ಒನ್ಇಂಡಿಯಾ ಕನ್ನಡದಲ್ಲಿ ಈ ವಾರ ಹೆಚ್ಚು ಓದಿದ ಲೇಖನಗಳಿವು

Posted By:
Subscribe to Oneindia Kannada

ವಾರಾಂತ್ಯಕ್ಕೆ ಬಂದು ನಿಂತಿದ್ದೇವೆ. ಕಣ್ಣೆದುರಿಗೆ ಭಾನುವಾರ ಕುಲುಕುತ್ತಿದೆ. ಒಂದಿಡೀ ವಾರ ಓದಿದ್ದು, ಫೇಸ್ ಬುಕ್ ನಲ್ಲಿ ಬರೆದದ್ದು, ರಸ್ತೆ ಬದಿಯಲ್ಲಿ ಕಂಡ ಮುಖ, ಸುಮ್ಮನೆ ನಕ್ಕಿದ್ದು, ಹಾಗೇ ಕಣ್ಣಂಚಿನಿಂದ ಬಂದ ಹನಿ...ಹೀಗೆ ನೆನಪಿಸಿಕೊಳ್ಳುವುದಕ್ಕೆ ಇನ್ನೂ ಏನೇನೋ ಇದೆ. ಇಂಥವು ಇವೆಲ್ಲದರ ಜೊತೆಗೆ ನಾವೂ ನಿಮಗೆ ಕೆಲವನ್ನು ನೆನಪಿಸ್ತೀವಿ.

ಒನ್ಇಂಡಿಯಾ ಕನ್ನಡದಲ್ಲಿ ಈ ವಾರ ನೀವು ಓದದೆ ತಪ್ಪಿಸಿಕೊಂಡಿದ್ದು, ಮತ್ತೊಮ್ಮೆ ಓದಬೇಕು ಅಂದುಕೊಳ್ಳುವಷ್ಟರಲ್ಲಿ ಇದೆಲ್ಲಿ ಹೊರಟು ಹೋಯಿತು ಎಂದುಕೊಂಡಿದ್ದು, ಹಾಗೇ ಈ ವಾರ ಅತಿ ಹೆಚ್ಚು ಓದಲಾದ ಲೇಖನಗಳು ಇಲ್ಲಿವೆ. ಅಂಥವನ್ನೇ ಆಯ್ಕೆ ಮಾಡಿ ಇಲ್ಲಿ ಅದನ್ನು ಪ್ರಕಟಿಸುತ್ತಿದ್ದೇವೆ. ಅರಾಮವಾಗಿ ಒಮ್ಮೆ ಕಣ್ಣು ಹಾಯಿಸಿ.

ಏಕೆಂದರೆ, ಇವು ಅತಿ ಹೆಚ್ಚು ಓದಲಾದ ಲೇಖನಗಳು. ನೀವು-ನಿಮ್ಮಂಥವರು ಅದೆಷ್ಟೋ ಮಂದಿ ಮೆಚ್ಚಿರುವಂಥದ್ದು. ಹ್ಞಾಂ, ಈ ಪ್ರಯತ್ನ ನಿಮಗೆ ಇಷ್ಟವಾಯಿತಾ ಅನ್ನೋದನ್ನು ತಿಳಿಸಿ. ಇಲ್ಲಿ ಆ ಲೇಖನವನ್ನು ಹಾಕಬೇಕಿತ್ತು ಅಂತ ನಿಮಗೆ ಅನ್ನಿಸಿದ್ದನ್ನು ನಮಗೆ ತಿಳಿಸಿ. ನಿಮ್ಮದೊಂದು ಕಾಮೆಂಟ್ಸ್ ನಮ್ಮನ್ನು ತಲುಪಲಿ. ಆದರೆ ಅದಕ್ಕೂ ಮುಂಚೆ ಇಲ್ಲಿರುವ ಲೇಖನಗಳನ್ನು ಒಮ್ಮೆ ಓದಿಬಿಡಿ.

'ರಾಜ್ ಲೀಲಾ ವಿನೋದ' ಪುಸ್ತಕದ ಆಯ್ದ ಭಾಗ

'ರಾಜ್ ಲೀಲಾ ವಿನೋದ' ಪುಸ್ತಕದ ಆಯ್ದ ಭಾಗ

ಪತ್ರಕರ್ತ-ಲೇಖಕ ರವಿ ಬೆಳಗೆರೆ ಬರೆದಿರುವ ನಟಿ ಲೀಲಾವತಿ ಅವರ ಆತ್ಮಕತೆ 'ರಾಜ್ ಲೀಲಾ ವಿನೋದ' ಪುಸ್ತಕದ ಆಯ್ದ ಭಾಗವನ್ನು ಪ್ರಕಾಶಕರ ಅನುಮತಿಯೊಂದಿಗೆ ಒನ್ಇಂಡಿಯಾ ಕನ್ನಡ ಪ್ರಕಟಿಸಿತ್ತು. ಡಿಸೆಂಬರ್ 25ರಂದು ಈ ಪುಸ್ತಕ ಬಿಡುಗಡೆ ಆಗುತ್ತಿದೆ. ಅದರ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ.

ಕನ್ನಡಕ್ಕಾಗಿ ಭಿಕ್ಷೆ ಬೇಡಬೇಕಿಲ್ಲ, ಬೊಬ್ಬೆ ಹೊಡೆಯಬೇಕಿಲ್ಲ

ಕನ್ನಡಕ್ಕಾಗಿ ಭಿಕ್ಷೆ ಬೇಡಬೇಕಿಲ್ಲ, ಬೊಬ್ಬೆ ಹೊಡೆಯಬೇಕಿಲ್ಲ

ಹೊಸವರ್ಷಕ್ಕೆ ಎಲ್ಲರೂ ಏನೇನೋ ಸಂಕಲ್ಪಗಳನ್ನು ಮಾಡುತ್ತಾರೆ. ಮದುವೆ ಆಗಬೇಕಂತಾನೋ, ಸಿಗರೇಟು ಬಿಡಬೇಕು ಅಂತಾನೋ, ತೂಕ ಕಡಿಮೆ ಮಾಡಿಕೊಳ್ಳಬೇಕು ಅಂತಾನೋ, ಮನೆ ಕಟ್ಟಬೇಕು ಅಂತಾನೋ, ಹೇಗಾದ್ರೂ ಮಾಡಿ ಪಕ್ಕದ ಹುಡುಗಿಯನ್ನ ಲವ್ ಮಾಡಬೇಕು ಅಂತಾನೋ... ಹೀಗೇ ಏನೇನೋ... ಆದರೆ ನಾವು ಕನ್ನಡಿಗರು ಗಟ್ಟಿ ಮನಸ್ಸಿನಿಂದ ಪರಭಾಷೆಯವರೊಂದಿಗೆ ಕನ್ನಡದಲ್ಲೇ ಮಾತಾಡೋಣ, ಸಾಮಾಜಿಕ ತಾಣದಲ್ಲಿ ಕನ್ನಡದಲ್ಲೇ ಬರೆಯೋಣ, ಕನ್ನಡದ ಶಕ್ತಿ ಏನೆಂದು ಉಳಿದವರಿಗೆ ತೋರಿಸೋಣ, ಕನ್ನಡದ ಏಳ್ಗೆಗಾಗಿ ಸಂಕಲ್ಪ ಮಾಡೋಣ. ಓದಲು ಲಿಂಕ್

ಕೆಪಿಎಸ್ ಸಿಯಿಂದ ಎಫ್ ಡಿಎ, ಎಸ್ ಡಿಎ ಹುದ್ದೆಗೆ ಅರ್ಜಿ

ಕೆಪಿಎಸ್ ಸಿಯಿಂದ ಎಫ್ ಡಿಎ, ಎಸ್ ಡಿಎ ಹುದ್ದೆಗೆ ಅರ್ಜಿ

ಕರ್ನಾಟಕ ಲೋಕ ಸೇವಾ ಆಯೋಗವು ಪ್ರಥಮ ದರ್ಜೆ ಸಹಾಯಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಹಿರಿಯ ಸಹಾಯಕರ ಹುದ್ದೆಗಳು ಹಾಗೂ ದ್ವಿತೀಯ ದರ್ಜೆ ಸಹಾಯಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಕಿರಿಯ ಸಹಾಯಕರ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಕೊನೆ ದಿನ ಜನವರಿ 4. ಲಿಂಕ್

ಪಲಾವ್ ಇಲ್ಲದಿದ್ದರೂ ಚಿತ್ರಾನ್ನಕ್ಕೆ ಕೊರತೆಯಿಲ್ಲ

ಪಲಾವ್ ಇಲ್ಲದಿದ್ದರೂ ಚಿತ್ರಾನ್ನಕ್ಕೆ ಕೊರತೆಯಿಲ್ಲ

ವೃಷಭ ರಾಶಿಯವರಿಗೆ 2017ರ ವರ್ಷ ಭವಿಷ್ಯ ಇಲ್ಲಿದೆ. ಈ ರಾಶಿಯವರಿಗೆ ಈ ವರ್ಷ ಮಿಶ್ರಫಲ. ಯಾವುದೇ ರಿಸ್ಕ್ ತೆಗೆದುಕೊಳ್ಳದಂತೆ, ಸೇಫ್ ಗೇಮ್ ಆಡುವುದು ಶ್ರೇಯಸ್ಕರ. ಆದರೆ ಪಲಾವ್ ಇಲ್ಲದಿದ್ದರೂ ಚಿತ್ರಾನ್ನಕ್ಕೆ ಕೊರತೆಯಿಲ್ಲ. ಲಿಂಕ್

ಟೀ ಮಾರೋನ ಬಳಿ ಸಿಕ್ಕಿದ್ದು ಬರೋಬ್ಬರಿ 400 ಕೋಟಿ!

ಟೀ ಮಾರೋನ ಬಳಿ ಸಿಕ್ಕಿದ್ದು ಬರೋಬ್ಬರಿ 400 ಕೋಟಿ!

ದೇಶದಲ್ಲಿ ದೊಡ್ಡ ದೊಡ್ಡ ಕಪ್ಪು ತಿಮಿಂಗಿಲಗಳೇ ಬೀಳುತ್ತಿದ್ದು ಈ ಸಾಲಿನಲ್ಲಿ ಸೂರತ್ ಮೂಲದ ಟೀ,ಬಜ್ಜಿ ವ್ಯಾಪಾರಿ, ಕಿಶೋರ್ ಬಜಿಯಾವಾಲ ಐಟಿ ಅದಿಕಾರಿಗಳ ಗಾಳಕ್ಕೆ ಸಿಕ್ಕಿ ಬಿದ್ದಿದ್ದಾರೆ. ಆಶ್ಚರ್ಯದ ವಿಷಯವೇನೆಂದರೆ ಅವರ ಬಳಿಯಿರುವ ನಗದು, ಚಿನ್ನ, ಆಸ್ತಿ ದಾಖಲೆ ಪತ್ರ ಎಲ್ಲವೂ ಸೇರಿ ತೆರಿಗೆ ಅಧಿಕಾರಿಗಳಿಗೆ ದಕ್ಕಿರುವುದು ಬರೋಬ್ಬರಿ 400 ಕೋಟಿ. ಲಿಂಕ್

ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಸೌಂದರ್ಯಾ ರಜನಿಕಾಂತ್

ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಸೌಂದರ್ಯಾ ರಜನಿಕಾಂತ್

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕಿರಿಯ ಪುತ್ರಿ ಸೌಂದರ್ಯಾ ರಜನಿಕಾಂತ್ ಅವರು ಶುಕ್ರವಾರ(ಡಿಸೆಂಬರ್ 23) ದಂದು ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. 2010ರಲ್ಲಿ ಉದ್ಯಮಿ ಅಶ್ವಿನ್ ರಾಮ್‌ಕುಮಾರ್‌ರನ್ನು ಮದುವೆಯಾಗಿರುವ ಸೌಂದರ್ಯ ಅವರಿಗೆ ಒಂದು ವರ್ಷ ವಯಸ್ಸಿನ ವೇದ್ ಕೃಷ್ಣ ಎಂಬ ಹೆಸರಿನ ಮಗನಿದ್ದಾನೆ. ಇನ್ಮುಂದೆ ನನ್ನ ಮಗನೇ ನನಗೆ ಸರ್ವಸ್ವ ಎಂದು ಸೌಂದರ್ಯ ಹೇಳಿಕೊಂಡಿದ್ದಾರೆ. ಸೌಂದರ್ಯ ಅವರು ಗ್ರಾಫಿಕ್ ಡಿಸೈನರ್ ಹಾಗೂ ಚಿತ್ರ ನಿರ್ಮಾಪಕಿ. ಲಿಂಕ್

ಮುತ್ತಪ್ಪ ರೈ ಮತ್ತೊಂದು ಮದುವೆ

ಮುತ್ತಪ್ಪ ರೈ ಮತ್ತೊಂದು ಮದುವೆ

ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಮತ್ತೊಮ್ಮೆ ಮದುವೆಯಾಗಿದ್ದಾರೆ. ಉದ್ಯಮಿ, ಸಮಾಜಸೇವಕ ಮುತ್ತಪ್ಪ ರೈ ಅವರು ತಮ್ಮ ಬಿಡದಿಯ ನಿವಾಸದಲ್ಲಿ ಅನುರಾಧ ಎಂಬುವರನ್ನು ಸರಳವಾಗಿ ವರಿಸಿದ್ದಾರೆ. ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮುತ್ತಪ್ಪ ರೈ ಹಾಗೂ ಅನುರಾಧಾರನ್ನು ಹರಸಲು ರೈ ಕುಟುಂಬ ಹಾಗೂ ಆಪ್ತರು ಮಾತ್ರ ಬಂದಿದ್ದರು. 2013 ಏಪ್ರಿಲ್ 28ರಂದು ಸಿಂಗಾಪುರದಲ್ಲಿ ರೈ ಅವರ ಮೊದಲ ಪತ್ನಿ ರೇಖಾ ರೈ ನಿಧನರಾಗಿದ್ದರು. ರೈ ಅವರಿಗೆ ರಾಕಿ, ರಿಕ್ಕಿ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ. ಲಿಂಕ್

ಎಷ್ಟೆಲ್ಲ ನಿಯಮ, ಅಷ್ಟೆಲ್ಲ ಗೊಂದಲ

ಎಷ್ಟೆಲ್ಲ ನಿಯಮ, ಅಷ್ಟೆಲ್ಲ ಗೊಂದಲ

ಅಪನಗದೀಕರಣದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದು ನವೆಂಬರ್ 8ರಂದು. ಆ ನಂತರ ತೆರಿಗೆ ದರ ಕಡಿಮೆ ಅಗುತ್ತೆ, ಚಿನ್ನದ ಮೇಲೆ ಕಣ್ಣು, ಲಾಕರ್ ಕೂಡ ಬಿಡಲ್ವಂತೆ. ಆಸ್ತಿ ಬಗ್ಗೆ ಕೂಡ ಪಟ್ಟಿ ತಯಾರಿ ಆಗ್ತಿದೆಯಂತೆ ಹೀಗೆ ಮೂಲ ಗೊತ್ತಿಲ್ಲದ ಸುದ್ದಿಯ ಮಹಾಪೂರ ಹರಿಯಿತು. ಇಷ್ಟು ದಿನದಲ್ಲಿ ಸರಕಾರ ಘೋಷಿಸಿದ, ಬದಲಿಸಿದ ನಿಯಮಗಳ ಬಗ್ಗೆ ಹಿನ್ನೋಟ ನೋಡಿಬರೋಣ. ಲಿಂಕ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
These are the articles which are heighest read in Oneindia Kannada.
Please Wait while comments are loading...