India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಗುರುತೇ ಬೇಡ; ಎಲಾನ್ ಮಸ್ಕ್ ಮಗ ಅಲ್ಲ ಮಗಳ ಲಿಂಗ ಪರಿವರ್ತನೆ, ನಾಮ ಬದಲಾವಣೆ

|
Google Oneindia Kannada News

ನವದೆಹಲಿ, ಜೂನ್ 25: ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎನಿಸಿರುವ ಎಲಾನ್ ಮಸ್ಕ್ ಕೌಟುಂಬಿಕ ಜೀವನದ ಬಗ್ಗೆ ಹಲವರ ಕುತೂಹಲದ ಕಣ್ಣು ನೆಟ್ಟಿದೆ. ಮಸ್ಕ್ ಅವರ ಮಗ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ತೃತೀಯ ಲಿಂಗಿಯಾಗಿ ಗುರುತಿಸಿಕೊಂಡಿರುವುದು ಹಳೆಯ ಸುದ್ದಿ. ಹೆಣ್ಣಾಗಿ ಗುರುತಿಸಿಕೊಂಡಿರುವ ಕ್ಸೇವಿಯರ್ ಮಸ್ಕ್ ಇದೀಗ ತನ್ನ ಹೆಸರನ್ನೂ ಬದಲಿಸಿಕೊಂಡು ಅವನಲ್ಲ, ಅವಳಾಗಿದ್ದಾಳೆ.

ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ 18 ವರ್ಷ ಪ್ರಾಯಕ್ಕೆ ಕಾಲಿಟ್ಟ ಬೆನ್ನಲ್ಲೇ ತನ್ನ ಹೆಸರು ಬದಲಾವಣೆ ಮಾಡಿಕೊಂಡಿದ್ಧಾರೆ. ಇದೀಗ ಅವರ ಹೊಸ ಹೆಸರು ವಿವಿಯಾನ್ ಜೆನ್ನಾ ವಿಲ್ಸನ್ ಎಂದಾಗಿದೆ. ಅವರ ಹೆಸರಿನ ಅಂತ್ಯದಲ್ಲಿದ್ದ ಮಸ್ಕ್ ಪದವನ್ನೇ ಕೈಬಿಟ್ಟಿರುವುದನ್ನು ಗಮನಿಸಬಹುದು.

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಟ್ವಿಟ್ಟರ್ ಉದ್ಯೋಗಿಗಳು; ಮೀಟಿಂಗ್‌ನಲ್ಲಿ ಎಲಾನ್ ಮಸ್ಕ್ ಹೇಳಿದ್ಧೇನು? ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಟ್ವಿಟ್ಟರ್ ಉದ್ಯೋಗಿಗಳು; ಮೀಟಿಂಗ್‌ನಲ್ಲಿ ಎಲಾನ್ ಮಸ್ಕ್ ಹೇಳಿದ್ಧೇನು?

ತನಗೆ ತನ್ನ ತಂದೆಯ ಯಾವ ಗುರುತೂ ಬೇಡ ಎಂದು ಹಠ ಹಿಡಿದು ಈ ಹುಡುಗಿ ಹೆಸರು ಬದಲಾಯಿಸಿಕೊಂಡಿದ್ದಾಳೆ.

"ಯಾವುದೇ ರೀತಿಯಲ್ಲಿ ನನ್ನ ಜೈವಿಕ ತಂದೆಯ ಯಾವ ಗುರುತು ಅಥವಾ ಸಂಬಂಧವೂ ಇಲ್ಲದಂತೆ ಬದುಕಬೇಕು," ಎಂದು ವಿವಿಯಾನ್ ಜೆನ್ನಾ ವಿಲ್ಸನ್ ತನ್ನ ಅರ್ಜಿಯಲ್ಲಿ ಮನವಿ ಮಾಡಿದ್ದರು.

 'ಭಾರತದಲ್ಲಿ ಕಾರು ತಯಾರಿಸಲ್ಲ'- ಎಲಾನ್ ಮಸ್ಕ್ ನಿಷ್ಠುರವಾಗಿ ಹೇಳಿದ್ದು ಯಾಕೆ? 'ಭಾರತದಲ್ಲಿ ಕಾರು ತಯಾರಿಸಲ್ಲ'- ಎಲಾನ್ ಮಸ್ಕ್ ನಿಷ್ಠುರವಾಗಿ ಹೇಳಿದ್ದು ಯಾಕೆ?

ಮಸ್ಕ್ ಸ್ಥಾನಕ್ಕೆ ಬಂದಿರುವ ವಿಲ್ಸನ್ ಎಂಬುದು ಈಕೆಯ ತಾಯಿಯ ಉಪನಾಮವಾಗಿದೆ. ವಿವಿಯಾನ್ ಜೆನ್ನಾ ವಿಲ್ಸನ್ ತಾಯಿ ಹೆಸರು ಜಸ್ಟಿನ್ ವಿಲ್ಸನ್. ಜಸ್ಟಿನ್ ವಿಲ್ಸನ್ ಮತ್ತು ಇಲಾನ್ ಮಸ್ಕ್ ೨೦೦೮ರಲ್ಲೇ ವಿಚ್ಛೇದನ ಪಡೆದಿದ್ದಾರೆ.

ಅಪ್ಪನ ಮೇಲೆ ಯಾಕೆ ಸಿಟ್ಟು?

ಅಪ್ಪನ ಮೇಲೆ ಯಾಕೆ ಸಿಟ್ಟು?

ಎಲಾನ್ ಮಸ್ಕ್ ಅನೇಕ ಬಾರಿ ತೃತೀಯ ಲಿಂಗಿಗಳಿಗೆ ಬೆಂಬಲ ಕೊಟ್ಟಿದ್ದಾರೆ. ತನ್ನ ಮಗ ತೃತೀಯ ಲಿಂಗಿ ಆಗಿರುವುದಕ್ಕೆ ಮಸ್ಕ್ ನೀಡಿದ ಬಹಿರಂಗ ಬೆಂಬಲ ಅದು. ಆದರೂ ಕೂಡ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ಅಕಾ ವಿವಿಯಾನ್ ಜೆನ್ನಾ ವಿಲ್ಸನ್ ತನ್ನ ಅಪ್ಪನೊಂದಿಗೆ ಗುರುತಿಸಿಕೊಳ್ಳಲು ಯಾಕೆ ಹಿಂದೇಟು ಹಾಕುತ್ತಿದ್ದಾರೆಂಬುದು ಗೊತ್ತಾಗಿಲ್ಲ.

ವಿವಿಯಾನ್ ಜೆನ್ನಾ ವಿಲ್ಸನ್ ತಾಯಿ ಜಸ್ಟಿನ್ ವಿಲ್ಸನ್ ಮತ್ತು ಎಲಾನ್ ಮಸ್ಕ್ ಪರಸ್ಪರ ಪ್ರೀತಿಸಿ 2000ನೇ ವರ್ಷದಲ್ಲಿ ವಿವಾಹವಾದರು. ಈ ದಂಪತಿಗೆ ವಿವಿಯಾನ್ ಸೇರಿ ಅವಳಿಜವಳಿ ಮಕ್ಕಳಿದ್ದರು. 2008ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಆಗಿನಿಂದಲೂ ಮಕ್ಕಳನ್ನು ಇಬ್ಬರೂ ಒಬ್ಬರ ನಂತರ ಒಬ್ಬರಂತೆ ಹಂಚಿಕೊಂಡು ಸಲಹುತ್ತಿದ್ದಾರೆನ್ನಲಾಗಿದೆ.

ಇನ್ನು, ತಾಯಿ ಜಸ್ಟಿನ್ ವಿಲ್ಸನ್ ಒಬ್ಬ ಬರಹಗಾರ್ತಿ ಆಗಿದ್ದು ನಾಲ್ಕೈದು ಕಾದಂಬರಿಗಳನ್ನು ಬರೆದಿದ್ದಾರೆ. ಮದುವೆಯಾಗಿದ್ದಾಗ ಮಸ್ಕ್ ತನ್ನನ್ನು ಗೌರವಿಸುತ್ತಿರಲಿಲ್ಲ. ನಮ್ಮ ದಾಂಪತ್ಯ ಸರಿ ಇರಲಿಲ್ಲ ಎಂದು ವಿಲ್ಸನ್ ಕೆಲ ಬಾರಿ ಹೇಳಿಕೊಂಡಿದ್ದಿದೆ.

ಮಸ್ಕ್ ವೈವಾಹಿಕ ಜೀವನ

ಮಸ್ಕ್ ವೈವಾಹಿಕ ಜೀವನ

ಎಲಾನ್ ಮಸ್ಕ್ ಮೂರು ವಿವಾಹವಾಗಿದ್ದಾರೆ. ಒಟ್ಟು 6 ಮಕ್ಕಳಿದ್ದಾರೆ. 2008ರಲ್ಲಿ ಜಸ್ಟಿನ್ ವಿಲ್ಸನ್‌ಗೆ ವಿಚ್ಛೇದನ ನೀಡಿದ ಬಳಿಕ 2010ರಲ್ಲಿ ನಟಿ ತಲುಲಾ ರಿಲೇ ಅವರನ್ನು ಮದುವೆಯಾದರು. ಎರಡು ವರ್ಷಗಳ ಬಳಿಕ ಇವರಿಗೂ ಡಿವೋರ್ಸ್ ನೀಡಿದರು. ೨೦೧೩ರಲ್ಲಿ ಮತ್ತೆ ಪುನರ್‌ವಿವಾಹವಾದರು. ಒಂದು ವರ್ಷದಲ್ಲೇ ಮತ್ತೆ ವಿಚ್ಛೇದನ ಪಡೆದರು.

2018ರಲ್ಲಿ ಕೆನಡಾದ ಹಾಡುಗಾರ್ತಿ ಗ್ರೀಮ್ಸ್ ಅವರನ್ನು ಮಸ್ಕ್ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರು ವಿವಾಹವಾಗದಿದ್ದರೂ ಲಿವ್-ಇನ್ ಸಂಬಂಧ ಬೆಳೆಸಿಕೊಂಡಿದ್ಧಾರೆ. ಗ್ರಿಮ್ಸ್‌ಗೆ ಹುಟ್ಟಿದ ಮಗುವಿಗೆ ಮಸ್ಕ್ ತಾಂತ್ರಿಕ ಪರಿಭಾಷೆಯ ಪದವೊಂದನ್ನು ನಾಮಕರಣ ಮಾಡಿದ್ದಾರೆ. ಕುತೂಹಲವೆಂದರೆ ಗ್ರಿಮ್ಸ್ ಮತ್ತು ಮಸ್ಕ್ ನಡುವಿನ ಸಂಬಂಧವೂ ಬಿರುಕು ಬಿಟ್ಟಿದೆ. ಇಬ್ಬರೂ ಸಂಪೂರ್ಣವಾಗಿ ಜೊತೆಯಾಗಿಲ್ಲ ಎಂದು ಹೇಳಲಾಗುತ್ತಿದೆ.

ಮಸ್ಕ್ ಕುಟುಂಬ ಹಿನ್ನೆಲೆ

ಮಸ್ಕ್ ಕುಟುಂಬ ಹಿನ್ನೆಲೆ

ಎಲಾನ್ ಮಸ್ಕ್ ಅವರ ಮನೆತನ ಬ್ರಿಟನ್ ಮೂಲದ್ದಾಗಿದೆ. ಬ್ರಿಟನ್ ಮೂಲಕ ಅಮೆರಿಕ, ಸೌತ್ ಆಫ್ರಿಕಾ ಮತ್ತು ಕೆನಡಾದಲ್ಲಿ ಕುಟುಂಬ ಸದಸ್ಯರು ಬೆಳೆದಿದ್ದಾರೆ. ಮಸ್ಕ್ ಅವರ ತಂದೆ ವಾಲ್ಟರ್ ಮಸ್ಕ್ ಸೌತ್ ಆಫ್ರಿಕಾದಿಂದ ಅಮೆರಿಕಕ್ಕೆ ವಲಸೆ ಬಂದವರಾಗಿದ್ದಾರೆ.

ಮಸ್ಕ್ ಕುಟುಂಬ ಅಪ್ಪಟ ವ್ಯಾಪಾರಿಗಳ ಮನೆತನ. ವಾಲ್ಟರ್ ಮಸ್ಕ್ ಅವರ ಆರು ಮಕ್ಕಳಲ್ಲಿ ಮೊದಲನೆಯವರೇ ಎಲಾನ್ ಮಸ್ಕ್.

ಮಸ್ಕ್ ಮನೆತನದ ಅನೇಕರು ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ಸಂಸ್ಥೆಗಳ ಸ್ಥಾಪಕರಾಗಿದ್ದಾರೆ.

ಮಸ್ಕ್ ಅವರ ಸಾಹಸಗಳು

ಮಸ್ಕ್ ಅವರ ಸಾಹಸಗಳು

ಎಲಾನ್ ಮಸ್ಕ್ ವೈಯಕ್ತಿಕ ಜೀವನ ಏನೇ ಇರಲಿ ಅವರ ಉದ್ಯಮ ಸಾಹಸ ಮಾತ್ರ ಎಂಥವರನ್ನೂ ಗಮನ ಸೆಳೆಯುವಂಥದ್ದು. ಸ್ಪೇಸ್‌ಎಕ್ಸ್ (SpaceX) ಮತ್ತು ಟೆಸ್ಲಾ ಇವರು ಸ್ಥಾಪಿಸಿದ ಪ್ರಮುಖ ಕಂಪನಿಗಳು. ನ್ಯೂರಾಲಿಂಕ್, ಪೇಪಾಲ್ ಇತ್ಯಾದಿ ಅನೇಕ ಕಂಪನಿಗಳನ್ನು ಇವರು ಆರಂಭಿಸಿದ್ದಾರೆ.

ಹೈಪರ್ ಲೂಪ್ ಎಂಬ ಹೊಸ ಮಾದರಿಯ ಸಾರಿಗೆ ವ್ಯವಸ್ಥೆಯನ್ನು ಜಗಕ್ಕೆ ಪರಿಚಯಿಸಿದ್ದು ಎಲಾನ್ ಮಸ್ಕ್ ಅವರೆಯೇ. ಇವರ ಸ್ಪೇಸ್ ಎಕ್ಸ್ ಕಂಪನಿ ರಾಕೆಟ್ ಇತ್ಯಾದಿಯನ್ನು ತಯಾರಿಸುತ್ತದೆ. ಇವರ ರಾಕೆಟ್‌ಗಳನ್ನು ಅಮೆರಿಕದ ನಾಸಾ ಸಂಸ್ಥೆ ಬಾಡಿಗೆಗೆ ಪಡೆಯುತ್ತದೆ. ಫಾಲ್ಕಾನ್ ಸರಣಿಯ ರಾಕೆಟ್‌ಗಳು ಇವರ ಸ್ಪೇಸ್ ಎಕ್ಸ್ ಕಂಪನಿಯಿಂದ ತಯಾರಾಗಿರುವಂಥವೇ.

ಎಲಾನ್ ಮಸ್ಕ್ ಅವರು ಅತ್ಯಂತ ಜನಪ್ರಿಯರಾಗಿದ್ದು ಮಾರ್ಸ್ ಯೋಜನೆ ಮೂಲಕ. ಮಂಗಳ ಗ್ರಹದಲ್ಲಿ ಮನುಷ್ಯರ ವಸಾಹತು ನಿರ್ಮಿಸಹೊರಟಿದ್ದಾರೆ ಇವರು. 2028ರೊಳಗೆ ಮಂಗಳನಲ್ಲಿ ಮೊದಲ ಮಾನವರನ್ನು ನೆಲೆಗೊಳಿಸುವುದಾಗಿ ಹಲವು ವರ್ಷಗಳ ಹಿಂದೆಯೇ ಮಸ್ಕ್ ಹೇಳಿದ್ದರು. ಆದರೆ, ಸದ್ಯಕ್ಕೆ ಅದು ಫಲಪ್ರದವಾಗುವುದು ಅನುಮಾನ.

ಈಗ ಮಸ್ಕ್ ಅವರು ಟ್ವಿಟ್ಟರ್ ಖರೀದಿಸಲು ಮುಂದಾಗುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Elon Musk's 18 year old transgender daughter has changed her name from Xavier Alexander Musk to Vivian Jenna Wilson. She wanted to live without any idendity of her biological father Elon Musk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X