ಸಿಎಂ ಸಿದ್ದರಾಮಯ್ಯ ಬೆನ್ನಲ್ಲೆ ಮತ್ತೊಬ್ಬ ಹಿರಿಯ 'ಕೈ' ನಾಯಕ ಚುನಾವಣಾ ರಾಜಕಾರಣ ನಿವೃತ್ತಿ:
ಕೋಲಾರ, ಏಪ್ರಿಲ್ 08: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮೈಸೂರಿನ ಚುನಾವಣಾ ಪ್ರಚಾರದಲ್ಲಿ ಮುಂದಿನ ವಿಧಾನಸಭೆಗೆ ಚುನಾವಣೆ ನಿಲ್ಲಲ್ಲ. ನಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯಲಿದ್ದೇನೆ ಎಂದಿದ್ದರು. ಇದರ ಬೆನ್ನಲ್ಲೆ ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕರೊಬ್ಬರ, ರಾಜಕಾರಣ ಕಲುಷಿತಗೊಂಡಿದೆ. ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಲಿದ್ದೇನೆ ಎಂದು ಘೋಷಿಸಿದರು.
ರಾಜ್ಯ ರಾಜಕೀಯ ವ್ಯವಸ್ಥೆಯು ಕಲುಷಿತಗೊಂಡಿದೆ. ರಾಜಕಾರಣದಲ್ಲಿ ಮೌಲ್ಯಗಳು ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಭಾನುವಾರ ತಮ್ಮ ನಿರ್ಧಾರ ಪ್ರಕಟಿಸಿದರು.

ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ (Speaker Ramesh Kumar) ಅವರು ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಗೆ ನಿಲ್ಲುವುದಿಲ್ಲ. ನನಗೆ ಮತ ನೀಡಿ ಎಂದು ನಿಮ್ಮ ಮನೆ ಬಾಗಿಲಿಗೆ ಬರುವುದಿಲ್ಲ ಎಂದು ತಿಳಿಸಿದರು.
ಕಾರ್ಯಕರ್ತರ ಸಭೆಯಲ್ಲಿ ಘೋಷಣೆ
ಭಾನುವಾರ ಸ್ವಗ್ರಾಮ ಶ್ರೀನಿವಾಸಪುರ ತಾಲೂಕು ಅಡ್ಡಗಲ್ ನಲ್ಲಿ ಕೋಲಾರ ಅಭ್ಯರ್ಥಿ ಕೆವಿ ಗೌತಮ್ ಪರವಾಗಿ ಅವರ ನಿವಾಸದಲ್ಲಿ ಕರೆಯಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಚುನಾವಣಾ ರಾಜಕೀಯ ನಿವೃತ್ತಿ ಕುರಿತು ಅವರು ಮಾತನಾಡಿದರು. ತಮಗೆ ಮೋಸ ಆಗಿದೆ ಎಂದು ಹಳೆಯ ಸೋಲನ್ನು ಅವರು ಸ್ಮರಿಸಿ ಬೇಸರ ವ್ಯಕ್ತಪಡಿಸಿದರು.

ಇಂದು ಕಲುಷಿತಗೊಂಡಿರುವ ರಾಜಕಾರಣದಲ್ಲಿ ನಾನು ಗೌರವಯುತವಾಗಿ ಬದುಕಿದ್ದೇನೆ. ಹಣ ಪಡೆಯಲು ರಾಜಕಾರಣ ಮಾಡಿದ್ದೇನೆ. ಮೌಲ್ಯ ಕಳೆದುಕೊಂಡು ಬದಲಾದ ರಾಜಕೀಯದಲ್ಲಿ ಚುನಾವಣೆಗಳಿಂದ ಹಿಂದೆ ಸರಿಯಲು ಮನಸ್ಸು ಮಾಡಿರುವ. ಮುಂದಿನ ಚುನಾವಣೆಯಲ್ಲಿ ನಾನಾಗಲಿ, ರಮೇಶ್ ಕುಮಾರ್ ಉತ್ತರಾಧಿಕಾರಿ ಪುತ್ರ ಹರ್ಷ ಆಗಲಿ ನಿಮ್ಮ ಬಳಿಕ ಮತಯಾಚಿಸುವುದಿಲ್ಲ ಎಂದು ಹೇಳಿದರು.
ಹಣದಾಸೆಗೆ ಅನೈತಿಕ ರಾಜಕಾರಣ
ರಾಜಕಾರಣದಲ್ಲಿ ನನಗೆ ಮೋಸ ಮಾಡಿದವರಿಗೆ ಎಂತಹ ಸ್ಥಿತಿ ಬರಲಿದೆ ತಿಳಿಯಲು ಕಾದು ನೋಡಬೇಕಿದೆ. ಹಣಕ್ಕೆ ತಮ್ಮನ್ನೆ ತಾವು ಮಾರಿಕೊಂಡು ನನಗೆ ಮೋಸ ಮಾಡಿದರು. ಇಂತವರಿಂದ ಹಣದಾಸೆಗೆ ಅನೈತಿಕ ರಾಜಕಾರಣ ನಡೆಯುತ್ತಿದೆ. ಇವರೆಲ್ಲ ನಾಶವಾಗಿ ಹೋಗುತ್ತಾರೆ ಕಾದು ನೋಡಿ ಎಂದು ಅವರು ತಮ್ಮ ಸೋಲನ್ನು ಸ್ಮರಿಸಿದರು.
ಇನ್ನೂ ಕೋಲಾರ ಅಭ್ಯರ್ಥಿ ಹೊಸ ಮುಖ ಗೌತಮ್ ಪರ ನಾನು ಮತಯಾಚನೆ ಮಾಡುವುದಿಲ್ಲ ಎಂದು ಅವರು ಟಿಕೆಟ್ ಆಯ್ಕೆಯಲ್ಲಿನ ಪಕ್ಷದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದರು.












Click it and Unblock the Notifications