ಶೀಘ್ರದಲ್ಲೇ ಬಳಕೆದಾರು Twitterನಲ್ಲಿ ಚಲನಚಿತ್ರ ವೀಕ್ಷಿಸಬಹುದು: ಎಲಾನ್‌ ಮಸ್ಕ್‌

ನವದೆಹಲಿ, ಜುಲೈ 3: ಟ್ವಿಟರ್ ಕಂಪನಿಯು ಶೀಘ್ರದಲ್ಲೇ ಬಳಕೆದಾರರಿಗೆ 3 ಗಂಟೆಗಳಿಗಿಂತ ಹೆಚ್ಚು ಉದ್ದದ ವೀಡಿಯೊಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಿದ್ದು, ಬಳಕೆದಾರರು ಶೀಘ್ರದಲ್ಲೇ ಸಂಪೂರ್ಣ ಚಲನಚಿತ್ರವನ್ನು ವೀಕ್ಷಣೆ ಮಾಡಲು ಸಾಧ್ಯವಾಗಬಹುದು ಎಂದು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಬಹಿರಂಗಪಡಿಸಿದ್ದಾರೆ.

ಪಾಡ್‌ಕಾಸ್ಟರ್‌ಗೆ ನೀಡಿದ ಉತ್ತರದಲ್ಲಿ ಎಲಾನ್‌ ಮಸ್ಕ್‌ ಈ ಯೋಜನೆ ಬಗ್ಗೆ ಮಾತನಾಡಿದ್ದು, ನಂತರ ಈ ಸಾಮಾಜಿಕ ವೇದಿಕೆಯಲ್ಲಿ ಹಾಸ್ಯ ಕಾನೂನುಬದ್ಧವಾಗಿದೆ ಎಂದು ಹೇಳಿ ಗೊಂದಲಕ್ಕೂ ಎಡೆಮಾಡಿಕೊಟ್ಟಿದ್ದಾರೆ.

Users can watch a movie on Twitter Soon: Elon Musk

ಪ್ರಸಿದ್ಧ ಲೆಕ್ಸ್ ಫ್ರಿಡ್‌ಮ್ಯಾನ್ ಪಾಡ್‌ಕ್ಯಾಸ್ಟ್‌ನ ಹೋಸ್ಟ್ ಮತ್ತು ಇತ್ತೀಚೆಗೆ ಮಸ್ಕ್‌ ಅವರೊಂದಿಗೆ ಜಿಯು ಜಿಟ್ಸು ತರಬೇತಿಯ ವೀಡಿಯೊವನ್ನು ಪೋಸ್ಟ್ ಮಾಡಿದ ಲೆಕ್ಸ್ ಫ್ರಿಡ್‌ಮನ್, "ನೈಸ್. ಟೈಮ್‌ಸ್ಟ್ಯಾಂಪ್‌ಗಳು, ಅಧ್ಯಾಯಗಳೊಂದಿಗೆ 3+ ಗಂಟೆಗಳ ಪಾಡ್‌ಕ್ಯಾಸ್ಟ್ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುವುದು ಉತ್ತಮವಾಗಿದೆ. ಪಿಎಸ್: ಥಿಯೋ ಅದ್ಭುತವಾಗಿದೆ ಎಂದು ಹೇಳಿದ್ದಾರೆ.

"ಧನ್ಯವಾದ ಎಲಾನ್! ಟ್ವಿಟರ್‌ಗೆ ಪಾಡ್‌ಕಾಸ್ಟ್‌ಗಳನ್ನು ತರಲು ನೀವು ಸಿದ್ಧರಾಗಿರುವಾಗ ನನಗೆ ತಿಳಿಸಿ. ನಿಮಗೆ ಸಹಾಯ ಮಾಡಲು ಸಂತೋಷವಾಗಿದೆ " ಎಂದು ವಾನ್ ಹೇಳಿದ್ದಾರೆ.

ಭಾನುವಾರವಷ್ಟೇ ಟ್ವಿಟ್ಟರ್‌ ನೋಡಲು ಮಿತಿ ಹೇರಿದ್ದ ಎಲಾನ್‌ ಮಸ್ಕ್‌, ಈಗ ಹೊಸ ಬದಲಾವಣೆಯನ್ನು ಘೋಷಿಸಿದ್ದಾರೆ. ಜನರು ಇಷ್ಟು ದಿನ ನೇರವಾಗಿ ಟ್ವೀಟ್ ಕ್ಲಿಕ್ ಮಾಡಿದರೆ ಅದನ್ನು ಸೈನ್‌ಇನ್ ಆಗದೇ ವೀಕ್ಷಣೆ ಮಾಡಬಹುದಿತ್ತು. ಆದರೆ ಇನ್ನೂ ಮುಂದೆ ಪ್ರತಿದಿನ ಹೀಗೆ ಕೆಲವು ಪೋಸ್ಟ್‌ಗಳನ್ನು ಮಾತ್ರ ನೋಡಲು ಸಾಧ್ಯ. ಉಳಿದ ಪೋಸ್ಟ್‌ಗಳನ್ನು ನೋಡಲು ಸೈನ್‌ಇನ್ ಆಗುವುದು ಅನಿವಾರ್ಯವಾಗಿದೆ.

ಎಲಾನ್ ಮಸ್ಕ್ ವಿವರಣೆ ನೀಡಿರುವ ಪ್ರಕಾರ ವೆರಿಫೈಡ್‌ ಖಾತೆ ಹೊಂದಿರುವ ಗ್ರಾಹಕರು ದಿನಕ್ಕೆ 6 ಸಾವಿರ ಪೋಸ್ಟ್, ಸಾಮಾನ್ಯ ಬಳಕೆದಾರರು ದಿನಕ್ಕೆ 600 ಪೋಸ್ಟ್ ಮತ್ತು ಹೊಸದಾಗಿ ಖಾತೆ ತೆರೆದವರು ದಿನಕ್ಕೆ 300 ಪೋಸ್ಟ್‌ ನೋಡಬಹುದು. ಬಳಿಕ ಹೆಚ್ಚಿನ ಪೋಸ್ಟ್‌ ವೀಕ್ಷಣೆ ಮಾಡಲು ಸೈನ್‌ಇನ್ ಆಗುವುದು ಕಡ್ಡಾಯವಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಮಾಡಿದ ಮೇಲೆ ಬಳಕೆದಾರರಿಗೆ ಉಚಿತವಾಗಿ ವೆರಿಫೈಡ್ ಅಕೌಂಟ್ ಬ್ಲೂ ಟಿಕ್ ಸಿಗುತ್ತಿಲ್ಲ. ಹಣ ಪಾವತಿ ಮಾಡಿದರೆ ಯಾರಿಗೆ ಬೇಕಾದರೂ ಸಹ ಬ್ಲೂ ಟಿಕ್ ನೀಡಲಾಗುತ್ತಿದೆ. ಇಂತಹ ಸಮಯದಲ್ಲಿಯೇ ಟ್ವೀಟ್ ಪೋಸ್ಟ್ ವೀಕ್ಷಣೆ ಮಾಡಲು ಮಿತಿ ಹೇರಲಾಗಿದೆ.

ಇದು ಹೇಗೆ ಜಾರಿಗೆ ಬರುತ್ತದೆ? ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ ಶನಿವಾರದಿಂದಲೇ ಬಳಕೆದಾರರಿಗೆ ಹೆಚ್ಚು ಟ್ವೀಟ್‌ ತೋರಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಆದರೆ ಟ್ವೀಟ್ ಡೆಕ್ ಮತ್ತು ಇತರ ಥರ್ಡ್ ಪಾರ್ಟಿ ಅಪ್ಲಿಕೇಶನ್‌ನಲ್ಲಿ ಯಾವುದೇ ಮಿತಿ ಇಲ್ಲದೇ ಪೋಸ್ಟ್‌ಗಳನ್ನು ನೋಡಲಾಗುತ್ತಿದೆ. ಎಲಾನ್ ಮಸ್ಕ್ ತಮ್ಮ ಟ್ವೀಟ್‌ನಲ್ಲಿ ಹಲವು ಸಂಸ್ಥೆಗಳು ಟ್ವಿಟರ್ ಡೇಟಾಗಳನ್ನು ಸ್ಕ್ರಾಪ್ ಮಾಡುತ್ತಿವೆ. ಇದು ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ. ಬಳಕೆದಾರರ ಅನುಭವದ ಮೇಲೆ ಪರಿಣಾಮ ಬೀರುವ ಡೇಟಾವನ್ನು ನಿಯಂತ್ರಿಸಲಾಗುತ್ತಿದೆ. ಹೀಗಾಗಿ ಸೈನ್‌ಇನ್ ಕಡ್ಡಾಯ ಮಾಡಲಾಗಿದೆ ಎಂದು ವಿವರಣೆ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+