ತಮಿಳುನಾಡಿನಲ್ಲಿ ಜೈಲರ್ ಹವಾ: ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಬಿಡುಗಡೆ ದಿನ ರಜೆ ಘೋಷಿಸಿದ ಕಂಪನಿಗಳು- ಯಾವುವು ತಿಳಿಯಿರಿ
ಚೆನ್ನೈ, ಆಗಸ್ಟ್ 07: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರವು ಆಗಸ್ಟ್ 10 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ತಮಿಳುನಾಡಿನ ಅಭಿಮಾನಿಗಳು ರಜನಿಕಾಂತ್ ನಟನೆಯನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಬಹುದಿನಗಳ ಬಳಿಕ ಬಿಡುಗಡೆಯಾಗುತ್ತಿರುವ ಸೂಪರ್‌ಸ್ಟಾರ್ ಚಿತ್ರವನ್ನು ಮೊದಲನೇ ದಿನವೇ ನೋಡಬೇಕೆನ್ನುವುದು ಲಕ್ಷಾಂತರ ಅಭಿಮಾನಿಗಳ ಕನಸಾಗಿರುತ್ತದೆ. ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಚೆನ್ನೈ ಕಂಪನಿಗಳು ಮುಂದಾಗಿವೆ.
ರಾಜ್ಯದಾದ್ಯಂತ ಅನೇಕ ಖಾಸಗಿ ಕಂಪನಿಗಳಲ್ಲಿ ಜೈಲರ್ ಬಿಡುಗಡೆಯ ದಿನಾಂಕದಂದು ರಜೆಯ ವಿನಂತಿಗಳು ಹೆಚ್ಚುತ್ತಿವೆ. ಇದರಿಂದಾಗಿ ಸಂಸ್ಥೆಗಳು ಆಗಸ್ಟ್ 10 ಅನ್ನು ರಜೆ ಎಂದು ಘೋಷಿಸಲು ನಿರ್ಧರಿಸುವ ಎಂದು ತಿಳಿದುಬಂದಿದೆ.

ಯುಎನ್‌ಒ ಆಕ್ವಾ ಕೇರ್ ಮತ್ತು ಸೇಲಂ ಸರ್ವೆ ಗ್ರೂಪ್ ಹೆಸರಿನ ಕಂಪನಿಯು ಆಗಸ್ಟ್ 10 ಅನ್ನು ಅಧಿಕೃತ ರಜಾದಿನವೆಂದು ಘೋಷಿಸಿದೆ. ಕಂಪನಿಗಳೇ ಉದ್ಯೋಗಿಗಳಿಗೆ ಟಿಕೆಟ್ ಖರೀದಿಸ ಮುಂದಾಗಿವೆ ಎಂದು ವರದಿಯಾಗಿದೆ.
ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಮತ್ತು ಮಲಯಾಳಿ ನಟ ಮೋಹನ್ ಲಾಲ್ ಅವರಂತಹ ಇತರ ರಾಜ್ಯಗಳ ತಾರೆಯರು ಸಹ ನಟಿಸಿರುವ ಈ ಚಿತ್ರವು ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಮಧುರೈ ಮೂಲದ ಕಂಪನಿ 'ಯುಎನ್‌ಒ ಆಕ್ವಾ ಕೇರ್' ತನ್ನ ಶಾಖೆಗಳಲ್ಲಿ ರಜೆ ಘೋಷಿಸಿದೆ. ಚೆನ್ನೈ, ಬೆಂಗಳೂರು, ತಿರುಚ್ಚಿ, ತಿರುನಲ್ವೇಲಿ, ಚೆಂಗಲ್‌ಪಟ್ಟು, ಮಟ್ಟುತವಾನಿ, ಅರಪಾಲಯಂ ಮತ್ತು ಅಳಗಪ್ಪನ್‌ನಗರದಲ್ಲಿ ಚಿತ್ರ ಬಿಡುಗಡೆಯ ದಿನದಂದು ರಜೆ ನೀಡಲು ನಿರ್ಧರಿಸಿದೆ.
'ಸೂಪರ್‌ಸ್ಟಾರ್ ರಜನಿಕಾಂತ್ ಅವರ ಚಿತ್ರ ಜೈಲರ್ ಬಿಡುಗಡೆಯ ದಿನವಾದ ಆಗಸ್ಟ್ 10ರಂದು ರಜಾದಿನವನ್ನು ಘೋಷಿಸಲು ನಿರ್ಧರಿಸಿದ್ದೇವೆ. ಎಚ್‌ಆರ್ ಡಿಪಾರ್ಟ್‌ಮೆಂಟ್‌ಗೆ ರಾಶಿಗಟ್ಟಲೇ ರಜಾ ವಿನಂತಿಗಳು ಬಂದಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಂಪನಿಯೇ ರಜಾದಿನವನ್ನು ಘೋಷಿಸಿದೆ. ಯುಎನ್‌ಒ ಆಕ್ವಾ ಉದ್ಯೋಗಿಗಳಿಗೆ ಉಚಿತ ಟಿಕೆಟ್‌ಗಳನ್ನು ಒದಗಿಸಲಿದೆ' ಎಂದು ಕಂಪನಿಯು ಸುತ್ತೋಲೆ ತಿಳಿಸಿದೆ.

ಅದೇ ರೀತಿ, ಸೇಲಂ ಸರ್ವೆ ಗ್ರೂಪ್ ಎನ್ನುವ ಕಂಪನಿಯು ರಜೆ ಉದ್ಯೋಗಿಗಳಿಗೆ ರಜೆ ಘೋಷಿಸಿದೆ. ಈ ಕಂಪನಿಯು ದೇಶಾದ್ಯಂತ 2000 ಕ್ಕೂ ಹೆಚ್ಚು ಜನರನ್ನು ಹೊಂದಿರುವ ಭೂಮಾಪನ ಕಂಪನಿಯಾಗಿದೆ. ಜೈಲರ್ ಬಿಡುಗಡೆ ದಿನದಂದು ಚೆನ್ನೈ, ಬೆಂಗಳೂರು, ಕೊಯಮತ್ತೂರು, ಗೋವಾ, ಮುಂಬೈ ಮತ್ತು ಒಡಿಶಾ ಶಾಖೆಗಳಲ್ಲಿ ಕೆಲಸ ಮಾಡುವ ತನ್ನ ಎಲ್ಲಾ ಉದ್ಯೋಗಿಗಳಿಗೆ ರಜೆ ಅನ್ವಯಿಸುತ್ತದೆ ಎಂದು ಅದು ಹೇಳಿದೆ. ಈ ಕಂಪನಿಯೂ ಸಹ ತಮ್ಮ ಉದ್ಯೋಗಿಗಳಿಗೆ ಉಚಿತ ಚಲನಚಿತ್ರ ಟಿಕೆಟ್‌ಗಳನ್ನು ನೀಡಲು ನಿರ್ಧರಿಸಿದೆ.
ಈ ಖಾಸಗಿ ಸಂಸ್ಥೆಗಳು ತೆಗೆದುಕೊಂಡ ನಿರ್ಣಯವು ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರ ಗಮನವನ್ನು ಸೆಳೆದಿದೆ. ಅಭಿಮಾನಿಗಳು ಮತ್ತು ಚಿತ್ರಪ್ರೇಮಿಗಳು ಕಂಪನಿಯ ನಿರ್ಧಾರಗಳನ್ನು ಶ್ಲಾಘಿಸಿದ್ದಾರೆ.

ಆಗಸ್ಟ್ 3 ರಂದು ಬಿಡುಗಡೆಯಾದ ಟ್ರೇಲರ್ ಅಂತರ್ಜಾಲದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಟ್ರೈಲರ್ ಅನ್ನು ಯೂಟ್ಯೂಬ್ ಅಲ್ಲಿ ಬಿಡುಗಡೆ ಮಾಡಿದ ತಕ್ಷಣ ಎಲ್ಲೆಡೆಯಿಂದ ಅಭಿಮಾನಿಗಳು ತಮ್ಮ ಕಾಮೆಂಟ್‌ಗಳನ್ನು ಹಾಕಿದ್ದಾರೆ. ಟ್ರೈಲರ್ ಅನ್ನು ಲೈಕ್ ಮಾಡಿದ್ದಾರೆ.












Click it and Unblock the Notifications