ರಾಜಾ ಭಯ್ಯಾ ಅವರನ್ನು ಭೇಟಿಯಾದ ರಜನಿಕಾಂತ್: ವಿಶೇಷ ಉಡುಗೊರೆ ನೀಡಿದ ಕುಂದಾ ಶಾಸಕ!
ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್ ನಟ ರಜನಿಕಾಂತ್ ಸೋಮವಾರ ಜನಸತ್ತಾ ದಳದ ಅಧ್ಯಕ್ಷ ಮತ್ತು ಕುಂದಾ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಅವರನ್ನು ಭೇಟಿಯಾದರು. ಇಂದು ಬೆಳಗ್ಗೆ ರಾಜಾ ಭಯ್ಯಾ ಅವರ ನಿವಾಸ ರಾಮಾಯಣಕ್ಕೆ ಆಗಮಿಸಿದ ರಜನಿಕಾಂತ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜಾ ಭಯ್ಯಾ ಅವರು ನಟ ರಜನಿಕಾಂತ್ ಅವರನ್ನು ಶ್ಲಾಘಿಸಿ, ಅವರು ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಕ್ತಿ ಕ್ಷೇತ್ರದಲ್ಲೂ ಶ್ರೇಷ್ಠರು ಎಂದು ಹೇಳಿದರು. ರಜನಿಕಾಂತ್ ಅವರನ್ನು ಸೂಪರ್ ಹೀರೋ ಎಂದು ಕರೆದರು. ನಟ ರಜನಿಕಾಂತ್ ಅವರ ನಿವಾಸ ರಾಮಾಯಣದಲ್ಲಿ ಭೇಟಿಯಾದ ಬಗ್ಗೆ ರಾಜಾ ಭಯ್ಯಾ ಟ್ವೀಟ್ ಮಾಡಿದ್ದಾರೆ.

ಅವರೊಂದಿಗಿನ ತಮ್ಮ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಾಸಕರ ಕೈಯಲ್ಲಿ ಒಂದು ತಟ್ಟೆ ಇದೆ, ಅದರಲ್ಲಿ ಕೆಂಪು ಬಟ್ಟೆಯನ್ನು ಹರಡಲಾಗಿದೆ ಮತ್ತು ಅದರ ಮೇಲೆ ಗಂಗಾಜಲ ಮತ್ತು ಬಾಬಾ ವಿಶ್ವನಾಥ್ ಅವರ ವಿಭೂತಿ ಗೋಚರಿಸುತ್ತದೆ. ಮನೆಗೆ ಬಂದ ನಟ ರಜನಿಕಾಂತ್ ಅವರಿಗೆ ರಾಜಾ ಭಯ್ಯಾ ಈ ಉಡುಗೊರೆ ನೀಡಿದ್ದಾರೆ.
रामायण में "थलाइवा" @rajinikanth का स्वागत करने का सौभाग्य मिला।वे देश के सबसे बड़े महानायक हैं लेकिन केवल फिल्म जगत में ही नहीं अध्यात्म और भक्ति के क्षेत्र में भी वे उन्नत अवस्था में हैं।
— Raja Bhaiya (@Raghuraj_Bhadri) August 21, 2023
उन्हें बाबा विश्वनाथ की विभूति, दिनकर जी की रश्मिरथी और गोमुख का गंगाजल सादर भेंट किया। pic.twitter.com/BTpJ41uWRi
ರಜನಿಯೊಂದಿಗಿನ ಫೋಟೋ ಹಂಚಿಕೊಂಡ ರಾಜಾ ಭಯ್ಯಾ
ರಾಜಾ ಭಯ್ಯಾ ಅವರು ಈ ಚಿತ್ರವನ್ನು ಹಂಚಿಕೊಂಡು ಬರೆದಿದ್ದಾರೆ, ತಲೈವ ರಜನಿಕಾಂತ್ ಅವರನ್ನು ರಾಮಾಯಣದಲ್ಲಿ ಸ್ವಾಗತಿಸಲು ನನಗೆ ಒಂದು ಸೌಭಾಗ್ಯ. ಅವರು ದೇಶದ ಅತಿದೊಡ್ಡ ಸೂಪರ್ ಹೀರೋ.. ಆದರೆ ಚಿತ್ರರಂಗದಲ್ಲಿ ಮಾತ್ರವಲ್ಲದೆ ಆಧ್ಯಾತ್ಮಿಕತೆ ಮತ್ತು ಭಕ್ತಿ ಕ್ಷೇತ್ರದಲ್ಲೂ ಸಹ. ಅವರು ಇನ್ನಷ್ಟು ಮುಂದುವರೆಯಲಿ ಎಂದು ಗೌರವದಿಂದ ಬಾಬಾ ವಿಶ್ವನಾಥ್ ಅವರ ವಿಭೂತಿ, ದಿನಕರ್ಜಿಯವರ ರಶ್ಮಿರತಿ ಮತ್ತು ಗಂಗಾಜಲವನ್ನು ಉಡುಗೊರೆಯಾಗಿ ನೀಡಿದರು.
ಸಿಎಂ ಯೋಗಿಯ ಪಾದ ಮುಟ್ಟಿದ ರಜನಿಕಾಂತ್
ನಟ ರಜನಿಕಾಂತ್ ಅವರು ಶುಕ್ರವಾರ ಸಂಜೆ ಲಕ್ನೋ ತಲುಪಿದರು. ನಂತರ ಇಲ್ಲಿ ಎಲ್ಲಾ ದೊಡ್ಡ ನಾಯಕರನ್ನು ಭೇಟಿ ಮಾಡಿದರು. ಶನಿವಾರ ರಾಜಭವನದಲ್ಲಿ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದ ರಜನಿಕಾಂತ್, ಸಂಜೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ಹೋದ ತಕ್ಷಣ ಸಿಎಂ ಯೋಗಿ ಅವರ ಪಾದ ಮುಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಾದ ನಂತರ ಅವರು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರೊಂದಿಗೆ 'ಜೈಲರ್' ಚಿತ್ರವನ್ನು ವೀಕ್ಷಿಸಿದರು.
ಅಖಿಲೇಶ್ ಯಾದವ್ ಅಪ್ಪಿಕೊಂಡ ರಜನಿಕಾಂತ್
ಭಾನುವಾರ ರಜನಿಕಾಂತ್ ಅವರು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅವರು ಅಖಿಲೇಶ್ ಯಾದವ್ ಅವರನ್ನು ಭೇಟಿಯಾದ ತಕ್ಷಣ ಅವರನ್ನು ಅಪ್ಪಿಕೊಂಡರು. ತಮ್ಮ ಸ್ನೇಹ ಒಂಬತ್ತು ವರ್ಷಗಳಷ್ಟು ಹಳೆಯದು ಎಂದು ರಜನಿಕಾಂತ್ ಹೇಳಿದ್ದಾರೆ. ಇದರ ನಂತರ, ಅವರು ಲಕ್ನೋದಿಂದ ನೇರವಾಗಿ ಅಯೋಧ್ಯೆಗೆ ತೆರಳಿದರು. ಅಲ್ಲಿ ಅವರು ರಾಮಲಾಲನ ದರ್ಶನವನ್ನು ಪಡೆದರು ಮತ್ತು ಅವರು ತಮ್ಮನ್ನು ತುಂಬಾ ಅದೃಷ್ಟವಂತರು ಎಂದು ಹೇಳಿಕೊಂಡಿದ್ದಾರೆ. ಅವರು ರಾಮಲಾಲನ ದರ್ಶನ ಪಡೆಯಲು ಹಲವು ವರ್ಷಗಳಿಂದ ಕಾಯುತ್ತಿದ್ದರು, ಇಂದು ಅದು ಪೂರ್ಣಗೊಂಡಿದೆ ಎಂದು ಅವರು ಹೇಳಿಕೊಂಡರು.












Click it and Unblock the Notifications