ಬೆಂಗಳೂರಿನಲ್ಲಿ ರಜನಿಕಾಂತ್‌ ಪತ್ನಿ ಲತಾ ರಜಿನಿಕಾಂತ್‌ಗೆ ಜಾಮೀನು ಮಂಜೂರು

ಬೆಂಗಳೂರು, ಡಿಸೆಂಬರ್‌ 27: ಚೆನ್ನೈ ಮೂಲದ ಆಡ್ ಏಜೆನ್ಸಿ ಕಂಪನಿಯು ದಾಖಲಿಸಿದ್ದ ಪ್ರಕರಣದಲ್ಲಿ ಜಾಮೀನು ಪಡೆಯಲು ನಟ ರಜನಿಕಾಂತ್ ಅವರ ಪತ್ನಿ ಲತಾ ರಜಿನಿಕಾಂತ್ ಅವರು ಬೆಂಗಳೂರಿನ 1 ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರಾದರು.

ಲತಾ ರಜನಿಕಾಂತ್ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ರಜನಿಕಾಂತ್‌ ನಟನೆಯ ಕೊಚ್ಚಾಡಿಯನ್‌ ಸಿನೆಮಾದಿಂದ ಆದ ನಷ್ಟವನ್ನು ತುಂಬಿಕೊಟ್ಟಿಲ್ಲ ಎಂದು ಕಂಪೆನಿ ಕೇಸ್‌ ಹಾಕಿತ್ತು. ಅಕ್ಟೋಬರ್ 10 ರಂದು ಚೆನ್ನೈ ಮೂಲದ ಕಂಪನಿಯು ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದರಿಂದ ಲತಾ ರಜನಿಕಾಂತ್ ವಿರುದ್ಧ ವಿಚಾರಣೆ ಕೈಗೊಳ್ಳಲಾಯಿತು.

 Bail granted to Rajinikanths wife Latha Rajinikanth in Bengaluru

ಪ್ರಕರಣ ಏನು:

ಚೆನ್ನೈ ಮೂಲದ ಆಡ್ ಬ್ಯೂರೋ ಅಡ್ವರ್ಟೈಸಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಮೀಡಿಯಾ ಒನ್ ಎಂಟರ್‌ಟೈನ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮುರಳಿ ಎಂಬ ವ್ಯಕ್ತಿಗೆ ರೂ 6.2 ಕೋಟಿ ಸಾಲವನ್ನು ನೀಡಿತ್ತು. ಅವರು ಮೋಷನ್ ಪಿಕ್ಚರ್ ತಂತ್ರಜ್ಞಾನವನ್ನು ಬಳಸಿಕೊಂಡು ರಜನಿಕಾಂತ್ ಅಭಿನಯದ 'ಕೊಚ್ಚಡೈಯಾನ್' ಚಿತ್ರವನ್ನು ಮಾಡಿದ್ದರು. ಮುರಳಿಗೆ ನೀಡಿದ ಸಾಲಕ್ಕೆ ಲತಾ ರಜನಿಕಾಂತ್ ಜಾಮೀನುದಾರರಾಗಿ ಸಹಿ ಹಾಕಿದ್ದರು.

2016 ರಲ್ಲಿ ಆಡ್ ಬ್ಯೂರೋ ಅಡ್ವರ್ಟೈಸಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಮುರಳಿ ಮತ್ತು ಲತಾ ರಜನಿಕಾಂತ್ ವಿರುದ್ಧ ವಂಚನೆ, ಸಾಕ್ಷ್ಯವನ್ನು ತಿರುಚುವುದು ಮತ್ತು ಮುರಳಿ ಸಾಲವನ್ನು ಮರುಪಾವತಿಸಲು ವಿಫಲವಾದ ನಂತರ ಸುಳ್ಳು ವರದಿಯನ್ನು ಸಲ್ಲಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದೆ.

ವರದಿಗಳ ಪ್ರಕಾರ, ಕರ್ನಾಟಕ ಹೈಕೋರ್ಟ್ ಫೋರ್ಜರಿ, ಸುಳ್ಳು ಹೇಳಿಕೆ ಮತ್ತು ವಂಚನೆ ಆರೋಪಗಳನ್ನು ಒಳಗೊಂಡಂತೆ ಪ್ರಕರಣದ ಒಂದು ಭಾಗವನ್ನು ರದ್ದುಗೊಳಿಸಿದ್ದು, ಸಮರ್ಪಕ ಸಾಕ್ಷ್ಯವನ್ನು ಸಲ್ಲಿಸಿಲ್ಲ ಎಂದು ಹೇಳಿದೆ.

ಆಡ್ ಬ್ಯೂರೋ ಕಂಪನಿಯು ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಸುಪ್ರೀಂ ಕೋರ್ಟ್ ಲತಾ ರಜನಿಕಾಂತ್ ವಿರುದ್ಧದ ಆರೋಪಗಳನ್ನು ಮರುಸ್ಥಾಪಿಸಿ ಬೆಂಗಳೂರಿನ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ ಎಂದು ವರದಿಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+