Twitter New CEO : ಟ್ವಿಟ್ಟರ್‌ಗೆ ಹೊಸ ಸಿಇಒ ನೇಮಿಸಿದ ಎಲಾನ್ ಮಸ್ಕ್
ನ್ಯೂಯಾರ್ಕ್, ಮೇ 12: ಎಲಾನ್ ಮಸ್ಕ್ ಅಂತಿಮವಾಗಿ ಟ್ವಿಟರ್‌ಗೆ ಹೊಸ ಸಿಇಒ ಅನ್ನು ನೇಮಿಸಿಕೊಂಡಿದ್ದಾರೆ. ಎಲಾನ್ ಮಸ್ಕ್ ಅವರು ಟ್ವಿಟರ್ ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಾರೆ, ಟ್ವಿಟರ್ ನ ಮುನ್ನಡೆಸಲು ಮಹಿಳೆಯೊಬ್ಬರು ಬರುತ್ತಾರೆ ಎಂದು ಎಲೋನ್ ಮಸ್ಕ್ ಗುರುವಾರ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಎಲಾನ್ ಮಸ್ಕ್, ನಾನು ಟ್ವಿಟರ್‌ಗೆ ಹೊಸ ಸಿಇಒ ಅನ್ನು ನೇಮಕ ಮಾಡಿದ್ದೇನೆ ಎಂದು ತಿಳಿಸಲು ಉತ್ಸುಕನಾಗಿದ್ದೇನೆ. ಅವರು ಇನ್ನು 6 ವಾರಗಳಲ್ಲಿ ಟ್ವಿಟರ್ ಸಿಇಒ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ಯಾರು, ಏನು ಎಂಬುದನ್ನು ಅವರು ತಿಳಿಸಿಲ್ಲ. ಆದರೆ ಆರು ವಾರಗಳಲ್ಲಿ ಹೊಸ ಸಿಇಒ ಬರುತ್ತಾರೆ ಎಂಬ ಅಂಶ ಮಾತ್ರ ಟ್ವಿಟರ್‌ನಲ್ಲಿದೆ.
ಆ ನಂತರ ಮಸ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ್ಯ ಹಾಗೂ ಸಿಟಿಒ (ಚೀಫ್ ಟೆಕ್ನಾಲಜಿ ಆಫೀಸರ್) ಆಗಿ ಮುಂದುವರಿಯಲಿದ್ದಾರೆ. ಭವಿಷ್ಯದಲ್ಲಿ ಸ್ಟಾಫ್‌ವೇರ್ ಹಾಗೂ ಸಿಸೊಪ್‌ಗಳ ಮೇಲ್ವಿಚಾರಣೆ ಮಾಡುವುದಾಗಿ ಮಸ್ಕ್ ಘೋಷಿಸಿದ್ದಾರೆ.

ಮಸ್ಕ್ ಅವರು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಟ್ವಿಟರ್‌ಗೆ ಹೊಸ CEO ಅನ್ನು ಹುಡುಕಲು ಯೋಜಿಸುತ್ತಿದ್ದಾರೆ ಎಂದು ಸುಮಾರು ಆರು ತಿಂಗಳಿನಿಂದ ಹೇಳುತ್ತಿದ್ದಾರೆ. ನಾನು ಟ್ವಿಟರ್‌ನಲ್ಲಿ ನನ್ನ ಸಮಯವನ್ನು ಕಡಿಮೆ ಮಾಡುತ್ತೇನೆ ಮತ್ತು ಕಾಲಾನಂತರದಲ್ಲಿ ಟ್ವಿಟರ್ ಅನ್ನು ಚಲಾಯಿಸಲು ಬೇರೆಯವರನ್ನು ಹುಡುಕುತ್ತೇನೆ ಎಂದು ಹೇಳಿದರು.
ಟ್ವಿಟರ್ ಸಿಇಒ ಹುದ್ದೆಗೆ ಆದಷ್ಟು ಬೇಗನೇ ರಾಜೀನಾಮೆ ನೀಡುವುದಾಗಿ ಮಸ್ಕ್ ಈ ಹಿಂದೆಯೇ ಹೇಳಿಕೊಂಡಿದ್ದಾರೆ. ಆದರೂ, ಟ್ವಿಟರ್‌ನ ಪ್ರಮುಖ ವಿಭಾಗಗಳನ್ನು ಮುನ್ನೆಡೆಸುವುದಾಗಿಯೂ ಅವರು ತಿಳಿಸಿದ್ದಾರೆ. ಯಾರಾದರೂ ಮೂರ್ಖತನ ಹೊಂದಿದವರು ಟ್ವಿಟರ್ ಸಿಇಒ ಹುದ್ದೆಯನ್ನು ವಹಿಸಿಕೊಂಡ ತಕ್ಷಣ ನಾನು ರಾಜೀನಾಮೆ ನೀಡುತ್ತೇನೆ' ಎಂದು ಅವರು ಹೇಳಿದ್ದರು.
Excited to announce that I’ve hired a new CEO for X/Twitter. She will be starting in ~6 weeks!
— Elon Musk (@elonmusk) May 11, 2023
My role will transition to being exec chair & CTO, overseeing product, software & sysops.
ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ಸ್ವಾಧೀನ ಪಡಿಸಿಕೊಂಡ ನಂತರ ಹಲವು ವಿವಾದಗಳಿಗೆ ಗುರಿಯಾಗಿದ್ದಾರೆ. ಆ ಹಿನ್ನೆಲೆಯಲ್ಲಿ 'ಟ್ವಿಟರ್‌ನ ಸಿಇಒ ಸ್ಥಾನದಿಂದ ನಾನು ಕೆಳಗಿಳಿಯಬೇಕೆ?' ಎಂದು ಟ್ವಿಟಿಗರನ್ನು ಕೇಳಿದ್ದಾರೆ. ಈ ಸಮೀಕ್ಷೆಯ ಪ್ರಕಾರ, ಶೇ.57.5ರಷ್ಟು ಜನರು ಎಲಾನ್ ಮಸ್ಕ್ ಅವರನ್ನು ಕೆಳಗಿಳಿಯಬೇಕು ಎಂದು ಹೇಳಿದ್ದರು.

ಈ ಹಿಂದೆ ಬಂದ ಸಮೀಕ್ಷೆ ಫಲಿತಾಂಶವನ್ನು ಟ್ಯಾಗ್ ಮಾಡಿರುವ ಅವರು, ನಾನು ಆದಷ್ಟು ಬೇಗ ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ದರು, ಡಿಸೆಂರ್ ನಲ್ಲಿ ಟ್ವಿಟರ್ ನಲ್ಲಿ ಅನುಯಾಯಿಗಳೊಂದಿಗೆ ವ್ಯಂಗ್ಯವಾಡಿದ ಮಸ್ಕ್, ಹೊಸ ಸಿಇಒಗೆ ಭವಿಷ್ಯದ ಬಗ್ಗೆ ನಿರಾಶಾವಾದವನ್ನು ವ್ಯಕ್ತಪಡಿಸಿದರು, ಆ ವ್ಯಕ್ತಿಯು "ದಿವಾಳಿತನದ ವೇಗದ ಹಾದಿಯಲ್ಲಿರುವ" ಕಂಪನಿಯನ್ನು ನಡೆಸಲು "ಬಹಳಷ್ಟು ನೋವನ್ನು ಇಷ್ಟಪಡಬೇಕು" ಎಂದು ಹೇಳಿದರು.
ಎಲಾನ್ ಮಸ್ಕ್ ಅವರು ಟ್ವಿಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಸಾವಿರಾರು ನೌಕರರನ್ನು ತೆಗೆದು ಹಾಕಿದ್ದರು. ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳ ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಇದು ವ್ಯಾಪಕ ಟೀಕೆಗೆ ಕಾರಣವಾಗಿದೆ.












Click it and Unblock the Notifications