Get Updates
Get notified of breaking news, exclusive insights, and must-see stories!

Lok Sabha Election: ಕರ್ನಾಟಕದ ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕ

ಈಗಂತೂ ದೇಶದಲ್ಲಿ ಚುನಾವಣೆ ಕಾವು. ಅಭ್ಯರ್ಥಿಗಳು ಭರ್ಜರಿ ಪ್ರಚಾರ.. ಮತದಾರರ ಓಲೈಕೆ.. ಈ ದೃಶ್ಯಗಳೇ ಸಾಮಾನ್ಯ. ಕರ್ನಾಟಕವೂ ಈ ದೃಶ್ಯಗಳಿಗೆ ಸಾಕ್ಷಿಯಾಗಿದೆ. ಏಪ್ರಿಲ್‌ 26ರಂದು ಕರ್ನಾಟಕ ಮೊದಲ ಹಂತದ ಚುನಾವಣೆಗೆ ಸಾಕ್ಷಿಯಾಗಲಿದೆ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿದೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜಾತಿವಾರು ಸಮೀಕರಣವೇ ಹೆಚ್ಚಾಗಿ ವರ್ಕ್ ಆಗುವುದು. ಆದರೆ, ರಾಜ್ಯದ ಈ ಒಂದು ಕ್ಷೇತ್ರದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರನ್ನು ಹೊಂದಿದೆ. ಹೀಗಾಗಿ ಇವರೇ ಗೆಲುವು ಸೋಲು ನಿರ್ಧರಿಸುವುದು ಇವರೇ. ಇದೇ ಕರ್ನಾಟಕದ ಕೋಲಾರ ಕ್ಷೇತ್ರ. ಮೀಸಲು ಲೋಕಸಭಾ ಕ್ಷೇತ್ರವಾದ ಕೋಲಾರ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ್, ಮುಳಬಾಗಲ್, ಕೆಜಿಎಫ್‌, ಬಂಗಾರಪೇಟ್‌, ಕೋಲಾರ, ಮಾಲೂರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಏಪ್ರಿಲ್‌ 26 ರಂದು ಮತದಾನ ನಡೆಯಲಿದೆ.

Lok Sabha Election Women voters are crucial in this constituency of Karnataka

ಮಹಿಳೆಯರೇ ಸ್ಟ್ರಾಂಗ್‌

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಏಳು ಲಕ್ಷ ಮಹಿಳಾ ಮತದಾರರು ಇದದಾರೆ. ಮಹಿಳಾ ಮತದಾರರು ಕೇಂದ್ರ ಸರ್ಕಾರದ ಯೋಜನೆಗಳಾದ ಗರೀಬ್ ಕಲ್ಯಾಣ್ ಯೋಜನೆ ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಇನ್ನು ರಾಜ್ಯ ಸರ್ಕಾರದ ಶ್ರೀ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಥಳೀಯ ಸಮಸ್ಯೆಗಳತ್ತ ಗಮನ ಹರಿಸುವಲ್ಲಿ ಹಿಂದೆ ಬಿದ್ದಿದೆ. ಈ ಕ್ಷೇತ್ರದ ಸಮಸ್ಯೆಗಳನ್ನು ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳು ಗಮನ ಹರಿಸುತ್ತಿವೆ.

ಯಾರು ನಿರ್ಣಾಯಕ?

ಈ ಕ್ಷೇತ್ರದಲ್ಲಿ ಎಸ್‌ಸಿ ಹಾಗೂ ಎಸ್‌ಟಿ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಕೋಲಾರದ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರು ಅರ್ಧಕ್ಕಿಂತ ಹೆಚ್ಚಿದ್ದು, ಇವರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾರೆ. ಆದರೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಈ ಸಮೀಕರಣ ಬೇರೆಯದ್ದೆ ಕಥೆಯನ್ನು ಹೇಳಿದೆ. ಈ ಚುನಾವಣೆಯಲ್ಲಿ ಹೆಚ್ಚು ಮತದಾರರನ್ನು ಸೆಳೆಯುವಲ್ಲಿ ಬಿಜೆಪಿ ಸಫಲವಾಗಿತ್ತು. ಇದೇ ರಣತಂತ್ರವನ್ನು ಮುಂದುವರೆಸಲು ಬಿಜೆಪಿ-ಜೆಡಿಎಸ್‌ ಪ್ಲ್ಯಾನ್ ಮಾಡಿಕೊಂಡಿವೆ.

Lok Sabha Election Women voters are crucial in this constituency of Karnataka

ಸ್ವಾತಂತ್ರ್ಯದ ನಂತರ ಪಕ್ಷದ ಕಾಂಗ್ರೆಸ್‌ ಸಾಧನೆ ಅಮೋಘ. 1952 ರಿಂದ 1984 ರವರೆಗೆ ಮತ್ತು ನಂತರ 1989 ರಿಂದ 2019 ರವರೆಗೆ ಕೋಲಾರ ಲೋಕಸಭಾ ಸ್ಥಾನವನ್ನು ಕಾಂಗ್ರೆಸ್ ಗೆದ್ದಿತ್ತು. 2019 ರಲ್ಲಿ ಎಸ್ ಮುನಿಸ್ವಾಮಿ 2 ಲಕ್ಷ ಮತಗಳ ಭಾರೀ ಬಹುಮತದಿಂದ ಗೆದ್ದಾಗ ಕೆಹೆಚ್ ಮುನಿಯಪ್ಪ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಮುನಿಸ್ವಾಮಿ ಈ ಕ್ಷೇತ್ರದಲ್ಲಿ ಪ್ರಭಾವಿ ರಾಜಕಾರಣಿ. ಆದರೆ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಯಾಗಿ ಮಲ್ಲೇಶ್‌ ಬಾಬು ಅವರನ್ನು ಕಣಕ್ಕೆ ಇಳಿಸಿದೆ. ಕಾಂಗ್ರೆಸ್‌ ಗೌತಮ್‌ ಅವರನ್ನು ಕಣಕ್ಕೆ ಇಳಿಸಿದ್ದು, ಈ ಬಾರಿ ಮತದಾರ ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆಯಲು ಎರಡೂ ಪಕ್ಷಗಳು ಸಿದ್ಧವಾಗಿದ್ದು, ಯಾವ ಪಕ್ಷಕ್ಕೆ ಮತದಾರ ಜೈ ಎನ್ನುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+