ಶೋಭಾ ಕರಂದ್ಲಾಜೆ ಪ್ರಚಾರದ ವೇಳೆ ಅಪಘಾತ: ಓರ್ವ ಸಾವು!

ಬೆಂಗಳೂರು ಏಪ್ರಿಲ್ 8: ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪ್ರಚಾರದ ವೇಳೆ ಅಪಘಾತವಾಗಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

60 ವರ್ಷದ ಪ್ರಕಾಶ್ ಎಂಬುವವರು ಸಾವನ್ನಪ್ಪಿದ ದುರ್ದೈವಿ. ಇಂದು ಶೋಭಾ ಕರಂದ್ಲಾಜೆ ಪ್ರಚಾರದಲ್ಲಿ ಈ ಅಪಘಾತ ನಡೆದಿದೆ. ಅಪಘಾತ ನಂತರ ಪ್ರಕಾಶ್ ಅವರನ್ನು ಕೆಆರ್ ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

Accident during Shobha Karandlaje s campaign One dead

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ವಿರುದ್ಧ ಶೋಭಾ ಕರಂದ್ಲಾಜೆ ಸ್ಪರ್ಧಿಸುತ್ತಿದ್ದಾರೆ. ಶೋಭಾ ಅವರು ಇಂದು ಕೆಆರ್‌ ಪುರದಲ್ಲಿ ಮತಯಾಚನೆ ನಡೆಸಿದರು. ಬೆಳಗ್ಗೆ ಚುನಾವಣಾ ಪ್ರಚಾರದ ವೇಳೆ ಹಲವಾರು ಮುಖಂಡರು ಈ ಪ್ರಚಾರದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಕಾರೊಂದರ ಚಾಲಕ ಏಕಾಏಕಿ ಕಾರ್ ಡೋರ್ ಓಪನ್ ಮಾಡಿದ್ದಾರೆ. ಹಿಂದೆಯಿಂದ ಸ್ಕೂಟಿಯಲ್ಲಿ ಬಂದ ಪ್ರಕಾಶ್ ಅವರು ಡೋರ್ ತಗುಲಿ ನೆಲಕ್ಕೆ ಬಿದ್ದಿದ್ದಾರೆ.

ಫಾರ್ಚುನ ಕಾರು ಡೋರ್ ಓಪನ್ ಮಾಡಿದ ತಕ್ಷಣ ಸ್ಕೂಟಿಯಲ್ಲಿದ್ದ ಪ್ರಕಾಶ್ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಬಸ್‌ವೊಂದು ಪ್ರಕಾಶ್ ಅವರ ಮೇಲೆ ಹರಿದಿದೆ. ತಕ್ಷಣ ಅವರನ್ನು ಕೆಆರ್‌ ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಇನ್ನೂ ಶೋಭಾ ಕರಂದ್ಲಾಜೆ ಅವರು ಘಟನೆಯ ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ನೀಡಿದರು. ಜೊತೆಗೆ ಪಕ್ಷದಿಂದ ಕುಟುಂಬಕ್ಕೆ ಪರಿಹಾರ ನೀಡುತ್ತೇವೆಂದು ಭರವಸೆ ನೀಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಮಗೆ ತುಂಬಾ ದು:ಖ ಆಗಿದೆ. ಪ್ರಕಾಶ್ ಅವರು ನಮ್ಮ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಅವರ ನಿಧನ ನಮಗೆ ನೋವು ತಂದಿದೆ. ಅವರ ಪರವಾಗಿ ಅವರ ಕುಟುಂಬದ ಪರವಾಗಿ ನಮ್ಮ ಪಕ್ಷ ಇದೆ. ಕೆಆರ್ ಪುರನ ಗಣೇಶ ದೇಗುಲದ ಬಳಿ ಈ ಘಟನೆ ನಡೆದಿದೆ. ಅವರ ಕುಟುಂಬದೊಂದಿಗೆ ನನ್ನ ಪಕ್ಷ ನಿಂತುಕೊಳ್ಳುತ್ತದೆ. ಅವರಿಗೆ ಪರಿಹಾರವನ್ನು ನಮ್ಮ ಪಕ್ಷ ನೀಡಲಿದೆ' ಎಂದರು.

ಸದ್ಯ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬರಬೇಕಾಗಿದೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+