Elon Musk: ಪ್ರಧಾನಿ ಮೋದಿ ಭೇಟಿಗೆ ಕಾಯುತ್ತಿರುವ ಎಲಾನ್ ಮಸ್ಕ್: ಭಾರತಕ್ಕೆ ಬರುತ್ತಾ 'ಟೆಸ್ಲಾ'?

ನವದೆಹಲಿ, ಏಪ್ರಿಲ್ 11: ಭಾರತೀಯ ಪ್ರಧಾನಿಯನ್ನು 'ಟೆಸ್ಲಾ' ಸಿಇಒ ಮತ್ತು ಸ್ಪೇಸ್ ಎಕ್ಸ್‌ ಸಂಸ್ಥಾಪಕ ಎಲಾನ್ ಮಸ್ಕ್ (Elon Musk) ಅವರು ಅಮೆರಿಕಾದಲ್ಲಿ ಭೇಟಿಯಾಗಿದ್ದರು. ನಂತರ ಅವರು ಭಾರತದಲ್ಲಿ ಸಾಕಷ್ಟು ಹೂಡಿಕೆ ಮಾಡಲಿದ್ದಾರೆ. ಟೆಸ್ಲಾ ಭಾರತಕ್ಕೆ ಬರಲಿದೆ ಎಂದೆಲ್ಲ ವಿಷಯಗಳು ಮುನ್ನೆಲೆ ಬಂದವು. ಇವೆಲ್ಲ ನಿಜವಾಗುವ ಸಾಧ್ಯತೆ ಇದ್ದು, ಎಲಾನ್ ಮಸ್ಕ್ ಅವರೇ ಪ್ರಧಾನಿ ಮೋದಿ ಭೇಟಿಯ ತುಡಿತದಲ್ಲಿರುವುದಾಗಿ ಸ್ವತಃ ತಾವೇ ತಿಳಿಸಿದ್ದಾರೆ.

ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಜಾಗತಿಕವಾಗಿ ಗುರುತಿಸಿಕೊಂಡಿರುವ ಎಲಾನ್ ಮಸ್ಕ್‌ ಅವರು, ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿರುವುದಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಹಿಂದೆಯು ವರದಿ ಆಗಿತ್ತು. ಇದೀಗ ಅದನ್ನು ಸ್ವತಃ ಎಲಾನ್ ಮಸ್ಕ್‌ ಬಹಿರಂಗಪಡಿಸಿದ್ದಾರೆ.

Elon Musk Excited for India Visit Anticipates Meeting PM Narendra Modi Soon

ಪ್ರಧಾನಿ ಮೋದಿ- ಎಲಾನ್ ಮಸ್ಕ್ ಭೇಟಿ

ಸಾಮಾಜಿಕ ಜಾಲತಾಣ ಮೈಕ್ರೊ ಬ್ಲಾಗಿಂಗ್ X (ಟ್ವಿಟ್ಟರ್) ನಲ್ಲಿ ಎಲಾನ್ ಮಸ್ಕ್ ಅವರು, "ಭಾರತದಲ್ಲಿ ಪ್ರಧಾನ ಮಂತ್ರಿ ನರೆಂದ್ರ ಮೋದಿಯರನ್ನು ನಾನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ!" ಎಂದು ಬಧವಾರ ಅವರು ಪೋಸ್ಟ್ ಮಾಡಿದ್ದಾರೆ. ಈ ಎಕ್ಸ್‌ ಅವರ ಒಡೆತನದ್ದೆ ಆಗಿದೆ.

ಎಲಾನ್ ಮಸ್ಕ್‌ ಅವರ ಮಾತು ಕೇಳಿದ ನಂತರ, ಇದುವರೆಗೆ ಟೆಸ್ಲಾ ಭಾರತಕ್ಕೆ ಬರಲಿದೆ, ದೇಶದಲ್ಲಿ ಆಕರ್ಷಕ ಬಂಡವಾಳ ಹೂಡಿಕೆ ಮಾಡಲಿದೆ ಎಂಬೆಲ್ಲ ಮಾತುಗಳು ನಿಜವಾಗುವ ಕಾಲ ದೂರವಿಲ್ಲ ಎಂದು ವಿಶ್ಲೇಷಿಸಲಾಗುತ್ತದೆ. ತಮ್ಮ ಪೋಸ್ಟ್‌ನಲ್ಲಿ ಅವರು ಪ್ರಧಾನಿ ಭೇಟಿ ಆಗಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಬದಲಾಗಿ ಯಾವಾಗ ಭಾರತಕ್ಕೆ ಬರುತ್ತಾರೆ ಎಂಬ ಇನ್ನಿತರ ಅಂಶಗಳನ್ನು ಅವರು ಬಹಿರಂಪಡಿಸಿಲ್ಲ.

ಎಲಾನ್ ಮಸ್ಕ್ ಭಾರತ ಭೇಟಿ: ರಾಯಿಟರ್ಸ್ ವರದಿ

ಇತ್ತೀಚೆಗೆ ಬಿಲಿಯನೇರ್ ಎಲಾನ್ ಮಸ್ಕ್ ಅವರು ಆದಷ್ಟು ಶೀಘ್ರವೇ ಭಾರತಕ್ಕೆ ಭೇಟಿ ಕೊಡಲಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿತ್ತು. ಇಲ್ಲಿ ಹೂಡಿಕೆ ಮಾಡುವ ಜೊತೆಗೆ ಹೊಸ ಕಾರ್ಖಾನೆ ಆರಂಭಿಸುವ ಯೋಜನೆಗಳನ್ನು ಅವರು ಭಾರತದಲ್ಲಿದ್ದಾಗಲೇ ಘೋಷಿಸಬಹುದು ಎಂದು ವರದಿ ಆಗಿತ್ತು.

Elon Musk Excited for India Visit Anticipates Meeting PM Narendra Modi Soon

ಕಳೆದ ವರ್ಷ ಜೂನ್‌ನಲ್ಲಿ ಅಮೆರಿಕಾದಲ್ಲಿ ಪ್ರಧಾನಿ ಮೋದಿಯವರನ್ನು ಎಲಾನ್ ಮಸ್ಕ್ ಭೇಟಿ ಮಾಡಿದ್ದರು. ಅಲ್ಲದೇ ತಾವು ನಿಮ್ಮ ಅಭಿಮಾನಿ ಎಂದು ಸ್ವತಃ ಅವರೇ ಮೋದಿಯವರಿಗೆ ತಿಳಿಸಿದ್ದಾರೆ. ಇದಾದ ಬಳಿಕ ಟೆಸ್ಲಾ ಭಾರತಕ್ಕೆ ಬರುವ ದಿನಗಳು ದೂರವಿಲ್ಲ ಎಂದು ಎಲೆಕ್ಟ್ರಿಕ್ ಕಾರು ತಯಾರಕರ ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದರು.

ಹೊಸ ಎಲೆಕ್ಟ್ರಿಕ್ ವಾಹನ ನೀತಿ

ಭಾರತ ಸರ್ಕಾರ 'ಹೊಸ ಎಲೆಕ್ಟ್ರಿಕ್ ವಾಹನ ನೀತಿ' ಘೋಷಿಸಿದ ತಿಂಗಳ ನಂತರ ಬಿಲಿಯನೇರ್ ಭೇಟಿಯ ಘೋಷಣೆಯು "ಪ್ರತಿಷ್ಠಿತ ಜಾಗತಿಕ ತಯಾರಕರಿಂದ ಹೂಡಿಕೆಗಳನ್ನು ಆಕರ್ಷಿಸಲು" ಇದು ಸಹಾಯ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

'ಹೊಸ ಎಲೆಕ್ಟ್ರಿಕ್ ವಾಹನ ನೀತಿ' ಅಡಿಯಲ್ಲಿ ಪ್ರಯಾಣಿಕ ಎಲೆಕ್ಟ್ರಿಕ್ ಕಾರುಗಳಿಗೆ ಉತ್ಪಾದನಾ ಸೌಲಭ್ಯಗಳನ್ನು ಭಾರತದಲ್ಲಿ ಸ್ಥಾಪಿಸುವ ಕಂಪನಿಗಳು ಸೀಮಿತ ಸಂಖ್ಯೆಯ ಘಟಕಗಳನ್ನು ಆಮದು ಮಾಡಿಕೊಳ್ಳಲು ಕಡಿಮೆ ಕಸ್ಟಮ್ಸ್ ಅಥವಾ ಆಮದು ಸುಂಕವನ್ನು ಶೇಕಡಾ 15% ನೀಡಿ ಐದು ವರ್ಷ ಅನುಮತಿ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+