ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲ್ಗೇರಿಯಾ ಬಸ್ ಅಪಘಾತದಲ್ಲಿ 45ಕ್ಕೂ ಹೆಚ್ಚು ಮಂದಿ ದುರ್ಮರಣ

|
Google Oneindia Kannada News

ಬಲ್ಗೇರಿಯಾ, ನವೆಂಬರ್ 23: ಪಶ್ಚಿಮ ಬಲ್ಗೇರಿಯಾದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಬಸ್ ಅಪಘಾತದಲ್ಲಿ ಮಕ್ಕಳೂ ಸೇರಿದಂತೆ 45ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಮೆಸಿಡೋನಿಯಾದಲ್ಲಿ ನೋಂದಾಯಿಸಲಾದ ಬಸ್ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿದ್ದು, ಗಾಯಗೊಂಡ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನಿಗೂಢ ಮಹಿಳೆ ಬಾಬಾ ವಂಗಾ 2021ರ ಭವಿಷ್ಯ: ಇನ್ನಷ್ಟು ಭಯಾನಕ, ವಿನಾಶನಿಗೂಢ ಮಹಿಳೆ ಬಾಬಾ ವಂಗಾ 2021ರ ಭವಿಷ್ಯ: ಇನ್ನಷ್ಟು ಭಯಾನಕ, ವಿನಾಶ

ಅಪಘಾತದ ನಿರ್ದಿಷ್ಟ ಕಾರಣವೇನು ಎಂಬುದನ್ನು ದೃಢಪಡಿಸಲಾಗಿಲ್ಲ, ಆದರೆ ಬಸ್ ಹೆದ್ದಾರಿ ಗಾರ್ಡ್ ರೈಲಿಗೆ ಡಿಕ್ಕಿ ಹೊಡೆದು, ಬೆಂಕಿ ಹೊತ್ತಿಕೊಂಡು ಅಪಘಾತಕ್ಕೀಡಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಮೆಸಿಡೋನಿಯಾದ ರಾಯಭಾರ ಕಚೇರಿಯ ಪ್ರತಿನಿಧಿಗಳು ಕೆಲವು ಮೃತರು ಮತ್ತು ಗಾಯಗೊಂಡವರನ್ನು ದಾಖಲಿಸಿದ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ ಎಂದು ಬಲ್ಗೇರಿಯನ್ ಸುದ್ದಿ ಸಂಸ್ಥೆ ನೊವಿನೈಟ್ ಹೇಳಿದೆ.

At least 45, Including Children, Killed In Bus Accident In Bulgaria

ಅಪಘಾತವನ್ನು ದೊಡ್ಡ ದುರಂತ ಎಂದ ಪ್ರಧಾನಿ:

ಬಲ್ಗೇರಿಯಾದ ಉಸ್ತುವಾರಿ ಪ್ರಧಾನ ಮಂತ್ರಿ ಸ್ಟೀಫನ್ ಯಾನೆವ್, ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ಇದೊಂದು "ದೊಡ್ಡ ದುರಂತ" ಎಂದು ಕರೆದಿದ್ದಾರೆ. "ಮೃತರ ಕುಟುಂಬ ಸಂಬಂಧಿಕರಿಗೆ ನಾನು ಸಂತಾಪವನ್ನು ಸೂಚಿಸುತ್ತೇನೆ. "ಈ ದುರಂತ ಘಟನೆಯಿಂದ ನಾವು ಪಾಠಗಳನ್ನು ಕಲಿಯುತ್ತೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ನಾವು ತಡೆಯಬಹುದು ಎಂದು ಭಾವಿಸೋಣ," ಎಂದರು.

ಸಂತಾಪದ ಸಂದೇಶ:

ಯುರೋಪಿಯನ್ ಯೂನಿಯನ್ ಕಮಿಷನರ್ ಒಲಿವರ್ ವರ್ಹೆಲಿ, ಅಪಘಾತದಿಂದ ಪೀಡಿತರ ಕುಟುಂಬಗಳು ಮತ್ತು ಸ್ನೇಹಿತರಿಗೆ ಸಂತಾಪವನ್ನು ಸೂಚಿಸಿದ್ದಾರೆ. "ಬೆಳಿಗ್ಗೆ ಗಂಟೆಗಳಲ್ಲಿ ಬಲ್ಗೇರಿಯಾದಲ್ಲಿ ಸಂಭವಿಸಿದ ದುರಂತ ಬಸ್ ಅಪಘಾತದ ಬಗ್ಗೆ ಭಯಾನಕ ಸುದ್ದಿ" ಎಂದು ವರ್ಹೇಲಿ ಆನ್‌ಲೈನ್‌ನಲ್ಲಿ ಬರೆದುಕೊಂಡಿದ್ದಾರೆ. "ಮೃತರ ಸಂಬಂಧಿಕರು, ಸ್ನೇಹಿತರು ಮತ್ತು ಉತ್ತರ ಮೆಸಿಡೋನಿಯಾದ ಜನರಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಬರೆದಿದ್ದಾರೆ.

English summary
At least 45, Including Children, Killed In Bus Accident In Bulgaria. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X