ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್‌ ಪ್ರಯಾಣ ದರ ಶೇ.18ರಷ್ಟು ಹೆಚ್ಚಳಕ್ಕೆ ಸರ್ಕಾರ ಚಿಂತನೆ

By Nayana
|
Google Oneindia Kannada News

Recommended Video

ಸರಕಾರಿ ಬಸ್ ಪ್ರಯಾಣ ದರ ಶೀಘ್ರದಲ್ಲಿ ಏರಿಕೆ | Oneindia Kannada

ಬೆಂಗಳೂರು, ಸೆಪ್ಟೆಂಬರ್ 4: ಡೀಸೆಲ್ ದರ ಏರಿಕೆಯಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 186 ಕೋಟಿ ರೂ.ನಷ್ಟು ಹೊರೆಯಾಗಿದೆ. ಈ ಹಿನ್ನೆಲೆಯಲ್ಲಿ ಶೇ.18ರಷ್ಟು ಬಸ್ ದರ ಏರಿಕೆ ಮಾಡುವ ಶಿಫಾರಸ್ಸು ಇದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಹಳೆ ಬಸ್‌ಪಾಸ್‌ ಅವಧಿ ಸೆ.30ರವರೆಗೆ ವಿಸ್ತರಿಸಿದ ಬಿಎಂಟಿಸಿವಿದ್ಯಾರ್ಥಿಗಳ ಹಳೆ ಬಸ್‌ಪಾಸ್‌ ಅವಧಿ ಸೆ.30ರವರೆಗೆ ವಿಸ್ತರಿಸಿದ ಬಿಎಂಟಿಸಿ

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ, ಆದರೆ ಏಕಾಏಕಿ ದರ ಹೆಚ್ಚಳ ಮಾಡುವುದು ಸರಿಯಲ್ಲ ಎಂದು ಕಳೆದು ಮೂರ್ನಾಲ್ಕು ತಿಂಗಳಿನಿಂದ ಡೀಸೆಲ್ ದರ ಇಳಿಕೆಯಾಗುವುದೇ ಎಂದು ಕಾದಿದ್ದಾಯಿತು.

ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣ ಕಳವು!ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣ ಕಳವು!

ಆದರೆ ಡೀಸೆಲ್ ದರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ 186ಕೋಟಿ ರೂ.ನಷ್ಟು ನಷ್ಟವಾಗಿದೆ. ಬಸ್‌ ಪ್ರಯಾಣ ದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

State govt thinking of bus fare hike

ಸಾರಿಗೆ ಸಂಚಾರ ನಿಯಂತ್ರಣಕ್ಕೆ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ, ಬಸ್‌ಗಳ ಖರೀದಿ ಸದ್ಯಕ್ಕಿಲ್ಲ ಹಳೆಯ ಬಸ್‌ಗಳನ್ನೇ ಪರ್ಯಾಯವಾಗಿ ಓಡಿಸಲಾಗುತ್ತದೆ. ಅಗತ್ಯವಿರುವ ಕಡೆ ಹೆಚ್ಚಿನ ಬಸ್‌ಗಳನ್ನು ನಿಯೋಜಿಸಲಾಗುತ್ತದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುವಂತೆ ಹೆಚ್ಚಿನ ಬಸ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಇನ್ನೈದು ವರ್ಷ, ಬೆಂಗಳೂರಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಬಸ್ ಸಂಚಾರ: ಪರಂಇನ್ನೈದು ವರ್ಷ, ಬೆಂಗಳೂರಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಬಸ್ ಸಂಚಾರ: ಪರಂ

ಖಾಸಗಿಯವರು ವಿಶೇಷ ದಿನಗಳಲ್ಲಿ ದರ ಹೆಚ್ಚಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ, ಆದಷ್ಟು ಬೇಗ ನೆನಗುದಿಗೆ ಬಿದ್ದಿರುವ 760 ಆರ್‌ಟಿಓ ಹಾಗೂ ಟ್ರಾಫಿಕ್ ನಿರೀಕ್ಷಕರ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ಅವರು ತಿಳಿಸಿದರು.

English summary
Transport minister D.C.Thammanna said state government is thinking of increase 18 percent hike in bus fare following diesel price drastically increased in recent days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X