ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣ ಕಳವು!

By Gururaj
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 03 : ಬೆಂಗಳೂರು ನಗರದಲ್ಲಿ ಬೃಹತ್ ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ನಿಲ್ದಾಣ ಕಳುವಾಗಿದೆ. ಆರು ತಿಂಗಳಲ್ಲಿ ಬಸ್ ನಿಲ್ದಾಣ ಕಳುವಾದ 2ನೇ ಪ್ರಕರಣವಿದಾಗಿದೆ.

ಬಿಎಂಟಿಸಿ ಬಸ್ ನಿಲ್ದಾಣವನ್ನು ಕಳವು ಮಾಡಲಾಗಿದೆ ಎಂದು ಬಿಬಿಎಂಪಿ ಇಂಜಿನಿಯರ್ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಚ್ಚರಿಯ ವಿಷಯವೆಂದರೆ ಸದಾಶಿವನಗರ ಪೊಲೀಸ್ ಠಾಣೆಯ ಮುಂದಿರುವ ನಿಲ್ದಾಣವೇ ಕಳುವಾಗಿದೆ.

ಬಿಎಂಟಿಸಿ ಬಸ್ ಕದಿಯುತ್ತಿದ್ದ ಕೆಎಸ್ಆರ್ ಟಿಸಿ ಚಾಲಕ ಸೆರೆಬಿಎಂಟಿಸಿ ಬಸ್ ಕದಿಯುತ್ತಿದ್ದ ಕೆಎಸ್ಆರ್ ಟಿಸಿ ಚಾಲಕ ಸೆರೆ

ಹತ್ತು ವರ್ಷಗಳಿಂದ ಪೊಲೀಸ್ ಠಾಣೆ ಮುಂಭಾಗದಲ್ಲಿ ಬಸ್ ನಿಲ್ದಾಣವಿತ್ತು. ಕೆಲವು ದಿನಗಳ ಹಿಂದೆ ಪಿಪಿಪಿ ಮಾದರಿಯಲ್ಲಿ 1.5 ಲಕ್ಷ ಖರ್ಚು ಮಾಡಿ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು.

ಬೆಂಗಳೂರಲ್ಲಿ ಕದ್ದ ಬಿಎಂಟಿಸಿ ಬಸ್ ಆಂಧ್ರದಲ್ಲಿ ಸಿಕ್ತುಬೆಂಗಳೂರಲ್ಲಿ ಕದ್ದ ಬಿಎಂಟಿಸಿ ಬಸ್ ಆಂಧ್ರದಲ್ಲಿ ಸಿಕ್ತು

BMTC bus stand stolen in Sadashivanagar

ಬಿಬಿಎಂಪಿ ಕಾರ್ಯನಿರ್ವಾಹಕ ಇಂಜಿನಿಯರ್‌ ಅವರು ನಗರ ಪ್ರದಕ್ಷಿಣೆ ಕೈಗೊಂಡಾಗ ಬಸ್ ನಿಲ್ದಾಣ ಕಳುವಾಗಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಾರಿಗೆ ಸೆಸ್ ಹೇರುವ ನಿರ್ಧಾರದಿಂದ ಸದ್ಯಕ್ಕೆ ಹಿಂದೆ ಸರಿದ ಬಿಬಿಎಂಪಿಸಾರಿಗೆ ಸೆಸ್ ಹೇರುವ ನಿರ್ಧಾರದಿಂದ ಸದ್ಯಕ್ಕೆ ಹಿಂದೆ ಸರಿದ ಬಿಬಿಎಂಪಿ

2017ರ ನವೆಂಬರ್‌ನಲ್ಲಿ ನಂದಿನಿ ಲೇಔಟ್‌ ಬಡಾವಣೆ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣ ಕಳುವು ಮಾಡಲಾಗಿತ್ತು. ಈಗ ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ನಿಲ್ದಾಣ ಕಳುವಾಗಿದೆ.

'ಗುಜರಿ ವ್ಯಾಪಾರ ಮಾಡುವವರು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಅದೇ ಜಾಗದಲ್ಲಿ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸುತ್ತೇವೆ' ಎಂದು ಬಿಬಿಎಂಪಿ ಇಂಜಿನಿಯರ್ ಹೇಳಿದ್ದಾರೆ.

English summary
BBMP executive engineer filed a complaint to Sadashivanagar police about BMTC bus stand stolen near Sadashivanagar police station, Bengaluru. A bus shelter was constructed in a public-private partnership at a cost of Rs 1.5 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X