ಬೊಂಬಾಟ್ ಲುಕ್‌ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಬೈಕ್
ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬಿಸ್ಸಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ತಮ್ಮ ಹಿಡಿತವನ್ನು ಸಾಧಿಸುವತ್ತ ಧಾಪುಗಾಲು ಇಡತ್ತಿವೆ. ಈ ನಿಟ್ಟಿನಲ್ಲಿ ಈ ವಾಹವನ್ನು ತಯಾರಿಸುವಲ್ಲಿ ಹಲವು ಕಂಪನಿಗಳು ಮುಂದೆ ಬಂದಿವೆ. ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆಯುತ್ತಲೇ ಇವೆ. ಇದೇ ಸಾಲಿಗೆ ಬೆಂಗಳೂರ ಮೂಲದ ಕಂಪನಿ ಬಿಡುಗಡೆ ಮಾಡಿರುವ ಎಲೆಕ್ಟ್ರಿಕ್ ಬೈಕ್ ಜನರನ್ನು ಆಕರ್ಷಿಸುತ್ತಿದೆ.
ಇನ್ನು ಪೆಟ್ರೋಲ್ ವಾಹನಗಳ ಸಂಖ್ಯೆ ಕ್ರಮೇಣವಾಗಿ ಕಡಿಮೆ ಆಗುತ್ತದೆ ಎಂದು ಮನಗೊಂಡು ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ ಎಂಬ ಕಂಪನಿ ಎಲೆಕ್ಟ್ರಿಕ್ ಬೈಕ್‌ನ್ನು ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಲುಕ್ ವೈಸ್ ಈ ಬೈಕ್ ಸಖತ್ ಆಗಿದೆ. ಕಳೆದ ವರ್ಷ ರಿಲೀಸ್ ಮಾಡಿದ್ದ ಬೈಕ್‌ನ ಅಪ್‌ಗ್ರೇಡ್ ವರ್ಷನ್ ಆಗಿ ಕಂಪನಿ Ultraviolette F77 Mach 2 ಬಿಡುಗಡೆ ಮಾಡಿದೆ.

ಒಮ್ಮೆ ಇದನ್ನು ನೋಡಿದ್ರೆ ಎಲೆಕ್ಟ್ರಿಕ್ ಬೈಕ್ ಎನ್ನುವ ಫೀಲ್ ಬರುವುದೇ ಇಲ್ಲ. ಈ ಬೈಕ್‌ನ ಡಿಜೈನ್ ಸೂಪರ್ ಆಗಿದೆ. ನಿಮಗೆ ಮುಂದಿನ ಭಾಗದಲ್ಲಿ ಪೆಟ್ರೋಲ್ ಟ್ಯಾಂಕ್ ರೀತಿ ವಿನ್ಯಾಸ ಇದರ ಅಂದವನ್ನು ದ್ವಿಗುಣ ಗೊಳಿಸಿದೆ. ಆದರೆ ಇದು ಬ್ಯಾಟರಿ ಚಾಲಿತ ಗಾಡಿಯಾಗಿದ್ದು, ಸ್ಪೋರ್ಟ್ಸ್ ಲುಕ್‌ನಲ್ಲಿ ಕಂಗೊಳಿಸುತ್ತದೆ.
ವಿಶೇಷತೆ ಏನು?
ಈ ಇ-ಬೈಕ್‌ಗೆ F77 ಮ್ಯಾಕ್ 2, ಈ ಹಿಂದೆ ಬಿಡುಗಡೆ ಮಾಡಿದ್ದ F77 ನ ಅಪ್‌ಗ್ರೇಡ್ ಆವೃತ್ತಿ. ಕಂಪನಿಯ ಹೊಸ ಬೈಕ್‌ನಲ್ಲಿ ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಕಾಣಲು ಆಕರ್ಷಕವಾಗಿದ್ದರೂ ಈ ಬೈಕ್ ಸಖತ್ ಶಕ್ತಿ ಶಾಲಿ. ಕಂಪನಿ ಹೇಳಿಕೊಳ್ಳುವಂತೆ ಟ್ರಕ್‌ನ್ನು ಸಹ ಎಳೆಯಬಲ್ಲ ಕ್ಷಮತೆ ಈ ಬೈಕ್‌ಗೆ ಇದೆ.
ಇದು ವಿಶ್ವದ ಅತ್ಯಂತ ಸುಧಾರಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಎಂದು ಕಂಪನಿಯು ಹೇಳಿಕೊಂಡಿದೆ. ಜನರು ಈ ಬೈಕಿನ ಬೆಲೆ ಎಷ್ಟು ಮತ್ತು ಅದರ ಶ್ರೇಣಿ ಮತ್ತು ವೈಶಿಷ್ಟ್ಯಗಳೇನು ಎಂದು ತಿಳಿಯಲು ಹುಡುಕಾಟ ನಡೆಸಿದ್ದಾರೆ. ಭಾರತೀಯ ಕಂಪನಿಯ ಈ ಇ-ಬೈಕ್ ಅತ್ಯಂತ ಸೊಗಸಾದ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಬ್ಯಾಟರಿ ಹೇಗಿದೆ?
ಕಂಪನಿಯು F77 ಮ್ಯಾಕ್ 2 ನ ಪ್ರಮಾಣಿತ ಮಾದರಿಯಲ್ಲಿ 27ಕಿಲೋ ವ್ಯಾಟ್ ಮೋಟಾರ್ ಅನ್ನು ಹೊಂದಿದೆ. ಇದಲ್ಲದೇ, ಸ್ಟ್ಯಾಂಡರ್ಡ್ ಮಾದರಿಯಲ್ಲಿ 7.1kWh ಬ್ಯಾಟರಿಯನ್ನು ಮತ್ತು ರೆಕಾನ್‌ನಲ್ಲಿ 10.3 ಕಿಲೋ ವ್ಯಾಟ್ ಹವರ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ದ್ವಿಚಕ್ರ ವಾಹನದಲ್ಲಿ ಇದುವರೆಗೆ ಅಳವಡಿಸಲಾಗಿರುವ ಅತಿ ದೊಡ್ಡ ಬ್ಯಾಟರಿ ಎಂದು ಹೇಳಬಹುದಾಗಿದೆ. ಈ ಬೈಕ್ ಅನ್ನು 1,00,000 ಕಿಲೋಮೀಟರ್ ಓಡಿಸಿದ ನಂತರವೂ ಅದರ ಬ್ಯಾಟರಿ ಬಾಳಿಕೆ ತುಂಬಾ ಚೆನ್ನಾಗಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಬುಕ್ಕಿಂಗ್ ಆರಂಭ
ಅಲ್ಟ್ರಾವೈಲೆಟ್ ಎಫ್77 ಮ್ಯಾಕ್ 2 ಎರಡು ವಿವಿಧದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲು ರೆಡಿಯಾಗಿದೆ. ಸ್ಟ್ಯಾಂಡರ್ಡ್ ಮತ್ತು ರೆಕಾನ್ ಮಾದರಿಯಲ್ಲಿ ಗ್ರಾಹರನ್ನು ಈ ಬೈಕ್ ತನ್ನತ್ತ ಸೆಳೆಯಲಿದೆ. ಈ ಬೈಕ್ ಬೆಲೆ 2 ಲಕ್ಷ 99 ಸಾವಿರ ಆಗಿರಲಿದೆ. ಅಷ್ಟಕ್ಕೂ ಈ ಬೆಲೆ ಮೊದಲ 100 ಗ್ರಾಕಕರು ಮಾತ್ರ ಈ ಬೈಕ್ ಖರೀದಿಸಬಹುದು. ನೀವು ತಡ ಮಾಡಿದ್ದೇ ಆದಲ್ಲಿ ಒಂದು ಲಕ್ಷ ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ಈ ಬೈಕ್ ಒಂಬತ್ತು ವಿವಿಧ ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ.

ಬ್ಯಾಕ್‌ನ ಲುಕ್ ಎಫ್77 ನಂತೆ ಕಾಣುತ್ತದೆ. ಆದರೆ ಒಳಗಡೆ ಬ್ಯಾಟರಿ ಹಾಗೂ ಹಲವು ಪಾರ್ಟ್‌ಗಳು ಅಪ್‌ಗ್ರೇಡ್ ಆಗಿವೆ. ಈ ಬೈಕ್‌ನ್ನು ನೀವು ಖರೀದಿಸಲು ಬಯಿಸಿದಲ್ಲಿ ಕಂಪನಿಯ ಆಫೀಸಿಯಲ್ ವೆಬ್‌ಸೈಟ್‌ನಲ್ಲಿ ನೊಂದಾಯಿಸಿ ಐದು ಸಾವಿರ ಟೋಕನ್ ಹಣವನ್ನು ನೀಡಬೇಕಾಗುತ್ತದೆ.












Click it and Unblock the Notifications