ ರಾಜ್ಯದ ರೈತರಿಗೆ ಹಣವನ್ನ ಬಿಡುಗಡೆ ಮಾಡಲಿ, ಇವರಿಗೆ ರೈತರ ಬಗ್ಗೆ ಕಳಕಳಿ ಇಲ್ಲ ರೈತ ವಿರೋಧಿ ಸರ್ಕಾರ ಇದು ಎಂದು ಹೇಳಿದರು.

There Is No Question Of Standing Before Modi We Will Stand With Modi Says Basavaraj Bommai

ಸಿಎಂ ಸಿದ್ದರಾಮಯ್ಯ ರಾಜ್ಯದ 25 ಸಂಸದರು ಪುಕ್ಕಲರು ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಸ್ಟಮ್ ನಲ್ಲಿ ಕೆಲಸ ಮಾಡುವಾಗ ವ್ಯಕ್ತಿ ಪ್ರಶ್ನೆ ಬರೋದಿಲ್ಲ. ನರೇಂದ್ರ ಮೋದಿಯವರ ಕಾಲದಲ್ಲಿ ಯಾವುದೇ ಕೂಡ ಲಾಭಿ ಮಾಡುವ ಪ್ರಶ್ನೆ ಬರುವುದಿಲ್ಲ. ಕಾಂಗ್ರೆಸ್ ನವರ ಸ್ಟೈಲ್ ಹೇಗೆ ಅಂದರೆ ಅವರ ಹೈಕಮಾಂಡ ಕಡೆ ಹೋಗಿ ನಿಲ್ಲಬೇಕು ಅರ್ಜಿ ಕೊಡಬೇಕು ಎಂದು ಹೇಳಿದರು.

ಕೇವಲ 200 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿರುವ ಕಾಂಗ್ರೆಸ್, 543 ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಅತಿಯಾದ ವಿಶ್ವಾಸ ಹೊಂದಿರುವ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಧಿಕಾರಕ್ಕೆ ಬರುವುದಿಲ್ಲ ಎಂಬ ಸತ್ಯ ಕಾಂಗ್ರೆಸ್ ನಾಯಕರಿಗೆ ಗೊತ್ತಾಗಿದೆ. ಹೀಗಾಗಿ ಚುನಾವಣಾ ಪ್ರನಾಳಿಕೆಯಲ್ಲಿ ಪೊಳ್ಳು ಆಶ್ವಾಸನೆಗಳನ್ನು ನೀಡಿದ್ದಾರೆ. ಇಂಡಿ ಒಕ್ಕೂಟದಲ್ಲೇ ಹಲವು ಗೊಂದಲಗಳಿವೆ. ಟಿಎಂಸಿ ಪ್ರನಾಳಿಕೆ, ಆಪ್ ಪ್ರನಾಳಿಕೆ ಹೀಗೆ ಅನೇಕ ಪ್ರನಾಳಿಕೆಗಳನ್ನು ಹೊಂದಿರುವ ಇಂಡಿ ಒಕ್ಕೂಟವನ್ನು ಜನ ನಂಬುವ ಸ್ಥಿತಿಯಲ್ಲಿಲ್ಲ ಎಂದು ವ್ಯಂಗ್ಯವಾಡಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ೮-೧೦ ತಿಂಗಳ ನಂತರ ಬರ ಪರಿಹಾರ ನೀಡಿದ ಉದಾಹರಣೆಗಳಿವೆ. ನಾಡಿನ ರೈತರು, ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಬೊಕ್ಕಸದಿಂದ ಸಹಾಯ ಮಾಡುವ ಕೆಲಸ ರಾಜ್ಯ ಸರ್ಕಾರ ಆಧ್ಯತೆಯ ಮೇರೆಗೆ ಮಾಡಬೇಕು. ತುರ್ತು ಪರಿಸ್ಥಿತಿ ಎದುರಾದಾಗ ಸಕಾಲಕ್ಕೆ ನೀರು, ಮೇವು ನೀಡಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತೀವೃ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಆಗ ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೇ, ರಾಜ್ಯ ಸರ್ಕಾರದಿಂದಲೇ ತುರ್ತು ಪರಿಹಾರ ನೀಡಿದ್ದೆವು. ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಯಾರೂ ಲಾಬಿ ಮಾಡುವ ಪ್ರಮೇಯವೇ ಉದ್ಭವಿಸುವುದಿಲ್ಲ. ವ್ಯವಸ್ಥಿತವಾಗಿ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂದರು.

60 ವರ್ಷದಲ್ಲಿ ಹೈವೇ ಕೆಲಸ ಮಾಡಲು ಕಾಂಗ್ರೆಸ್‌ನವರಿಂದ ಆಗಿಲ್ಲ. ಆದರೆ, ನಾವು ಈಗಾಗಲೇ ನಾವು 3500 ಕಿಮೀ ಹೈವೇ ಕೆಲಸ ಮಾಡಿದ್ದೇವೆ. ಬರೀ ಐದು ವರ್ಷದಲ್ಲಿ 3500 ಕಿಮೀ ಹೈವೇ ಕೆಲಸವನ್ನು ಮಾಡಿದ್ದೇವೆ. ಇನ್ನೂ ಮೂರು ಸಾವಿರ ಕಿ ಮೀ. ಹೈವೇ ಕೆಲಸ ಅನುಮೋದನೆ ಆಗಿದೆ. ರೈಲ್ವೆದಲ್ಲಿಯೂ ಕೂಡ ಕಳೆದ ಬಜೆಟ್ ನಲ್ಲಿ 3500-7000 ಕಿಮೀ ವರೆಗೆ ಅನುಮೋದನೆ ಆಗಿದೆ. ಇಂತಹ ಕೆಲಸಗಳನ್ನು ನಾವೇನು ಕೇಂದ್ರಕ್ಕೆ ಅರ್ಜಿ ಕೊಟ್ಟು ಮಾಡಿಸಿಲ್ಲಾ. ಕೇಂದ್ರದ ಬಿಜೆಪಿಯೇ ಅದನ್ನು ಸ್ವಯಂ ಪ್ರೇರಿತವಾಗಿಯೇ ಮಾಡಿದೆ ಎಂದು ಕೇಂದ್ರ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ರಾಜ್ಯದ ಬರ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದ್ದು, ಕೇಂದ್ರಕ್ಕೆ ಮನವಿಯನ್ನು ಕಳುಹಿಸುವಾಗ ಕರ್ನಾಟಕದ ವಾಸ್ತವ ಸ್ಥಿತಿಯನ್ನು ಕಳಿಸಿರಲಿಲ್ಲ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರದ ಬೊಕ್ಕಸದಿಂದ ರಾಜ್ಯದ ರೈತರಿಗೆ ಹಣವನ್ನು ಬಿಡುಗಡೆ ಮಾಡಲಿ ಎಂದರು. ರಾಜಕೀಯ ಪ್ರೇರಿತ ದೃಷ್ಟಿಯಿಂದ ಸಿದ್ದರಾಮಯ್ಯ ಬರಪರಿಹಾರಕ್ಕಾಗಿ ಸುಪ್ರಿಂಕೋರ್ಟಿಗೆ ಹೋಗಿದ್ದಾರೆ.

ಡಿಎಂಕೆದು ಪ್ರಣಾಳಿಕೆ ಬೇರೆ, ಟಿಎಂಸಿದು ಬೇರೆ, ಇನ್ನು ಆಮ್‌ ಆದ್ಮಿ ಪಕ್ಷದ್ದು ಬೇರೆ. ಕಾಂಗ್ರೆಸ್‌ದು ಮತ್ತೊಂದು. ಜನರು ಯಾವುದನ್ನು ನಂಬಬೇಕು ಹೇಳಿ. ಜನರಿಗೆ ಅಪ್ಪಟ ಸುಳ್ಳು ಹೇಳಿ ಇಂತಹ ಆ‍ಶ್ವಾಸನೆ ಕೊಡುತ್ತಿದ್ದಾರೆ. ಒಂದು ಲಕ್ಷ ಕೊಡುತ್ತೇವೆ, ಎರಡು ಲಕ್ಷ ಕೊಡುತ್ತೇವೆ ಎಂದು ಜನರಿಗೆ ಕಾಂಗ್ರೆಸ್‌, ಸುಳ್ಳು ಹೇಳಿ ಮೋಸ ಮಾಡುವುದನ್ನು ಬಿಡಬೇಕು. ಕೆಲವು ಸ್ಥಾನಗಳಿಗಷ್ಟೇ ಕಾಂಗ್ರೆಸ್‌ ಸ್ಪರ್ಧೆ ಮಾಡುತ್ತಿದೆ. ಮೊದಲು 543 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿ,ಆಮೇಲೆ ಇಂತಹ ಆಶ್ವಾಸನೆ ಕೊಡಿ ಎಂದು ಬೊಮ್ಮಾಯಿ ಕಾಂಗ್ರೆಸಿಗೆ ಸವಾಲು ಹಾಕಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+