Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ 2023 LIVE: ಸಿಎಂ ಆಯ್ಕೆ ನಿರ್ಧಾರ ಹೈಕಮಾಂಡ್‌ ಹೆಗಲಿಗೆ

ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚನೆ 2023 LIVE: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಸಂಬಂಧ ನಡೆಯುತ್ತಿದ್ದ ಸಭೆ ಮುಕ್ತಾಯಗೊಂಡಿದೆ. ಬೆಂಗಳೂರಿನ ಶಾಂಘ್ರಿಲಾ ಹೊಟೇಲ್ ನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ನೂತನ ಸಿಎಂ ಆಯ್ಕೆಯ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿವೇಚನೆಗೆ ಬಿಡುವ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದೆ. ಈ ಸಂಬಂಧ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಾಳೆ (ಮೇ 15) ದೆಹಲಿಗೆ ಹೋಗುವ ಸಾಧ್ಯತೆಯಿದೆ.

Karnataka Congress Government Formation

7:26 PM, 14 May

ಮುಖ್ಯಮಂತ್ರಿ ಗಾದಿಗೆ ಕಸರತ್ತು

ಕಾಂಗ್ರೆಸ್ ಸಿಎಲ್‌ಪಿ ಸಭೆ ಕೆಲವೇ ಕ್ಷಣಗಳಲ್ಲಿ ಆರಂಭ. ಸಭೆ ನಡೆಯುವ ಸ್ಥಳದತ್ತ ಆಗಮಿಸುತ್ತಿರುವ ಡಿಕೆ ಶಿವಕುಮಾರ್. ರಾಜ್ಯದ ಜನರ ಚಿತ್ತ ಕಾಂಗ್ರೆಸ್‌ ಸಭೆಯತ್ತ. ಕಾಂಗ್ರೆಸ್‌ನಿಂದ ಸಿಎಂ ಯಾರು ಎಂಬುದೇ ಕುತೂಹಲ ಕೆರಳಿಸಿದೆ.

6:33 PM, 14 May

ಸಿಎಲ್‌ಪಿ ಸಭೆಗೆ ಕ್ಷಣಗಣನೆ

ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಗೆ ಕ್ಷಣಗಣನೆ ಆರಂಭವಾಗಿದೆ. ಕಾಂಗ್ರೆಸ್ ನಾಯಕರು ಶಾಂಗ್ರಿಲಾ ಹೋಟೆಲ್‌ನಲ್ಲಿ ಸೇರಿದ್ದಾರೆ. ಇದೀಗ ಸಿದ್ದರಾಮಯ್ಯ ಮತ್ತವರ ಬೆಂಬಲಿಗರು ಹೋಟೆಲ್‌ಗೆ ಆಗಮಿಸಿದ್ದಾರೆ. ಇನ್ನೇನು ಕೆಲವೇ ಹೊತ್ತಿನಲ್ಲಿ ಡಿಕೆ ಶಿವಕುಮಾರ್ ಅವರು ಆಗಮಿಸಲಿದ್ದಾರೆ. ಅವರು ಬೆಳಗ್ಗೆಯಿಂದಲೇ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

5:51 PM, 14 May

ಬೆಂಗಳೂರಿನ ಸಭೆಯತ್ತ ಕಾಂಗ್ರೆಸ್ ಶಾಸಕರ ದೌಡು

ಇಂದು ಸಂಜೆ ನಡೆಯುವ ಸಿಎಲ್‌ಪಿ ಸಭೆಗೆ ಬರುವಂತೆ ರಾಜ್ಯ ಎಲ್ಲ ಶಾಸಕರಿಗೂ ಕಾಂಗ್ರೆಸ್ ಬುಲಾವ್ ನೀಡಿತ್ತು. ಇಂದೇ ಹೊಸ ಸಿಎಂ ಯಾರು ಎಂಬುದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಶಾಂಗ್ರೀಲಾ ಹೋಟೆಲ್ ನತ್ತ ಶಾಸಕರು ಆಗಮಿಸುತ್ತಿದ್ದಾರೆ. ಶಾಸಕರಿಂದ ಸಿಎಂ ಯಾರಾಗಬೇಕೆಂದು ಅಭಿಪ್ರಾಯ ಕೇಳುವ ಸಾಧ್ಯತೆಯೂ ಇದೆ.

5:43 PM, 14 May

ಈ ಭಾರಿ ಡಿಕೆಶಿ ಸಿಎಂ ಆಗಲಿ: ನಂಜಾವಧೂತ ಶ್ರೀಗಳು

ಡಿಕೆ ಶಿವಕುಮಾರ್ ಅವರು ಬಹಳ ಬದ್ಧತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ. ಪ್ರತಿ ಭಾರಿಯು ನಾವು ಒಕ್ಕಲಿಗ ಸಮುದಾಯದ ಎಚ್‌ಡಿ ಕುಮಾರಸ್ವಾಮಿ ಅವರನ್ನು ಬೆಂಬಲಿಸುತ್ತಿದ್ದೇವು. ಈ ಬಾರಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಕೊಡಬೇಕು ಎಂದು ನಂಜಾವಧೂತ ಸ್ವಾಮೀಜಿ ಒತ್ತಾಯಸಿದರು.

5:37 PM, 14 May

ಡಿಕೆಶಿ ಸಿಎಂ ಮಾಡುವಂತೆ ಒಕ್ಕಲಿಗರ ಸಂಘದ ಸಭೆಯಲ್ಲಿ ಆಗ್ರಹ

ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ 2000ಕ್ಕೂ ಹೆಚ್ಚು ಮಂದಿ ಒಕ್ಕಲಿಗ ಮುಖಂಡರು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು ಸೇರಿದಂತೆ ಇತರ ಶ್ರೀಗಳು ಭಾಗಿಯಾಗಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವಂತೆ ಸಭೆಯಲ್ಲಿ ಆಗ್ರಹ ಕೇಳಿಬಂದಿದೆ.

4:28 PM, 14 May

ಇಂದು ಸಂಜೆ ನಂತರ ರಾಜ್ಯದ ಸಿಎಂ ಘೋಷಣೆ?- ಖರ್ಗೆ

ಕರ್ನಾಟಕದಲ್ಲಿ ಸಿಎಂ ಯಾರಾಗಬೇಕು ಎಂದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೂರು ಜನ ವೀಕ್ಷಕರು ಈಗಾಗಲೇ ಬೆಂಗಳೂರಿಗೆ ತೆರಳಿದ್ದಾರೆ. ಅಲ್ಲಿ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಬಳಿಕ ವೀಕ್ಷಕರು ದೆಹಲಿಗೆ ಇಂದು ಸಂಜೆ ವೇಳೆ ಆಗಮಿಸುತ್ತಾರೆ. ಬಳಿಕ ಉನ್ನತ ನಾಯಕರ ಜೊತೆಗೆ ಚರ್ಚೆ ಮಾಡಲಾಗುತ್ತದೆ. ನಂತರವಷ್ಟೇ ಮುಖ್ಯಮಂತ್ರಿಯನ್ನು ಘೋಷಿಸಲಾಗುತ್ತದೆ' ಎಂದು ಅವರು ಹೇಳಿದರು. ಹೀಗಾಗಿ ಇಂದು ರಾತ್ರಿ ವೇಳೆ ರಾಜ್ಯದ ಸಿಎಂ ಯಾರೆಂದು ಗೊತ್ತಾಗುವ ಸಾಧ್ಯತೆ ಇದೆ.

4:13 PM, 14 May

ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ - ಎಸ್.ಎಲ್.ಭೋಜೇಗೌಡ

ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ, ಟೀಕೆಗಳು ತಪ್ಪಲ್ಲ, ಆದರೆ, ಅದಕ್ಕೊಂದು ಇತಿಮಿತಿ ಇರುತ್ತಿತ್ತು, ರಾಜಕೀಯ ಅಸ್ತ್ರದ ಟೀಕೆ ಸರಿ, ವೈಯಕ್ತಿಕ ಟೀಕೆ ಸರಿಯಲ್ಲ ಎಂದು ಎಂ ಎಲ್ ಸಿ ಎಸ್.ಎಲ್.ಭೋಜೇಗೌಡ ತಿಳಿಸಿದ್ದಾರೆ.

3:11 PM, 14 May

ಸಿದ್ದರಾಮಯ್ಯ ನಿವಾಸದ ಮುಂದೆ ರಾಮನ ಪೋಸ್ಟರ್ ತೆಗೆದು ಹಾಕಿದ ಕಾರ್ಯಕರ್ತರು

ಬೆಂಗಳೂರಿನಲ್ಲಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ನಿವಾಸದ ಹೊರಗೆ ಹಾಕಲಾಗಿದ್ದ ರಾಮ ಮತ್ತು ಭಜರಂಗ ಬಲಿಯ ಪೋಸ್ಟರ್ ಅನ್ನು ಈಗ ತೆಗೆದುಹಾಕಲಾಗುತ್ತಿದೆ. ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಜಯ ಗಳಿಸಿದೆ. ಜೊತೆಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವೆ ಈ ಬೆಳವಣಿಗೆ ಕಂಡು ಬಂದಿದೆ.

3:00 PM, 14 May

ನಿಜವಾಯ್ತು ಕೋಡಿಶ್ರೀಗಳು ನುಡಿದ ಭವಿಷ್ಯ

ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಂದೇ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಅವರು ನುಡಿದಂತೆ ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಬಹುಮತ ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಕೋಡಿಶ್ರೀಗಳು ನುಡಿದ ರಾಜಕೀಯ ಭವಿಷ್ಯ ನಿಜವಾಗಿದ್ದು ಅವರ ಮೇಲಿರುವ ನಂಬಿಕೆಗೆ ಮತ್ತಷ್ಟು ಬಲ ಬಂದಿದೆ.

2:59 PM, 14 May

ನಿಜವಾಯ್ತು ಡಿಕೆ ಶಿವಕುಮಾರ್ ಜನ್ಮ ಕುಂಡಲಿ ಭವಿಷ್ಯ!

ಸದ್ಯ ಸಿಎಂ ರೇಸ್‌ನಲ್ಲಿರುವ ಡಿಕೆ ಶಿವಕುಮಾರ್ ಅವರ ಬಗ್ಗೆ ಈ ಒಂದು ತಿಂಗಳ ಹಿಂದೆ ಜನ್ಮ ಕುಂಡಲಿ ಭವಿಷ್ಯ ನುಡಿಯಲಾಗಿತ್ತು. ಈ ಜನ್ಮ ಕುಂಡಲಿ ಭವಿಷ್ಯ ಸದ್ಯ ನಿಜವಾಗಿದೆ. ಕನಕಪುರದಲ್ಲಿ ಬರೋಬ್ಬರಿ 1,22,392 ಮತಗಳನ್ನು ಪಡೆಯುವ ಮೂಲಕ ಡಿಕೆಶಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

1:36 PM, 14 May

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪಕ್ಷೇತರ ಅಭ್ಯರ್ಥಿ

ಹರಪನಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಲತಾ ಮಲ್ಲಿಕಾರ್ಜುನ ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದಿಂದ ಜಯ ಸಾಧಿಸಿದ ಬೆನ್ನಲ್ಲೇ ಹಲವೆಡೆ ಹರ್ಷ ವ್ಯಕ್ತವಾಗಿದ್ದು, ಹಲವರು ಶುಭ ಕೋರಿದ್ದಾರೆ.

1:30 PM, 14 May

ಶೆಟ್ಟರ್ ಗೆದ್ದೇ ಗೆಲ್ತಾರೆಂದು ರಕ್ತದಲ್ಲಿ ಪತ್ರ ಬರೆದ ಯುವಕ; ನೈತಿಕ ಹೊಣೆಹೊತ್ತು ರಾಜೀನಾಮೆ

ಶೆಟ್ಟರ್ ಗೆದ್ದೇ ಗೆಲ್ತಾರೆಂದು ರಕ್ತದಲ್ಲಿ ಪತ್ರ ಬರೆದ ಯುವಕ; ನೈತಿಕ ಹೊಣೆಹೊತ್ತು ರಾಜೀನಾಮೆ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೋಲು ಹಿನ್ನೆಲೆಯಲ್ಲಿ ಶೆಟ್ಟರ್ ಗೆಲ್ತಾರೆ ಅಂತ ರಕ್ತದಲ್ಲಿ ಪೋಸ್ಟರ್ ಬರೆದಿದ್ದ ಯುವಕ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದಾನೆ. ಮಂಜುನಾಥ ಎಂಬ ಯುವಕ ಜಗದೀಶ್ ಶೆಟ್ಟರ್ ಈ ಬಾರಿ ಗೆದ್ದೇ ಗೆಲ್ತಾರೆಂದು ರಕ್ತದಿಂದ ಬರೆದಿದ್ದ, ಸಧ್ಯ ಶೆಟ್ಟರ್ ಸೋಲಿನಿಂದಾಗಿ, ಈಗ ಮಂಜುನಾಥ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾನೆ.

1:27 PM, 14 May

ಡಿ ಸುಧಾಕರ್‌ಗೆ ಧನ್ಯವಾದಗಳು - ಮಾಜಿ ಶಾಸಕಿ ಕೆ ಪೂರ್ಣಿಮಾ

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್ ಅವರು ಸುಮಾರು 30 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿರುವ ನೂತನ ಶಾಸಕರಿಗೆ ಪ್ರತಿಸ್ಪರ್ಧಿ ಬಿಜೆಪಿ ಮಾಜಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಅಭಿನಂದಿಸಿದ್ದಾರೆ.

1:08 PM, 14 May

ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ- ಡಿಕೆ ಶಿವಕುಮಾರ್

'ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹಲವು ಬಾರಿ ಪಕ್ಷದ ವಿಚಾರದಲ್ಲಿ ನಾನು ಸೋತಿದ್ದೇನೆ. ಸಿದ್ದರಾಮಯ್ಯ ಅವರಿಗೆ ನಾನು ಸಹಕಾರ ಕೊಟ್ಟಿದ್ದೇನೆ. ನಾನು ಸೋತಾಗ ದಿನೇಶ್ ಹಾಗೂ ಸಿದ್ದರಾಮಯ್ಯ ಅವರು ಪಕ್ಷ ಮುನ್ನಡೆಸಿದ್ದಾರೆ. ನಾನು ಜೈಲಿನಲ್ಲಿದ್ದಾಗ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಅವರು ಬಂದು ಮಾತನಾಡಿದರು. ಧೈರ್ಯ ತುಂಬಿದ್ದರು. ತಮ್ಮಲ್ಲಿ ಯಾವ ತರಹದ ಭಿನ್ನಾಭಿಪ್ರಾಯ ಇಲ್ಲ' ಎಂದು ಡಿಕೆ ಶಿವಕುಮಾರ್ ಹೇಳಿದರು.

12:06 PM, 14 May

ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚನೆ LIVE: ಕಷ್ಟದಲ್ಲಿ ನನ್ನ ಪಾರು ಮಾಡಿದ ಅಜ್ಜಯ್ಯನಿಗೆ ಮೊದಲ ಭೇಟಿ: ಡಿ ಕೆ ಶಿವಕುಮಾರ್‌

ಯಾರೂ ಟೆನ್ಷನ್ ಮಾಡಿಕೊಳ್ಳಬೇಡಿ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ನಾನು ನಂಬಿರುವ ಶಕ್ತಿ ನನಗೆ ಮಾರ್ಗದರ್ಶನ ಕೊಟ್ಟಿದೆ. ಕಷ್ಟದಲ್ಲಿ ನನ್ನ ಪಾರು ಮಾಡಿದ ನೊಣವಿನಕೆರೆ ಅಜ್ಜಯ್ಯನ ಭೇಟಿಗೆ ನಾನು ಹೋಗುತ್ತಿದ್ದೇನೆ ಎಂದು ಡಿ ಕೆ ಶಿವಕುಮಾರ್‌ ಹೇಳಿದರು.

12:02 PM, 14 May

ನನ್ನ ಕ್ಷೇತ್ರ ಚಿನ್ನದ ರೀತಿ ಇತ್ತು, ಈಗ ನಿರುದ್ಯೋಗಿ ಮಾಡಿದ್ದಾರೆ: ಸೋಮಣ್ಣ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವಿ.ಸೋಮಣ್ಣ ಚಾಮರಾಜನಗರ ಹಾಗೂ ವರಣಾ ಎರಡೂ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಲ್ಲವನ್ನೂ ಅನುಭವಿಸಿದ್ದೇನೆ, ಇದು ಆಗ ಬಾರದಿತ್ತು, ಆಗಿದೆ ಎಂದು ಹೇಳಿದ್ದಾರೆ. ಸೋಲನ್ನು ಸ್ವೀಕಾರ ಮಾಡಬೇಕು. ಅದನ್ನು ಸ್ವೀಕಾರ ಮಾಡದಿದ್ದರೆ ನನ್ನಂತ ಹುಚ್ಚ ಮತ್ತೊಬ್ಬರಿಲ್ಲ. ಆದರೆ ಒಂದು ವಿಚಾರವೆಂದರೆ ನನನ್ನು ನಿರುದ್ಯೋಗಿ ಮಾಡಿದ್ದಾರೆ ಎಂದು ವಿ ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

11:33 AM, 14 May

ಡಿಕೆಶಿ ಮುಂದಿನ ಸಿಎಂ- ಪೋಸ್ಟರ್

ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಬಹುಮತದಿಂದ ಭರ್ಜರಿ ಜಯ ಸಾಧಿಸಿದೆ. ಸದ್ಯ ರಾಜ್ಯ ರಾಜಕೀಯದಲ್ಲಿ ಮೂಮದಿನ ಸಿಎಂ ಯಾರು ಎಂಬ ಚರ್ಚೆ ಶುರುವಾಗಿದೆ. ಈ ನಡುವೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಬೆಂಗಳೂರಿನಲ್ಲಿರುವ ಅವರ ನಿವಾಸದ ಹೊರಗೆ ಪೋಸ್ಟರ್‌ವೊಂದನ್ನು ಹಾಕಿದ್ದಾರೆ. ಇದರಲ್ಲಿ ಡಿಕೆ ಶಿವಕುಮಾರ್ ಅವರನ್ನು ರಾಜ್ಯದ 'ಸಿಎಂ' ಎಂದು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

11:18 AM, 14 May

ಸಿಎಂ ಆಗಿ ಬೊಮ್ಮಾಯಿ ಕೊನೆಗಳಿಗೆ ಮಾತು

ಹುಬ್ಬಳ್ಳಿಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, 'ಸೋಲಿ‌ನ ಜವಾಬ್ದಾರಿ ನಾನೇ ಹೊರುತ್ತೇನೆ. ಸೋಲಿಗೆ ಹಲವಾರು ಕಾರಣಗಳಿವೆ. ಸೋಲಿನ‌ ಪರಾಮರ್ಶೆ ಮಾಡಿಕೊಳ್ತೇವೆ. ಹಿರಿಯ ನಾಯಕರ ಜೊತೆ ಕುಳಿತು ಚರ್ಚಿಸ್ತೇವೆ. ಸೋಲಿನ ಕಾರಣಗಳ ಕುರಿತು ಅವಲೋಕನ‌ ಮಾಡಿಕೊಳ್ತೇವೆಂದು' ಎಂದು ಹೇಳಿದರು.

10:49 AM, 14 May

ಎಂ. ಪಿ. ರೇಣುಕಾಚಾರ್ಯ ನಿವೃತ್ತಿ ಘೋಷಣೆ ವಾಪಸ್ ಪಡೆಯುವಂತೆ ಪ್ರತಿಭಟನೆ

ದಾವಣಗೆರೆಯ ಹೊನ್ನಾಳಿ - ನ್ಯಾಮತಿ ತಾಲೂಕಿನ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಬಿಜೆಪಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ರೇಣುಕಾಚಾರ್ಯರ ಹೊನ್ನಾಳಿಯಲ್ಲಿನ ಮನೆ ಮುಂದೆ ನಿರ್ಧಾರ ವಾಪಸ್ ಪಡೆಯುವಂತೆ ಆಗ್ರಹಿಸುತ್ತಿದ್ದಾರೆ.

10:23 AM, 14 May

ಚುನಾವಣೆಯಲ್ಲಿ ನನ್ನ ಸೋಲು ಆಗಿದೆ ಸಿದ್ಧಾಂತದ ಸೋಲಲ್ಲ- ಸಿ.ಟಿ.ರವಿ

ಚುನಾವಣೆಯಲ್ಲಿ ನನ್ನ ಸೋಲು ಆಗಿದೆ ಸಿದ್ಧಾಂತದ ಸೋಲಲ್ಲ- ಸಿ.ಟಿ.ರವಿ

ಈ ಚುನಾವಣೆಯಲ್ಲಿ ನನ್ನ ಸೋಲು ಸಿದ್ಧಾಂತದ ಸೋಲಲ್ಲ, ವೈಯಕ್ತಿಕ ಸೋಲು, ಜನಾದೇಶಕ್ಕೆ ತಲೆ ಬಾಗುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭಾವನಾತ್ಮಕ ಪತ್ರ ಬರೆದಿದ್ದಾರೆ. 20 ವರ್ಷಗಳಿಂದ ಶಾಸಕರಾಗಿದ್ದು ಸೋಲಿನ ಕಹಿ ಕಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜನಾದೇಶಕ್ಕೆ ತಲೆಬಾಗುತ್ತೇನೆ. ಇದು ಸಿದ್ಧಾಂತದ ಸೋಲಲ್ಲ. ವೈಯಕ್ತಿಕ ಸೋಲಲ್ಲ ಎಂದಿದ್ದಾರೆ.

10:03 AM, 14 May

ರೇಷ್ಮೆನಾಡಲ್ಲಿ ಅರಳದ ಕಮಲ

ರೇಷ್ಮೆನಾಡು ರಾಮನಗರ ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 3 ಕ್ಷೇತ್ರದಲ್ಲಿ ಗೆದ್ದು ಬೀಗಿದೆ. ಕಳೆದ ಬಾರಿ ಮೂರು ಕ್ಷೇತ್ರಗಳನ್ನು ಗಳಿಸಿದ್ದ ಜೆಡಿಎಸ್, ಈ ಬಾರಿ ಕೇಬಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಹೆವ್.ಡಿ.ಕುಮಾರಸ್ವಾಮಿ ಯವರ ಕರ್ಮ ಭೂಮಿ ಎನಿಸಿದ್ದ ರಾಮನಗರ ಕ್ಚೇತ್ರದಲ್ಲಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದಾರೆ.

8:33 AM, 14 May

ನಮ್ಮ ಸಿಎಂ ಪ್ರಿಯಾಂಕ್ ಖರ್ಗೆ, ಪೋಸ್ಟ್​ ವೈರಲ್​!

ನಮ್ಮ ಸಿಎಂ ಪ್ರಿಯಾಂಕ್ ಖರ್ಗೆ ಎಂಬ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿತ್ತಾರಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಪ್ರಿಯಾಂಕ್​ ಖರ್ಗೆಯವರಿಗೆ ಮುಖ್ಯಮಂತ್ರಿ ಮಾಡಬೇಕೆಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿ ಮಾಡುತ್ತಿದ್ದಾರೆ.

7:58 AM, 14 May

ಸರ್ಕಾರ ರಚನೆಗೆ ಕಾಂಗ್ರೆಸ್‌ ಸಿದ್ದ! ಇಂದು ಶಾಸಕಾಂಗ ಸಭೆ.

ಸರ್ಕಾರ ರಚನೆಗೆ ಕಾಂಗ್ರೆಸ್‌ ಸಿದ್ದ! ಇಂದು ಶಾಸಕಾಂಗ ಸಭೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದುಕೊಂಡಿರುವ ಕಾಂಗ್ರೆಸ್, ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ. ಇಂದು ಸಂಜೆ 5.30ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಂದಿನ ಸಿಎಂ ಯಾರು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ.

7:24 AM, 14 May

ಮುಂದಿನ ದಿನಗಳಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ: ರೇಣುಕಾಚಾರ್ಯ

ಮುಂದಿನ ದಿನಗಳಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ: ರೇಣುಕಾಚಾರ್ಯ

ಚುನಾವಣೆಯಲ್ಲಿ ಸೋಲಾಗಿರುವ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರು ಭಾವುಕರಾಗಿದ್ದು, ಯಾವುದೇ ಕಾರಣಕ್ಕೂ ಚುನಾವಣೆಗೆ ಬರುವುದಿಲ್ಲ ಎಂದು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಫಲಿತಾಂಶದ ಬಳಿಕ ಹೊನ್ನಾಳಿಯಲ್ಲಿ ಬೆಂಬಲಿಗರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಮುಂದಿನ ದಿನಗಳಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

7:03 AM, 14 May

ಡಿ ಕೆ ಶಿವಕುಮಾರ್ ಬರ್ತಡೆಗೆ ಹೈಕಮಾಂಡ್ ಕೊಡುತ್ತಾ ಬಂಪರ್ ಗಿಫ್ಟ್!

ಕಾಂಗ್ರೆಸ್‌ ಗೆಲುವಿಗೆ ಪ್ರಮುಖ ಕಾರಣವಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರಿಗೆ ಹುಟ್ಟ ಹಬ್ಬದಂದು ಕಾಂಗ್ರೆಸ್‌ ಹೈಕಮಾಂಡ್‌ ಮುಖ್ಯಮಂತ್ರಿ ಕುರ್ಚಿಯನ್ನ ಬಂಪರ್‌ ಗಿಫ್ಟ್‌ ನೀಡುತ್ತಾರಾ ಎಂಬ ಚರ್ಚೆ ಶುರುವಾಗಿದೆ.

6:55 AM, 14 May

ಡಿ ಕೆ ಶಿವಕುಮಾರ್ ಗೆ ತಮಿಳುನಾಡು ಸಿಎಂ ಸ್ಟಾಲಿನ್ ಅಭಿನಂದನೆ

ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸ್ಟಾಲಿನ್ ಅವರು ಶನಿವಾರ ರಾತ್ರಿ ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದರು. ಸ್ಟಾಲಿನ್ ಅವರಿಗೆ ಧನ್ಯವಾದ ಹೇಳಿದ ಡಿ ಕೆ ಶಿವಕುಮಾರ್ ಅವರು ತಮಿಳುನಾಡಿಗೆ ಬಂದು ತಮ್ಮನ್ನು ಭೇಟಿ ಮಾಡಿ ಕೃತಜ್ಞತೆ ತಿಳಿಸುವುದಾಗಿ ಹೇಳಿದರು.

6:45 AM, 14 May

ಸಾಮೂಹಿಕ ಪ್ರಯತ್ನದಿಂದ ಸಾರ್ವಧಿಕಾರ ದೂರ: ಮಲ್ಲಿಕಾರ್ಜುನ್‌ ಖರ್ಗೆ

ಕಾಂಗ್ರೆಸ್‌ ಪಕ್ಷ ಸಂಪೂರ್ಣ ಬಹುಮತದಿಂದ ಗೆಲುವು ಸಾಧಿಸಿದೆ. ಸಾಮೂಹಿಕ ಪ್ರಯತ್ನ ಗೆಲುವು ತಂದುಕೊಟ್ಟಿದೆ. ಏನಾದರೂ ವ್ಯತ್ಯಾಸ ಆಗಿದ್ದರೆ, ಸರ್ವಾಧಿಕಾರ ಹತ್ತಿರವಾಗುತ್ತಿತ್ತು. ಆದರೆ ಎಲ್ಲರ ಶ್ರಮದಿಂದ ಇಂತಹ ದೊಡ್ಡ ಗೆಲುವಾಗಿದೆ. ನಾವು ಕೊಟ್ಟ ಗ್ಯಾರಂಟಿ ಭರವಸೆಯನ್ನು ಮೊದಲನೇ ಕ್ಯಾಬಿನೆಟ್ ನಲ್ಲಿ ಮಾಡಬೇಕು ಎಂದು ಮಲ್ಲಿಕಾರ್ಜುನ್‌ ಖರ್ಗೆ ಸಲಹೆ ನೀಡಿದರು

6:34 AM, 14 May

ಜನರ ತೀರ್ಪನ್ನು ಗೌರವಿಸುತ್ತೇನೆ: ಕೆ.ಗೋಪಾಲಯ್ಯ

ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಜನರ ತೀರ್ಪನ್ನು ಗೌರವಿಸುತ್ತೇನೆ. ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಕೆ.ಗೋಪಾಲಯ್ಯನವರು ತಿಳಿಸಿದರು.

6:21 AM, 14 May

ಸೋಲಿಗೆ ಅನೇಕ‌ ಕಾರಣಗಳಿದೆ: ಬಸವರಾಜ ಬೊಮ್ಮಾಯಿ

ಸೋಲಿಗೆ ಅನೇಕ‌ ಕಾರಣಗಳಿದೆ. ನಮ್ಮ ವೋಟ್‌ಬ್ಯಾಂಕ್ ಸರಿಯಾಗಿ ಕ್ರೋಡಿಕರಣವಾಗಿಲ್ಲ, ಅನೇಕ‌ ಕಾರಣಗಳಿದೆ. ಒಂದೇ ಕಾರಣದಿಂದ ಸೋತಿಲ್ಲ, ಬೇರೆ ಬೇರೆ ರೀತಿಯಲ್ಲಿ ಸೋಲಿಗೆ ಕಾರಣವಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು

6:16 AM, 14 May

ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ: ಸಿದ್ದರಾಮಯ್ಯ

ಜನ ಈ ಬಾರಿ ಒಂದೇ ಪಕ್ಷಕ್ಕೆ ಬಹುಮತ ನೀಡಬೇಕು ಎಂದು ಬಯಸಿ ಕಾಂಗ್ರೆಸ್‌ ಗೆ ಇನ್ನೊಂದು ಅವಕಾಶ ನೀಡಿದ್ದಾರೆ. ಜನರು ನೀಡಿರುವ ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಜನರ ನಿರೀಕ್ಷೆಗೆ ತಕ್ಕದಾಗಿ ಕೆಲಸ ಮಾಡಬೇಕು, ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+