ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಲೂರಿನಲ್ಲಿ ವಿದ್ಯಾರ್ಥಿನಿ ಹತ್ಯೆ, ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಹಂತಕ

By Gururaj
|
Google Oneindia Kannada News

ಕೋಲಾರ, ಆಗಸ್ಟ್ 03 : ಮಾಲೂರಿನಲ್ಲಿ ನಡೆದ ವಿದ್ಯಾರ್ಥಿನಿ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಗುರುವಾರ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು.

10ನೇ ತರಗತಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಯತ್ನ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಂಜಿತ್‌ನನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ರಕ್ಷಿತಾ ಪರ ಮಾಲೂರಿನಲ್ಲಿ ಜನ ಸಾಗರರಕ್ಷಿತಾ ಪರ ಮಾಲೂರಿನಲ್ಲಿ ಜನ ಸಾಗರ

Malur schoolgirl

ರಂಜಿತ್ ವಿದ್ಯಾರ್ಥಿನಿ ಮನೆಯ ಬಳಿ ಗಾರೆ ಕೆಲಸ ಮಾಡಿಕೊಂಡಿದ್ದ. ತನ್ನನ್ನು ಪ್ರೀತಿಸುವಂತೆ ವಿದ್ಯಾರ್ಥಿನಿಯನ್ನು ಪೀಡಿಸುತ್ತಿದ್ದ. ಆದರೆ, ಆಕೆ ಅದಕ್ಕೆ ನಿರಾಕಸಿದ್ದಳು. ಇದರಿಂದ ಆತ ಕೋಪಗೊಂಡಿದ್ದ.

ಆಗಸ್ಟ್ 1ರ ಬುಧವಾರ ಸಂಜೆ ವಿದ್ಯಾರ್ಥಿನಿ ಶಾಲೆಯಿಂದ ಬರುವಾಗ ರಂಜಿತ್ ಆಕೆಯನ್ನು ಹಿಂಬಾಲಿಸಿದ್ದ. ಪ್ರೀತಿಸುವಂತೆ ಪೀಡಿಸಿದ್ದ, ಆಕೆ ಒಪ್ಪದಿದ್ದಾಗ ಅತ್ಯಾಚಾರಕ್ಕೆ ಪ್ರಯತ್ನ ನಡೆಸಿದ್ದ. ಆಕೆ ಕೂಗಿಕೊಂಡಾಗ ಹತ್ಯೆ ಮಾಡಿದ್ದ.

ಬಾಲಕಿಯ ಕೊಲೆ, ಅತ್ಯಾಚಾರ ಯತ್ನ: ಮಾಲೂರಿನಲ್ಲಿ ಉಗ್ರ ಪ್ರತಿಭಟನೆ ಬಾಲಕಿಯ ಕೊಲೆ, ಅತ್ಯಾಚಾರ ಯತ್ನ: ಮಾಲೂರಿನಲ್ಲಿ ಉಗ್ರ ಪ್ರತಿಭಟನೆ

ವಿದ್ಯಾರ್ಥಿನಿ ಹತ್ಯೆ ಮಾಡಿದ ಬಳಿಕ ರಂಜಿತ್ ರೈಲ್ವೆ ನಿಲ್ದಾಣದಲ್ಲಿ ಹೋಗಿ ಮಲಗಿದ್ದ. ಪೊಲೀಸರು ಅನುಮಾನ ಬಂದು ವಿಚಾರಿಸಿದಾಗ ಕೊಲೆ ಮಾಡಿರುವ ವಿಷಯ ಬೆಳಕಿಗೆ ಬಂದಿತ್ತು. ಆರೋಪಿ ಪೊಲೀಸರ ಬಳಿಯೂ ತಪ್ಪೊಪ್ಪಿಕೊಂಡಿದ್ದಾನೆ.

ಬೃಹತ್ ಪ್ರತಿಭಟನೆ : ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಮಾಲೂರಿನಲ್ಲಿ ಗುರುವಾರ ಭಾರೀ ಪ್ರತಿಭಟನೆ ನಡೆದಿತ್ತು. ನೂರಾರು ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು.

ಸಾಮಾಜಿಕಜಾಲ ತಾಣದಲ್ಲಿಯೂ ವಿದ್ಯಾರ್ಥಿನಿ ಹತ್ಯೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. #needjustice ಹೆಸರಿನಲ್ಲಿ ಹಲವು ಜನರು ಪೋಸ್ಟ್‌ಗಳನ್ನು ಹಾಕಿದ್ದರು. ಆರೋಪಿಯನ್ನು ಶೀಘ್ರವೇ ಬಂಧಿಸಬೇಕು ಎಂದು ಆಗ್ರಹಿಸಿದ್ದರು.

ಮಾಲೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದರು. ವಿದ್ಯಾರ್ಥಿನಿ ಸ್ನೇಹಿತರು ನೀಡಿದ ಮಾಹಿತಿಯಂತೆ ಆರೋಪಿಯ ರೇಖಾಚಿತ್ರ ತಯಾರು ಮಾಡಲಾಗಿತ್ತು.

English summary
Malur police arrested Ranjith who killed 15-year-old Class 10 student in Malur, Kolar district. student was murdered on August 1, 2018 evening when she is returning home after attending a sports meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X