ಸೂಪರ್ ಸ್ಟಾರ್ ರಜನಿಕಾಂತ್ ಸಿಎಂ ಯೋಗಿ ಆದಿತ್ಯನಾಥ್ ಪಾದ ಮುಟ್ಟಿದ್ದು ಯಾಕೆ?
ಲಕ್ನೋ ಆಗಸ್ಟ್ 22: ತಮಿಳು ಸೂಪರ್ ಸ್ಟಾರ್ ನಟ ರಜನಿಕಾಂತ್ ಲಕ್ನೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಶನಿವಾರ ಭೇಟಿ ಮಾಡಿದರು. ಈ ವೇಳೆ ರಜನಿಕಾಂತ್ ಸಿಎಂ ಯೋಗಿ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅವರು ಸಿಎಂ ಪಾದಗಳನ್ನು ಯಾಕೆ ಮುಟ್ಟಿದರು ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.
ಈ ಬಗ್ಗೆ ಸ್ವತ: ರಜನಿಕಾಂತ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಯೋಗಿ ಅವರ ಪಾದಗಳನ್ನು ಏಕೆ ಮುಟ್ಟಿದ್ದಾರೆಂದು ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಸೋಮವಾರ ಸ್ಪಷ್ಟಪಡಿಸಿದ್ದಾರೆ. ನನಗೆ ಯೋಗಿಗಳ ಪಾದಗಳನ್ನು ಮುಟ್ಟುವ ಅಭ್ಯಾಸವಿದೆ ಎಂದು ಅವರು ಹೇಳಿದ್ದಾರೆ.

"ಅವರು ಸನ್ಯಾಸಿಯಾಗಲಿ ಅಥವಾ ಯೋಗಿಯಾಗಲಿ, ಅವರು ನನಗಿಂತ ಚಿಕ್ಕವರಾಗಿದ್ದರೂ ಸಹ ಅವರ ಪಾದಗಳನ್ನು ಸ್ಪರ್ಶಿಸುವ ಅಭ್ಯಾಸ ನನಗಿದೆ" ಎಂದು ರಜನಿಕಾಂತ್ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸನ್ಯಾಸಿಯಾಗಿ ತರಬೇತಿ ಪಡೆದ ಯೋಗಿ ಆದಿತ್ಯನಾಥ್ ಅವರನ್ನು 2014 ರಲ್ಲಿ ಗೋರಖನಾಥ ದೇವಾಲಯದ ಪ್ರಧಾನ ಅರ್ಚಕರನ್ನಾಗಿ ಮಾಡಲಾಯಿತು.
ತಮಿಳು ನಟ ಶನಿವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದರು. ಅದೇ ದಿನ ಲಕ್ನೋದಲ್ಲಿ 'ಜೈಲರ್' ವಿಶೇಷ ಪ್ರದರ್ಶನವನ್ನು ನಡೆಸಲಾಯಿತು. ಇದರಲ್ಲಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭಾಗವಹಿಸಿದ್ದರು.
ಮರುದಿನ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಅಖಿಲೇಶ್ ಯಾದವ್ ಅವರನ್ನು ಅಪ್ಪುಗೆಯ ಫೋಟೋಗಳನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರ ಆಗಸ್ಟ್ 10 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ವರದಿಯಾಗಿದೆ.
ಜೊತೆಗೆ ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್ ನಟ ರಜನಿಕಾಂತ್ ಸೋಮವಾರ ಜನಸತ್ತಾ ದಳದ ಅಧ್ಯಕ್ಷ ಮತ್ತು ಕುಂದಾ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ರಾಜಾ ಭಯ್ಯಾ ಅವರು ನಟ ರಜನಿಕಾಂತ್ ಅವರನ್ನು ಶ್ಲಾಘಿಸಿ, ಅವರು ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಕ್ತಿ ಕ್ಷೇತ್ರದಲ್ಲೂ ಶ್ರೇಷ್ಠರು ಎಂದು ಹೊಗಳಿದ್ದಾರೆ. ರಜನಿಕಾಂತ್ ಅವರನ್ನು ಸೂಪರ್ ಹೀರೋ ಎಂದು ಕರೆದರು. ನಟ ರಜನಿಕಾಂತ್ ಅವರ ನಿವಾಸ ರಾಮಾಯಣದಲ್ಲಿ ಭೇಟಿಯಾದ ಬಗ್ಗೆ ರಾಜಾ ಭಯ್ಯಾ ಟ್ವೀಟ್ ಮಾಡಿದ್ದಾರೆ.
ಅವರೊಂದಿಗಿನ ತಮ್ಮ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಾಸಕರ ಕೈಯಲ್ಲಿ ಒಂದು ತಟ್ಟೆ ಇದೆ, ಅದರಲ್ಲಿ ಕೆಂಪು ಬಟ್ಟೆಯನ್ನು ಹರಡಲಾಗಿದೆ ಮತ್ತು ಅದರ ಮೇಲೆ ಗಂಗಾಜಲ ಮತ್ತು ಬಾಬಾ ವಿಶ್ವನಾಥ್ ಅವರ ವಿಭೂತಿ ಗೋಚರಿಸುತ್ತದೆ. ಮನೆಗೆ ಬಂದ ನಟ ರಜನಿಕಾಂತ್ ಅವರಿಗೆ ರಾಜಾ ಭಯ್ಯಾ ಈ ಉಡುಗೊರೆ ನೀಡಿದ್ದಾರೆ.
रामायण में "थलाइवा" @rajinikanth का स्वागत करने का सौभाग्य मिला।वे देश के सबसे बड़े महानायक हैं लेकिन केवल फिल्म जगत में ही नहीं अध्यात्म और भक्ति के क्षेत्र में भी वे उन्नत अवस्था में हैं।
— Raja Bhaiya (@Raghuraj_Bhadri) August 21, 2023
उन्हें बाबा विश्वनाथ की विभूति, दिनकर जी की रश्मिरथी और गोमुख का गंगाजल सादर भेंट किया। pic.twitter.com/BTpJ41uWRi
ರಜನಿಯೊಂದಿಗಿನ ಫೋಟೋ ಹಂಚಿಕೊಂಡ ರಾಜಾ ಭಯ್ಯಾ
ರಾಜಾ ಭಯ್ಯಾ ಅವರು ಈ ಚಿತ್ರವನ್ನು ಹಂಚಿಕೊಂಡು ಬರೆದಿದ್ದಾರೆ, ತಲೈವ ರಜನಿಕಾಂತ್ ಅವರನ್ನು ರಾಮಾಯಣದಲ್ಲಿ ಸ್ವಾಗತಿಸಲು ನನಗೆ ಒಂದು ಸೌಭಾಗ್ಯ. ಅವರು ದೇಶದ ಅತಿದೊಡ್ಡ ಸೂಪರ್ ಹೀರೋ.. ಆದರೆ ಚಿತ್ರರಂಗದಲ್ಲಿ ಮಾತ್ರವಲ್ಲದೆ ಆಧ್ಯಾತ್ಮಿಕತೆ ಮತ್ತು ಭಕ್ತಿ ಕ್ಷೇತ್ರದಲ್ಲೂ ಸಹ. ಅವರು ಇನ್ನಷ್ಟು ಮುಂದುವರೆಯಲಿ ಎಂದು ಗೌರವದಿಂದ ಬಾಬಾ ವಿಶ್ವನಾಥ್ ಅವರ ವಿಭೂತಿ, ದಿನಕರ್ಜಿಯವರ ರಶ್ಮಿರತಿ ಮತ್ತು ಗಂಗಾಜಲವನ್ನು ಉಡುಗೊರೆಯಾಗಿ ನೀಡಿದರು.












Click it and Unblock the Notifications