ChatGPT ಪರ್ಯಾಯವಾಗಿ ಹೊಸ ಕಂಪನಿ xAI ಘೋಷಿಸಿದ ಎಲಾನ್ ಮಸ್ಕ್

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಮತ್ತು ಟ್ವಿಟರ್‌ನ ಮಾಲೀಕ ಎಲಾನ್ ಮಸ್ಕ್ ಅವರು "ಬ್ರಹ್ಮಾಂಡದ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳುವ" ಗುರಿಯೊಂದಿಗೆ ಹೊಸ ಕೃತಕ ಬುದ್ಧಿಮತ್ತೆ ಸಂಸ್ಥೆ (AI) xAI ಅನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ ಎಂದು ಬುಧವಾರ ಘೋಷಿಸಿದ್ದಾರೆ. ಹೀಗಾಗಿ ಬೆಳೆಯುತ್ತಿರುವ ಪೋರ್ಟ್ಫೋಲಿಯೊಗೆ ಮತ್ತೊಂದು ಕಂಪನಿಯನ್ನು ಸೇರಿಸುತ್ತಿದ್ದಾರೆ.

ಕಂಪನಿಯ ವೆಬ್‌ಸೈಟ್ ಬುಧವಾರ ಸಂಜೆ ನೇರಪ್ರಸಾರವಾಗಿದೆ. ಅದರ ಗುರಿಯು "ಬ್ರಹ್ಮಾಂಡದ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು" ಎಂದು ವಿವರಿಸುತ್ತದೆ. ಕಂಪನಿಯ ವೆಬ್‌ಸೈಟ್ ಪ್ರಕಾರ, ಎಲಾನ್ ಮಸ್ಕ್ ಮತ್ತು ಅವರ ತಂಡವು ಶುಕ್ರವಾರ ಲೈವ್ ಟ್ವಿಟರ್ ಸ್ಪೇಸ್‌ಗಳ ಚಾಟ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.

Twitter owner Elon Musk

xAI ಹಿಂದಿರುವ ತಂಡದ ಸದಸ್ಯರು ಡೀಪ್ ಮೈಂಡ್ (DeepMind), ಓಪನ್ಎಐ (OpenAI), ಗೂಗಲ್ ರಿಸರ್ಚ್ ( Google Research), ಮೈಕ್ರೋಸಾಪ್ಟ್ ರಿಸರ್ಚ್ (Microsoft Research), ಟ್ವಿಟ್ಟರ್ ಮತ್ತು ಟೆಸ್ಲಾದ ಹಳೆಯ ವಿದ್ಯಾರ್ಥಿಗಳು. ಇವರು ಡೀಪ್ ಮೈಂಡ್‌ನ ಆಲ್ಫಾಕೋಡ್ ಮತ್ತು ಓಪನ್ಎಐ ನ GPT-3.5 ಮತ್ತು GPT-4 ಚಾಟ್‌ಬಾಟ್‌ಗಳು ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ.

"ನಮ್ಮ ತಂಡವನ್ನು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಎಲೋನ್ ಮಸ್ಕ್ ನೇತೃತ್ವ ವಹಿಸಿದ್ದಾರೆ. ನಾವು ಈ ಹಿಂದೆ ಡೀಪ್‌ಮೈಂಡ್, ಓಪನ್‌ಎಐ, ಗೂಗಲ್ ರಿಸರ್ಚ್, ಮೈಕ್ರೋಸಾಫ್ಟ್ ರಿಸರ್ಚ್, ಟೆಸ್ಲಾ ಮತ್ತು ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ್ದೇವೆ. ನಾವು AlphaStar, AlphaCode, Inception, Minerva, GPT-3.5, ಮತ್ತು GPT-4 ಸೇರಿದಂತೆ ಕ್ಷೇತ್ರದಲ್ಲಿನ ಕೆಲವು ದೊಡ್ಡ ಅಭಿವೃದ್ಧಿಯಲ್ಲಿ ಕೆಲಸ ಮಾಡಿದ್ದೇವೆ ಮತ್ತು ಮುನ್ನಡೆಸಿದ್ದೇವೆ" ಎಂದು ಹೊಸದಾಗಿ ಪ್ರಾರಂಭಿಸಲಾದ xAI ವೆಬ್‌ಸೈಟ್‌ ತಿಳಿಸಿದೆ.

Twitter owner Elon Musk

ಚಾಟ್‌ಜಿಪಿಟಿ, ಬಾರ್ಡ್ ಮತ್ತು ಕ್ಲೌಡ್‌ನಂತಹ ಪ್ರಮುಖ ಚಾಟ್‌ಬಾಟ್‌ಗಳ ಹಿಂದೆ ಇರುವ ಓಪನ್ಎಐ ಮತ್ತು Anthropic ನಂತಹ ಕಂಪನಿಗಳೊಂದಿಗೆ ಸ್ಪರ್ಧಿಸಲು ಎಲಾನ್ ಮಸ್ಕ್ xAI ಎಂಬ ಹೊಸ ಕಂಪನಿ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಸ್ಟಾರ್ಟ್‌ಅಪ್‌ನ ಸುದ್ದಿಯನ್ನು ಈ ಹಿಂದೆ ಏಪ್ರಿಲ್‌ನಲ್ಲಿ ದ ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.

ಅದೇ ತಿಂಗಳು, ಫಾಕ್ಸ್ ನ್ಯೂಸ್ ಚಾನೆಲ್‌ನಲ್ಲಿ ಟೇಪ್ ಮಾಡಿದ ಸಂದರ್ಶನದಲ್ಲಿ "ಟ್ರುತ್‌ಜಿಪಿಟಿ" ಎಂಬ ಹೊಸ ಕೃತಕ ಬುದ್ಧಿಮತ್ತೆ (ಎಐ) ಪ್ರಾಜೆಕ್ಟ ಬಗ್ಗೆ ವಿವರಗಳನ್ನು ಎಲಾನ್ ಮಸ್ಕ್ ಹಂಚಿಕೊಂಡಿದ್ದರು. ಅಸ್ತಿತ್ವದಲ್ಲಿರುವ ಎಐ ಕಂಪನಿಗಳು 'ರಾಜಕೀಯವಾಗಿ ಸರಿಯಾಗಿರುವ' ವ್ಯವಸ್ಥೆಗಳಿಗೆ ಆದ್ಯತೆ ನೀಡುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು.

AI ಸ್ಟಾರ್ಟ್‌ಅಪ್‌ನ ಸಲಹೆಗಾರರಲ್ಲಿ ಒಬ್ಬರು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಡಾನ್ ಹೆಂಡ್ರಿಕ್ಸ್ ಆಗಿದ್ದಾರೆ. xAI ಯ ಸಹ-ಸಂಸ್ಥಾಪಕ ಗ್ರೆಗ್ ಯಾಂಗ್. ಎಲಾನ್ ಮಸ್ಕ್ ಮಾರ್ಚ್‌ನಲ್ಲಿ ನೆವಾಡಾದಲ್ಲಿ xAI ಅನ್ನು ಆರಂಭಿಸುವ ಯೋಜನೆ ಮಾಡಿದ್ದರು ಎಂದು ವರದಿಯಾಗಿದೆ. ಈ ಹಿಂದೆ ಅವರು ಕೆಲವು ಹಣಕಾಸು ದಾಖಲಾತಿಗಳಲ್ಲಿ Twitter ನ ಹೆಸರನ್ನು "X Corp" ಎಂದು ಬದಲಾಯಿಸಿದ್ದರು. ಆದರೆ xAI ನ ವೆಬ್‌ಸೈಟ್‌ನಲ್ಲಿ, ಕಂಪನಿಯು ಧ್ಯೇಯೋದ್ದೇಶದತ್ತ ಪ್ರಗತಿ ಸಾಧಿಸಲು ಟ್ವಿಟ್ಟರ್, ಟೆಸ್ಲಾ ಮತ್ತು ಇತರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+