ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಟ್ವಿಟ್ಟರ್ ಉದ್ಯೋಗಿಗಳು; ಮೀಟಿಂಗ್‌ನಲ್ಲಿ ಎಲಾನ್ ಮಸ್ಕ್ ಹೇಳಿದ್ಧೇನು?

|
Google Oneindia Kannada News

ನವದೆಹಲಿ, ಜೂನ್ 17: ಟ್ವಿಟ್ಟರ್ ಸಂಸ್ಥೆಯ ಉದ್ಯೋಗಿಗಳಲ್ಲಿ ಈಗ ನಡುಕ ಉಂಟಾಗಿದೆ. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆನ್ನಲಾಗಿದೆ. ಎಲಾನ್ ಮಸ್ಕ್ ಒಂದು ವೇಳೆ ಟ್ವಿಟ್ಟರ್ ಅನ್ನು ನಿಜವಾಗಿಯೂ ಖರೀದಿಸಿದಲ್ಲಿ ತಮ್ಮ ಉದ್ಯೋಗ ಮುಂದುವರಿಯುವುದು ಅನುಮಾನ ಎಂದು ಇವರಲ್ಲಿ ಭಯ ಕಾಡುತ್ತಿದೆ. ಅದಕ್ಕೆ ಕಾರಣ ಎಲಾನ್ ಮಸ್ಕ್ ನಿನ್ನೆ ಗುರುವಾರ ಟ್ಟಿಟ್ಟರ್ ಉದ್ಯೋಗಿಗಳೊಂದಿಗಿನ ಸಂವಾದದಲ್ಲಿ ಹೇಳಿದ ಮಾತುಗಳು.

ಟ್ವಿಟ್ಟರ್ ಉದ್ಯೋಗಿಗಳೊಂದಿಗೆ ಮೊದಲ ಬಾರಿಗೆ ಸಂವಾದ ನಡೆಸಿದ ಎಲಾನ್ ಮಸ್ಕ್, ಈ ಕಂಪನಿ ಆರ್ಥಿಕವಾಗಿ ಆರೋಗ್ಯವಾಗಿರಬೇಕು. ವೆಚ್ಚವನ್ನು ತಗ್ಗಿಸಬೇಕು ಎಂದು ಹೇಳಿದರೆನ್ನಲಾಗಿದೆ. ಕಂಪನಿಯ ಕಾಸ್ಟ್ ಕಟಿಂಗ್ ವಿಚಾರ ಬಂದರೆ ಮೊದಲ ಪ್ರಕ್ರಿಯೆ ಎಂದರೆ ಅದು ಕೆಲ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವುದು. ಹೀಗಾಗಿ, ಟ್ವಿಟ್ಟರ್ ಉದ್ಯೋಗಿಗಳಿಗೆ ಈಗ ಕೆಲಸ ಕಳೆದುಕೊಳ್ಳಬಹುದೆಂಬ ಆತಂಕ ಶುರುವಾಗಿದೆ.

ಟ್ವಿಟ್ಟರ್ ಸಂಸ್ಥಾಪಕ ಜಾಕ್‌ರಿಂದ ವೆಬ್ 5, ಏನಿದರ ಅಸಲಿಯತ್ತು?ಟ್ವಿಟ್ಟರ್ ಸಂಸ್ಥಾಪಕ ಜಾಕ್‌ರಿಂದ ವೆಬ್ 5, ಏನಿದರ ಅಸಲಿಯತ್ತು?

ಮಸ್ಕ್ ಹೇಳಿದ್ದೇನು?
ಟ್ವಿಟ್ಟರ್ ಉದ್ಯೋಗಿಗಳೊಂದಿಗಿನ ಸಂವಾದದಲ್ಲಿ ಮಾತನಾಡುತ್ತಾ ಎಲಾನ್ ಮಸ್ಕ್, "ಸದ್ಯ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದೆ. ಇದು ಸರಿಯಾದ ಪರಿಸ್ಥಿತಿ ಅಲ್ಲ" ಎಂದು ಹೇಳಿದ್ಧಾರೆ. ಇದರಿಂದ ಉದ್ಯೋಗಿಗಳನ್ನು ಲೇ ಆಫ್ ಮಾಡುವ ಸಾಧ್ಯತೆಯ ಸುಳಿವು ಪಡೆದ ಕೆಲ ಉದ್ಯೋಗಿಗಳು ನೇರವಾಗಿಯೇ ಮಸ್ಕ್ ಅವರನ್ನು ಈ ಬಗ್ಗೆ ಕೇಳಿದ್ದಾರೆ.

Elon Musk Hints at Job Cut in Twitter

ಅದಕ್ಕೆ ಉತ್ತರಿಸಿದ ಮಸ್ಕ್, "ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಬೇಕಾಗುತ್ತದೆ. ಕಂಪನಿ ಆರೋಗ್ಯಯುತವಾಗಿರುವ ಅಗತ್ಯವಿದೆ. ಕಂಪನಿಗೆ ಉತ್ತಮ ಸೇವೆ ನೀಡುತ್ತಿರುವವರು ಕಳವಳ ಪಡುವ ಅಗತ್ಯವೇ ಇಲ್ಲ" ಎಂದು ಹೇಳಿದ್ದಾರೆ.

ಅಂದರೆ, ಕಾರ್ಯದಕ್ಷತೆಯಿಂದ ಕೆಲಸ ಮಾಡದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಇರಾದೆ ಎಲಾನ್ ಮಸ್ಕ್ ಅವರಲ್ಲಿ ಇದೆ ಎಂಬುದರ ಸ್ಪಷ್ಟ ಸುಳಿವು ಅವರ ಮೇಲಿನ ಉತ್ತರದಲ್ಲಿ ಅಡಗಿದೆ. ಇದು ಟ್ವಿಟ್ಟರ್ ಉದ್ಯೋಗಿಗಳಲ್ಲಿ ಚಳಿ ಮೂಡಿಸಿದೆ ಎನ್ನಲಾಗಿದೆ.

ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಇತ್ತೀಚೆಗೆ ಮಾತನಾಡುತ್ತಾ, ಟ್ವಿಟ್ಟರ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಯಾವ ಯೋಜನೆಯೂ ಇಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿ ಮಾಡಿದ ಬಳಿಕ ಸಿಇಒ ಸ್ಥಾನಕ್ಕೆ ಬೇರೆಯವರನ್ನು ನೇಮಿಸುವ ಸಾಧ್ಯತೆ ಇದೆ. ಆ ವಿಚಾರವಾಗಿ ಪರಾಗ್ ಅಗರ್ವಾಲ್ ಪ್ರತಿಕ್ರಿಯಿಸಿ, ತನಗೆ ಕೆಲಸ ಹೋದರೆ ಭಯ ಪಡುವ ವ್ಯಕ್ತಿ ಅಲ್ಲ ಎಂದು ಹೇಳಿದ್ದರು.

Elon Musk Hints at Job Cut in Twitter

ಇನ್ನು, ನಿನ್ನೆ ಗುರುವಾರ ನಡೆದ ಸಂವಾದದಲ್ಲಿ ಎಲಾನ್ ಮಸ್ಕ್, ಟ್ವಿಟ್ಟರ್‌ನ ನೌಕರರ ಸಂಖ್ಯೆಯಲ್ಲಿ ಮಿತಿ ತರುವ ಬಗ್ಗೆಯೂ ಮಾತನಾಡಿದ್ದರು. ಟ್ವಿಟ್ಟರ್ ಸಿಬ್ಬಂದಿವರ್ಗ ಸರಿಯಾದ ಪ್ರಮಾಣದಲ್ಲಿ ಇಲ್ಲದಿದ್ದರೆ ಬೆಳೆಯುವ ಹಾದಿ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಹಾಗೆಯೇ, ಟ್ವಿಟ್ಟರ್ ಖರೀದಿ ಒಪ್ಪಂದ, ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಇತ್ಯಾದಿ ವಿಚಾರಗಳ ಬಗ್ಗೆಯೂ ಉದ್ಯೋಗಿಗಳೊಂದಿಗೆ ಎಲಾನ್ ಮಸ್ಕ್ ಮಾತನಾಡಿದರೆಂದು ಸಿಎನ್‌ಬಿಸಿ ವರದಿ ಮಾಡಿದೆ.

(ಒನ್ಇಂಡಿಯಾ ಸುದ್ದಿ)

English summary
Elon Musk during interaction with Twitter employees is said to have hinted at possible layoffs to keep the company financially healthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X