ಟ್ವಿಟರ್‌ನಲ್ಲಿ ಮತ್ತೊಂದು ಬದಲಾವಣೆ; ಪೋಸ್ಟ್ ನೋಡಲು ಸೈನ್ಇನ್ ಕಡ್ಡಾಯ
ನವದೆಹಲಿ, ಜುಲೈ 02; ದಿನಕ್ಕೊಂದು ಬದಲಾವಣೆ ತರುವ ಮೂಲಕ ಎಲಾನ್ ಮಸ್ಕ್ ಟ್ವಿಟರ್ ಬಳಕೆದಾರರಿಗೆ ಗೊಂದಲ ಉಂಟು ಮಾಡುತ್ತಿದ್ದಾರೆ. ಟ್ವಿಟರ್ ಖರೀದಿ ಮಾಡಿದ ಬಳಿಕ ಹಲವು ಬದಲಾವಣೆಗಳನ್ನು ಅವರು ಮಾಡಿ ಟೀಕೆಗೆ ಸಹ ಗುರಿಯಾಗಿದ್ದಾರೆ.
ಈಗ ಮತ್ತೊಂದು ಟ್ವೀಟ್ ಮಾಡಿರುವ ಎಲಾನ್ ಮಸ್ಕ್ ಯಾವುದೇ ಟ್ವೀಟ್ ನೋಡಲು, ಅದರಲ್ಲಿರುವ ವಿಷಯ ಓದಲು ಕಡ್ಡಾಯವಾಗಿ ಟ್ವಿಟರ್‌ಗೆ ಸೈನ್‌ಇನ್ ಆಗಬೇಕು ಎಂದು ಹೇಳಿದ್ದಾರೆ. ಸೈನ್‌ಇನ್ ಆಗದೆ ಓದುವ ಟ್ವೀಟ್ ಪೋಸ್ಟ್‌ಗಳಿಗೆ ಮಿತಿ ಹೇರಿದ್ದಾರೆ.

ಜನರು ಇಷ್ಟು ದಿನ ನೇರವಾಗಿ ಟ್ವೀಟ್ ಕ್ಲಿಕ್ ಮಾಡಿದರೆ ಅದನ್ನು ಸೈನ್‌ಇನ್ ಆಗದೇ ವೀಕ್ಷಣೆ ಮಾಡಬಹುದಿತ್ತು. ಆದರೆ ಇನ್ನೂ ಮುಂದೆ ಪ್ರತಿದಿನ ಹೀಗೆ ಕೆಲವು ಪೋಸ್ಟ್‌ಗಳನ್ನು ಮಾತ್ರ ನೋಡಲು ಸಾಧ್ಯ. ಉಳಿದ ಪೋಸ್ಟ್‌ಗಳನ್ನು ನೋಡಲು ಸೈನ್‌ಇನ್ ಆಗುವುದು ಅನಿವಾರ್ಯವಾಗಿದೆ.
ಎಷ್ಟು ಟ್ವೀಟ್ ನೋಡಬಹುದು?; ಎಲಾನ್ ಮಸ್ಕ್ ವಿವರಣೆ ನೀಡಿರುವ ಪ್ರಕಾರ ವೆರಿಫೈಡ್ ಖಾತೆ ಹೊಂದಿರುವ ಗ್ರಾಹಕರು ದಿನಕ್ಕೆ 6 ಸಾವಿರ ಪೋಸ್ಟ್, ಸಾಮಾನ್ಯ ಬಳಕೆದಾರರು ದಿನಕ್ಕೆ 600 ಪೋಸ್ಟ್ ಮತ್ತು ಹೊಸದಾಗಿ ಖಾತೆ ತೆರೆದವರು ದಿನಕ್ಕೆ 300 ಪೋಸ್ಟ್ ನೋಡಬಹುದು. ಬಳಿಕ ಹೆಚ್ಚಿನ ಪೋಸ್ಟ್ ವೀಕ್ಷಣೆ ಮಾಡಲು ಸೈನ್‌ಇನ್ ಆಗುವುದು ಕಡ್ಡಾಯವಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಮಾಡಿದ ಮೇಲೆ ಬಳಕೆದಾರರಿಗೆ ಉಚಿತವಾಗಿ ವೆರಿಫೈಡ್ ಅಕೌಂಟ್ ಬ್ಲೂ ಟಿಕ್ ಸಿಗುತ್ತಿಲ್ಲ. ಹಣ ಪಾವತಿ ಮಾಡಿದರೆ ಯಾರಿಗೆ ಬೇಕಾದರೂ ಸಹ ಬ್ಲೂ ಟಿಕ್ ನೀಡಲಾಗುತ್ತಿದೆ. ಇಂತಹ ಸಮಯದಲ್ಲಿಯೇ ಟ್ವೀಟ್ ಪೋಸ್ಟ್ ವೀಕ್ಷಣೆ ಮಾಡಲು ಮಿತಿ ಹೇರಲಾಗಿದೆ.
To address extreme levels of data scraping & system manipulation, we’ve applied the following temporary limits:
— Elon Musk (@elonmusk) July 1, 2023
- Verified accounts are limited to reading 6000 posts/day
- Unverified accounts to 600 posts/day
- New unverified accounts to 300/day
ಇದು ಹೇಗೆ ಜಾರಿಗೆ ಬರುತ್ತದೆ? ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ ಶನಿವಾರದಿಂದಲೇ ಬಳಕೆದಾರರಿಗೆ ಹೆಚ್ಚು ಟ್ವೀಟ್ ತೋರಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಆದರೆ ಟ್ವೀಟ್ ಡೆಕ್ ಮತ್ತು ಇತರ ಥರ್ಡ್ ಪಾರ್ಟಿ ಅಪ್ಲಿಕೇಶನ್‌ನಲ್ಲಿ ಯಾವುದೇ ಮಿತಿ ಇಲ್ಲದೇ ಪೋಸ್ಟ್‌ಗಳನ್ನು ನೋಡಲಾಗುತ್ತಿದೆ.
ಎಲಾನ್ ಮಸ್ಕ್ ತಮ್ಮ ಟ್ವೀಟ್‌ನಲ್ಲಿ ಹಲವು ಸಂಸ್ಥೆಗಳು ಟ್ವಿಟರ್ ಡೇಟಾಗಳನ್ನು ಸ್ಕ್ರಾಪ್ ಮಾಡುತ್ತಿವೆ. ಇದು ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ. ಬಳಕೆದಾರರ ಅನುಭವದ ಮೇಲೆ ಪರಿಣಾಮ ಬೀರುವ ಡೇಟಾವನ್ನು ನಿಯಂತ್ರಿಸಲಾಗುತ್ತಿದೆ. ಹೀಗಾಗಿ ಸೈನ್‌ಇನ್ ಕಡ್ಡಾಯ ಮಾಡಲಾಗಿದೆ ಎಂದು ವಿವರಣೆ ಕೊಟ್ಟಿದ್ದಾರೆ.












Click it and Unblock the Notifications