Linda Yaccarino: ಟ್ವಿಟ್ಟರ್‌ನ ನೂತನ ಸಿಇಒ ಲಿಂಡಾ ಯಾಕರಿನೊ ಯಾರು?
ಕಳೆದ ವರ್ಷದಿಂದ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿರುವ ವಿಶ್ವದ ಎರಡನೇ ಅತೀ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಕೊನೆಗೂ ಟ್ವಿಟ್ಟರ್‌ನ ಸಿಇಒ ಸ್ಥಾನವನ್ನು ತೊರೆಯುವ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ. ನಿನ್ನೆಯಷ್ಟೆ ಈ ನಿರ್ಧಾರ ಘೋಷಿಸಿದ ಮಸ್ಕ್ ನೂತನ ಸಿಇಒ ಯಾರಾಗಲಿದ್ದಾರೆ ಎಂಬ ಮಾಹಿತಿಯನ್ನು ಕೂಡಾ ಬಹಿರಂಗಪಡಿಸಿದ್ದಾರೆ.
ನಿರೀಕ್ಷೆಯಂತೆಯೇ ಟ್ವಿಟ್ಟರ್‌ನ ನೂತನ ಸಿಇಒ ಆಗಿ ಇನ್ನು ಆರು ವಾರಗಳಲ್ಲೇ ಲಿಂಡಾ ಯಾಕರಿನೊ ಅಧಿಕಾವರನ್ನು ಸ್ವೀಕಾರ ಮಾಡಲಿದ್ದಾರೆ. ಹೌದು, ಸಾಮಾಜಿ ಜಾಲತಾಣ ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಆರು ತಿಂಗಳಲ್ಲೇ ಎಲಾನ್ ಮಸ್ಕ್ ತನ್ನ ಸಿಇಒ ಸ್ಥಾನವನ್ನು ತೊರೆದಿದ್ದಾರೆ. ಈ ಹಿಂದೆಯೇ ತಾನು ಸಿಇಒ ಸ್ಥಾನವನ್ನು ತೊರೆಯುವುದಾಗಿ ಮಸ್ಕ್ ಹೇಳಿದ್ದರು.

ತಾನು ಟ್ವಿಟ್ಟರ್‌ನ ಸಿಇಒ ಸ್ಥಾನದಿಂದ ಕೆಳಕ್ಕೆ ಇಳಿಯಬೇಕೇ ಎಂದು ಈ ಹಿಂದೆ ಎಲಾನ್ ಮಸ್ಕ್ ಟ್ವೀಟ್ ಪೋಲ್ ಮೂಲಕ ಪ್ರಶ್ನಿಸಿದ್ದಾರೆ. "ನಾನು ಟ್ವಿಟ್ಟರ್‌ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ? ನಾನು ಈ ಸಮೀಕ್ಷೆಯ ಫಲಿತಾಂಶಕ್ಕೆ ಬದ್ಧನಾಗಿರುತ್ತೇನೆ," ಎಂದು ಮಸ್ಕ್ ಬರೆದುಕೊಂಡಿದ್ದಾರೆ. ಇದಕ್ಕೆ ಒಟ್ಟಾಗಿ ಸುಮಾರು 17 ಮಿಲಿಯನ್ ಟ್ವಿಟ್ಟರ್ ಬಳಕೆದಾರರು ಮತ ಚಲಾಯಿಸಿದ್ದಾರೆ.
ಕರ್ನಾಟಕ ಚುನಾವಣಾ ಫಲಿತಾಂಶ 2023 LIVE ಕ್ಷಣ ಕ್ಷಣದ ಮಾಹಿತಿ
ಟ್ವೀಟ್ ಮಾಡಿದ ಎಲಾನ್ ಮಸ್ಕ್
"ಟ್ವಿಟ್ಟರ್‌ನ ನೂತನ ಸಿಇಒ ಆಗಿ ಲಿಂಡಾ ಯಾಕರಿನೊರನ್ನು ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ. ವಹಿವಾಟಿನ ಕಾರ್ಯನಿರ್ವಹಣೆಯ ಮೇಲೆ ಲಿಂಡಾ ಯಾಕರಿನೊ ಪ್ರಮುಖ ಗಮನವನ್ನು ಹರಿಸಲಿದ್ದಾರೆ. ನಾನು ಪ್ರೊಡೆಕ್ಟ್ ಡಿಸೈನ್, ನೂತನ ತಂತ್ರಜ್ಞಾನದ ಬಗ್ಗೆ ಗಮನ ಹರಿಸಲಿದ್ದೇನೆ. ಲಿಂಡಾ ಯಾಕರಿನೊ ಜೊತೆ ಕಾರ್ಯನಿರ್ವಹಿಸಲು ಕಾತುರನಾಗಿದ್ದೇನೆ," ಎಂದು ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಲಿಂಡಾ ಯಾಕರಿನೊ ಯಾರು?
ಲಿಂಡಾ ಯಾಕರಿನೊ ಇಟಲಿಯನ್- ಅಮೇರಿಕನ್ ಕುಟುಂಬಕ್ಕೆ ಸೇರಿದವರು ಆಗಿದ್ದಾರೆ. ಲಿಂಡಾ ತಂದೆ ಪೊಲೀಸ್ ಅಧಿಕಾರಿಯಾಗಿದ್ದು, ತಾಯಿ ವಿದ್ಯಾಭ್ಯಾಸವನ್ನು ಹೊಂದಿಲ್ಲ. ಪೆನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಜನೆ ಮಾಡಿದ ಲಿಂಡಾ ಯಾಕರಿನೊ ಬಳಿಕ ಟರ್ನರ್ ಎಂಟರ್‌ಟೈನ್‌ಮೆಂಟ್‌ನಲ್ಲಿ ಸುಮಾರು 15 ವರ್ಷಗಳ ಕಾಲ ಉದ್ಯೋಗ ಮಾಡಿದ್ದಾರೆ. ಇಲ್ಲಿ ಲಿಂಡಾ ಸುಮಾರು 2000 ಮಂದಿಯನ್ನು ನಿರ್ವಹಣೆ ಮಾಡಿದ್ದಾರೆ.
ಟರ್ನರ್ ಎಂಟರ್‌ಟೈನ್‌ಮೆಂಟ್‌ನಲ್ಲಿ ಲಿಂಡಾ ಪ್ರಮುಖ ಸ್ಥಾನವನ್ನು ನಿರ್ವಹಣೆ ಮಾಡಿದ್ದಾರೆ. ಆಪಲ್ ನ್ಯೂಸ್, ಸ್ನಾಪ್‌ಚಾಟ್, ಯೂಟ್ಯೂಬ್‌ನೊಂದಿಗೆ ತಾನು ಉದ್ಯೋಗ ಮಾಡುವ ಸಂಸ್ಥೆಯು ಉತ್ತಮ ವೃತ್ತಿಪರ ಸಂಬಂಧವನ್ನು ಕಾಯ್ದುಕೊಳ್ಳುವಲ್ಲಿ ಲಿಂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. 2005ರಲ್ಲಿ ಲಿಂಡಾ ವೈವಾಹಿಕ ಜೀವನದಲ್ಲಿ ವ್ಯಸ್ಥರಾಗಿದ್ದು, ಅದಾದ ಬಳಿಕ ಮತ್ತೆ ವ್ಯಾಪಾರ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
ಸುಮಾರು ಎರಡು ದಶಕಗಳಿಂದ ಲಿಂಡಾರ ಬಗ್ಗೆ ಆಳವಾಗಿ ತಿಳಿದಿರುವವರು ಲಿಂಡಾ ಟ್ವಿಟ್ಟರ್‌ನಲ್ಲಿ ಲಾಭ ಹೆಚ್ಚಾಗಲು ಸಹಾಯವಾಗಲಿದ್ದಾರೆ ಎನ್ನುತ್ತಾರೆ. ಪ್ರಸ್ತುತ ಲಿಂಡಾ ಯಾಕರಿನೊ ಎನ್‌ಬಿಸಿ ಯುನಿವರ್ಸಲ್‌ನ ಜಾಹೀರಾತು ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ಲಿಂಡಾಗೆ ಜಾಹೀರಾತುವ ವಿಭಾಗದಲ್ಲಿರುವ ಜ್ಞಾನವು ಟ್ವಿಟ್ಟರ್‌ನ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಲಿಂಡಾ ಬಗ್ಗೆ ತಿಳಿದಿರುವ ಉದ್ಯಮ ತಜ್ಞರುಗಳು ಹೇಳುತ್ತಾರೆ.
ಈ ಹಿಂದೆ ಎಲಾನ್ ಮಸ್ಕ್ ಟ್ವಿಟ್ಟರ್‌ನ ಸಿಇಒ ಸ್ಥಾನವನ್ನು ಇನ್ನು ಆರು ವಾರಗಳಲ್ಲಿ "ಅವಳು" ವಹಿಸಿಕೊಳ್ಳಲಿದ್ದಾಳೆ ಎಂದು ಟ್ವೀಟ್ ಮಾಡಿದ್ದರು. ಈ ಸಂದರ್ಭದಲ್ಲಿಯೇ ಲಿಂಡಾ ಯಾಕರಿನೊ ಟ್ವಿಟ್ಟರ್ ಸಿಇಒ ಆಗಬಹುದು ಎಂಬ ಸುದ್ದಿಯಾಗಿತ್ತು. ಪ್ರಮುಖ ಸುದ್ದಿ ಸಂಸ್ಥೆಯಾದ ವಾಲ್ ಸ್ಟ್ರೀಟ್ ಜರ್ನಲ್ ಕೂಡಾ ಈ ಬಗ್ಗೆ ವರದಿ ಮಾಡಿತ್ತು. ಎನ್‌ಬಿಸಿ ಯುನಿವರ್ಸಲ್‌ನ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ ಟ್ವಿಟ್ಟರ್‌ನ ಸಿಇಒ ಆಗುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನರ್ ವರದಿ ಮಾಡಿತ್ತು.












Click it and Unblock the Notifications