Bengaluru Road Accident: 2023ರಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರಲ್ಲಿ ಪುರುಷರೇ ಹೆಚ್ಚು

ಬೆಂಗಳೂರು, ಮಾರ್ಚ್ 25: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಹನಗಳ ಬಗ್ಗೆ ಹೇಳೋದೆ ಬೇಡ.. ಜನಸಂಖ್ಯೆ ಹೇಗೆ ಇದೆಯೋ ವಾಹನಗಳ ಸಂಖ್ಯೆ ಕೂಡ ಹಾಗೆ ಇದೆ. ಇದರ ನಡುವೆಯೇ ಬೆಚ್ಚಿಬೀಳಿಸುವ ವರದಿಯೊಂದು ಬಂದಿದೆ. ಕಳೆದ ವರ್ಷ ಬೆಂಗಳೂರಿನ ರಸ್ತೆಗಳಲ್ಲಿ 883 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, ಈ ಅಪಘಾತಗಳಲ್ಲಿ 913 ಜನ ಸಾವನ್ನಪ್ಪಿದ್ದಾರೆ.

ಹೀಗೆ ರಸ್ತೆಗಳಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಪುರುಷರು. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವಯಸ್ಸಿನವರಾಗಿದ್ದಾರೆ. ಸವಾರರು ಹೆಲ್ಮೆಟ್ ಧರಿಸದಿರುವುದು ಮತ್ತು ಅತಿವೇಗದ ಚಾಲನೆಯೇ ಇದಕ್ಕೆ ಕಾರಣವೆಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

Road Accident In 2023 the Majority of Those Who Died on Roads Were Men

ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರಸ್ತೆ ಅಪಘಾತಗಳಿಂದ ಸಾವುಗಳು ಹೆಚ್ಚಾಗುತ್ತಲೇ ಇರುತ್ತವೆ ಎಂದು ತಜ್ಞರು ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ 2023 ರಲ್ಲಿ ಒಟ್ಟು 883 ಮಾರಣಾಂತಿಕ ಅಪಘಾತಗಳು ಮತ್ತು 913 ಸಾವುಗಳನ್ನು ವರದಿಯಾಗಿದೆ.

2022 ಕ್ಕಿಂತ 2023 ರಲ್ಲಿ ಅಪಘಾತ ಶೇಕಡಾ 17 ರಿಂದ 18% ಹೆಚ್ಚಾಗಿದೆ. 2022 ರಲ್ಲಿ ರಸ್ತೆ ಅಪಘಾತದಲ್ಲಿ 770 ಪುರುಷರು ಮೃತಪಟ್ಟಿದ್ದರು. ಇವರಲ್ಲಿ 50% ಕ್ಕಿಂತ ಹೆಚ್ಚು ಅಂದರೆ 393 ಜನ 21-40 ನಡುವಿನ ವಯಸ್ಸಿನ ಪುರುಷರು. 31-40 ವರ್ಷ ವಯಸ್ಸಿನ ಪುರುಷರಲ್ಲಿ ಸಾವುಗಳಲ್ಲಿ ಸುಮಾರು 34% ರಷ್ಟು ಏರಿಕೆಯಾಗಿದೆ.

2022 ರಲ್ಲಿ ಒಟ್ಟು 123 ಸಾವುಗಳು 2023 ರಲ್ಲಿ 165 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸ್ವಯಂಕೃತ ಅಪಘಾತಗಳು ಹೆಚ್ಚು. ಇನ್ನು ಕಳೆದ ವರ್ಷ ಒಂದೇ ವಯೋಮಾನದ ಪುರುಷರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. 21-30 ವರ್ಷ ವಯಸ್ಸಿನ 140 ಪುರುಷರು ಮಾರಣಾಂತಿಕ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. 88 ಸ್ವಯಂಕೃತ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Road Accident In 2023 the Majority of Those Who Died on Roads Were Men

2023 ರಲ್ಲಿ 21 ರಿಂದ 30 ವರ್ಷ ವಯಸ್ಸಿನ 228 ಜನ ಪುರುಷರು ಮೃತಪಟ್ಟಿದ್ದರೇ, 2022ರಲ್ಲಿ 219 ಜನ ಪುರುಷರು ಸಾವಿಗೀಡಾಗಿದ್ದರು. ಕಳೆದ ವರ್ಷ 11 ರಿಂದ 20 ವರ್ಷ ವಯಸ್ಸಿನ 41 ಹುಡುಗರು ಮೃತಪಟ್ಟಿದ್ದು, 2022ರಲ್ಲಿ 26 ಹುಡುಗರು ಮೃತಪಟ್ಟಿದ್ದರು. ಇಂತಹ ವಯೋಮಾನದವರಲ್ಲಿ ಸಾವಿನ ಸಂಖ್ಯೆ ಹೆಚ್ಚಿಸಿರುವುದಲ್ಲಿ ದ್ವಿಚಕ್ರ ವಾಹನಗಳ ಪಾತ್ರ ಹೆಚ್ಚಾಗಿದೆ.

ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಬಳಕೆದಾರರು ಅತ್ಯಂತ ದುರ್ಬಲ ರಸ್ತೆಗಳನ್ನು ಬಳಕೆ ಮಾಡುತ್ತಾರೆ. ಡೆಲಿವೇರಿ ಬಾಯ್ಸ್‌ ತಮ್ಮ ಹೆಚ್ಚಿನ ಸಮಯವನ್ನು ಪ್ರಯಾಣ ಮಾಡುವುದರಲ್ಲಿಯೇ ಕಳೆಯುವುದರಿಂದ ಅಪಘಾತಗಳು ಸಂಭವಿಸುವ ಹೆಚ್ಚಿನ ಅಪಾಯವಿದೆ. "ಈ ಅಪಘಾತಗಳಲ್ಲಿ ಹೆಚ್ಚಿನವುಗಳು ಹೆಲ್ಮೆಟ್‌ಗಳು ಮತ್ತು ಸೀಟ್ ಬೆಲ್ಟ್‌ ಧರಿಸದೆ ಇರುವುದರಿಂದ ಉಂಟಾಗುತ್ತವೆ. ಹೀಗಾಗಿ ವಾಹನ ಸವಾರರು ಮತ್ತು ಪಾದಾಚಾರಿಗಳು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ ಎನ್ ಅನುಚೇತ್ ಹೇಳಿದ್ದಾರೆ.

"ವಾಹನಗಳ ಸಂಖ್ಯೆ ಮತ್ತು ರಸ್ತೆ ಬಳಕೆದಾರರ ಜನಸಂಖ್ಯೆ ಹೆಚ್ಚಾದಂತೆ ಸಾವುನೋವುಗಳು ಹೆಚ್ಚಾಗುವ ನಿರೀಕ್ಷೆಯಿದೆ" ಎಂದು ನಿಮ್ಹಾನ್ಸ್‌ನ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾರ್ವಜನಿಕ ಆರೋಗ್ಯ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ಗೌತಮ್ ಮೇಲೂರು ಸುಕುಮಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+