Rajinikanth: 33 ವರ್ಷಗಳ ಬಳಿಕ ಜೊತೆಯಾದ ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್
ಜೈಲರ್ ಸಿನಿಮಾದ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ಸೂಪರ್ ಸ್ಟಾರ್ ರಜನಿಕಾಂತ್ ಈಗ ತಮ್ಮ 170ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ಅಮಿತಾಬ್ ಬಚ್ಚನ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಬುಧವಾರ ಸೆಟ್‌ನಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿರುವ ನಟ ರಜನಿಕಾಂತ್, ದಿಗ್ಗಜ ನಟನ ಜೊತೆ ಕೆಲಸ ಮಾಡಲು ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ಟ್ವೀಟ್ ಮಾಡಿರುವ ಅವರು, "33 ವರ್ಷಗಳ ನಂತರ, ನಾನು ನನ್ನ ಗುರು, ಅಮಿತಾಬ್ ಬಚ್ಚನ್ ಅವರೊಂದಿಗೆ ಮುಂಬರುವ ಲೈಕಾ ನಿರ್ಮಾಣದ, ಟಿ.ಜೆ ಜ್ಞಾನವೇಲ್ ನಿರ್ದೇಶನದ "ತಲೈವರ್ 170" ಸಿನಿಮಾದಲ್ಲಿ, ಮತ್ತೆ ಕೆಲಸ ಮಾಡುತ್ತಿದ್ದೇನೆ. ನನ್ನ ಹೃದಯವು ಸಂತೋಷದಿಂದ ಮಿಡಿಯುತ್ತಿದೆ! " ಎಂದು ಹೇಳಿದ್ದಾರೆ.

ಬಿಳಿ ಶರ್ಟ್ ಮತ್ತು ವಿಗ್‌ನಲ್ಲಿ ರಜನಿಕಾಂತ್ ಗುಲಾಬಿ ಮತ್ತು ನೀಲಿ ಬಣ್ಣದ ಜಾಕೆಟ್ ಮತ್ತು ದೊಡ್ಡ ಕನ್ನಡಕವನ್ನು ಧರಿಸಿರುವ ಅಮಿತಾಬ್ ಬಚ್ಚನ್ ಪಕ್ಕದಲ್ಲಿ ನಗುತ್ತಿರುವುದನ್ನು ಫೋಟೋ ಫೋಟೊದಲ್ಲಿ ನೋಡಬಹುದಾಗಿದೆ.
ಅಭಿಮಾನಿಗಳ ಮೆಚ್ಚುಗೆ
ರಜನಿಕಾಂತ್ ಅವರ ಟ್ವೀಟ್‌ಗೆ ಸಾವಿರಾರು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದು, ಅವರ ಸರಳತೆಯನ್ನು ಹಾಡಿ ಹೊಗಳಿದ್ದಾರೆ. "ಇವರು ರಜನಿಕಾಂತ್, ಹಿರಿಯರಿಗೆ ಅವರು ತೋರಿಸುವ ಗೌರವವನ್ನು ನೋಡಿ, ಕಳೆದ 5 ದಶಕಗಳಿಂದ ಅವರು ತಮಿಳು ಚಿತ್ರರಂಗವನ್ನು ಆಳಲು ಇದೇ ಕಾರಣ" ಎಂದು ಹೇಳಿದ್ದಾರೆ.
"ರಜನಿ ಸರ್ ಮಾತನಾಡುವಾಗ ಗೌರವ ಯಾವಾಗಲೂ ಹೆಚ್ಚಾಗುತ್ತದೆ, ಅವರು ಎಂತಹ ಅದ್ಭುತ ವ್ಯಕ್ತಿ!" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
After 33 years, I am working again with my mentor, the phenomenon, Shri Amitabh Bachchan in the upcoming Lyca’s "Thalaivar 170" directed by T.J Gnanavel. My heart is thumping with joy!@SrBachchan @LycaProductions @tjgnan#Thalaivar170 pic.twitter.com/RwzI7NXK4y
— Rajinikanth (@rajinikanth) October 25, 2023
1991ರಲ್ಲಿ ಒಟ್ಟಿಗೆ ಕೆಲಸ
ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಕೊನೆಯದಾಗಿ 1991 ರಲ್ಲಿ ಮುಕುಲ್ ಆನಂದ್ ನಿರ್ದೇಶನದ ಹಮ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಮಾರ್ಚ್‌ನಲ್ಲಿ ಘೋಷಣೆಯಾದ ಪ್ರಸ್ತುತ ಹೆಸರಿಡದ ಚಿತ್ರವನ್ನು ಜೈ ಭೀಮ್ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ.
ನಟರಾದ ಫಹಾದ್ ಫಾಸಿಲ್ ಮತ್ತು ರಾಣಾ ದಗ್ಗುಬಾಟಿ ಕೂಡ ರಜನಿಕಾಂತ್ ಹೊಸ ಚಿತ್ರದಲ್ಲಿ ನಟಿಸುವುದು ಖಚಿತವಾಗಿದ್ದು, ಚಿತ್ರದ ಮೇಲೆ ನಿರೀಕ್ಷೆಯನ್ನು ಹೆಚ್ಚಿಸಿದೆ. ಸುಭಾಸ್ಕರನ್ ನಿರ್ಮಿಸಲಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ತಾರಾಗಣದಲ್ಲಿ ರಿತಿಕಾ ಸಿಂಗ್, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಕೂಡ ಇದ್ದಾರೆ.












Click it and Unblock the Notifications