ನಿಗೂಢ ಮಹಿಳೆ ಬಾಬಾ ವಂಗಾ 2021ರ ಭವಿಷ್ಯ: ಇನ್ನಷ್ಟು ಭಯಾನಕ, ವಿನಾಶ

ಮಾರಕ ಕೊರೊನಾದಿಂದ ನಿಧಾನವಾಗಿ ಮುಕ್ತಿ ಸಿಗಲಿದೆ ಎನ್ನುವಷ್ಟರಲ್ಲಿ ಇನ್ನೊಂದು ರೂಪಾಂತರ ವೈರಾಣು ಬ್ರಿಟನ್ ನಲ್ಲಿ ಕಾಣಿಸಿಕೊಂಡು, ಮತ್ತೆ ವಿಶ್ವದ ನೆಮ್ಮದಿಯನ್ನು ಹಾಳು ಮಾಡಿದೆ. ಆ ವೈರಾಣು ಕಾಣಿಸಿಕೊಂಡ ನಂತರ, ಆ ದೇಶದಿಂದ ಸಾವಿರಾರು ಮಂದಿ ಭಾರತಕ್ಕೂ ಆಗಮಿಸಿದ್ದಾಗಿದೆ.

2020 ಅತ್ಯಂತ ಕೆಟ್ಟ ವರ್ಷ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಆದರೆ, ಮುಂದಿನ ವರ್ಷ ಇನ್ನೂ ಭಯಾನಕವಾಗಲಿದೆ ಎಂದು ನಿಗೂಢ ಮಹಿಳೆ ಬಾಬಾ ವಂಗಾ ಬಹು ಹಿಂದೆನೇ ಹೇಳಿದ ಭವಿಷ್ಯ ಬಹಿರಂಗವಾಗಿದೆ.

ಪ್ರಸಕ್ತ ವರ್ಷದಲ್ಲಿ ಮದ್ದಿಲ್ಲದ ಕಾಯಿಲೆ ವಿಶ್ವದ ನೆಮ್ಮದಿಯನ್ನು ಹಾಳು ಮಾಡುತ್ತದೆ ಎಂದು ಕೋಡಿಮಠದ ಶ್ರೀಗಳು ಹಿಂದೆನೇ ಭವಿಷ್ಯ ನುಡಿದಿದ್ದರು. ಬಹುತೇಕ ಒಂದು ವರ್ಷವನ್ನು ನುಂಗಿಹಾಕಿರುವ ಕೊರೊನಾದಿಂದ ಬಿಡುಗಡೆಹೊಂದಿ, ಮುಂದಿನ ವರ್ಷದಿಂದಾರೂ ನೆಮ್ಮದಿ ಸಿಗಬಹುದು ಎನ್ನುವ ಲೆಕ್ಕಾಚಾರ ಬಾಬಾ ವಂಗಾ ಭವಿಷ್ಯವನ್ನು ನಂಬುವುದಾದರೆ ಉಲ್ಟಾ ಹೊಡೆಯಲಿದೆ.

ಮನುಷ್ಯತ್ವಕ್ಕೆ ಬೆಲೆ ಇಲ್ಲದೇ ಇರುವುದು, ಹಲವು ದುರಂತ ಸಂಭವಿಸುವುದು ಎಂದು ವಂಗಾ, 2021ದ ಭವಿಷ್ಯವನ್ನು ನುಡಿದಿದ್ದಾರೆ. 2020ರ ಆ ಮಹಿಳೆ ನುಡಿದ ಭವಿಷ್ಯ ಒಂದಷ್ಟು ಸತ್ಯವಾಗಿದೆ, ಇನ್ನಷ್ಟು ಸುಳ್ಳಾಗಿದೆ. ಮುಂದಿನ ವರ್ಷದ ಬಗ್ಗೆ ಬಾಬಾ ವಂಗಾ ನುಡಿದಿದ್ದೇನು?

 ಈ ಬಾಬಾ ವಂಗಾ ಯಾರು? ಬಲ್ಗೇರಿಯಾ ಮೂಲದ ಈ ಮಹಿಳೆ

ಈ ಬಾಬಾ ವಂಗಾ ಯಾರು? ಬಲ್ಗೇರಿಯಾ ಮೂಲದ ಈ ಮಹಿಳೆ

ಈ ಬಾಬಾ ವಂಗಾ ಯಾರು? ಬಲ್ಗೇರಿಯಾ ಮೂಲದ ಈ ಮಹಿಳೆಗೆ ಬಾಲ್ಯದಿಂದಲೇ ಕಣ್ಣು ಕಾಣಿಸುತ್ತಿರಲಿಲ್ಲ. 1996ರಲ್ಲಿಯೇ ಮೃತಪಟ್ಟಿದ್ದ ಬಾಬಾ ವಂಗಾ, ಸ್ತನ ಕ್ಯಾನ್ಸರ್‌ ಗೆ ಬಲಿಯಾಗಿದ್ದರು. ಆದರೂ ಅವರು ಜಗತ್ತಿನಲ್ಲಿ 51ನೇ ಶತಮಾನದವರೆಗೂ ಏನೇನು ನಡೆಯಲಿದೆ ಎಂಬುದನ್ನು ಮೊದಲೇ ತಿಳಿಸಿದ್ದಾರೆ. ಆಕೆ ಸತ್ತು ಈಗ 23 ವರ್ಷಗಳಾಗಿದ್ದರೂ, ಆಕೆಯ ಭವಿಷ್ಯದ ಬಗ್ಗೆ ಅಪಾರ ನಂಬಿಕೆಯಿದೆ.

 ವಿನಾಶಕಾರಿ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಲಿದೆ

ವಿನಾಶಕಾರಿ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಲಿದೆ

ಮುಂದಿನ ವರ್ಷದ ಬಗ್ಗೆ ಭವಿಷ್ಯ ನುಡಿದಿರುವ ವಂಗಾ, "ಜನರು ತಮ್ಮ ನಂಬಿಕೆಯನ್ನು ಕಳೆದುಕೊಳ್ಳಲ್ದಿದ್ದಾರೆ, ಮಾನವೀಯತೆಗೆ ಬೆಲೆ ಇರುವುದಿಲ್ಲ. ವಿನಾಶಕಾರಿ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಲಿದೆ. ಜನರು ಒಬ್ಬರು ಇನ್ನೊಬ್ಬರ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳಲಿದ್ದಾರೆ"ಎಂದು ಹೇಳಿದ್ದಾರೆ.

 ನೈಸರ್ಗಿಕ ವಿಕೋಪ, ದುರಂತಗಳು ಸಂಭವಿಸಲಿವೆ

ನೈಸರ್ಗಿಕ ವಿಕೋಪ, ದುರಂತಗಳು ಸಂಭವಿಸಲಿವೆ

"ನೈಸರ್ಗಿಕ ವಿಕೋಪ, ದುರಂತಗಳು ಸಂಭವಿಸಲಿವೆ. ಮೂರು ಬಲಾಢ್ಯರು ಒಂದಾಗಲಿದ್ದಾರೆ. ಬಲಿಷ್ಟವಾದ ಡ್ರ್ಯಾಗನ್ ವಿಶ್ವವನ್ನು ತನ್ನ ಮುಷ್ಠಿಗೆ ತೆಗೆದುಕೊಳ್ಳಲಿದೆ. ಕೆಲವು ವಿದ್ರೋಹಿಗಳಲ್ಲಿ ಕೆಂಪು ಹಣ ಹಣ ಇರಲಿದೆ"ಎನ್ನುವ ಭವಿಷ್ಯ ಬಾಬಾ ವಂಗಾ ಅವರಿಂದ ಬಂದಿದೆ.

 ಅಮೆರಿಕಾ ಲೋಹದ ಹಕ್ಕಿಯ ದಾಳಿಗೆ ಒಳಗಾಗಲಿದ್ದಾರೆ

ಅಮೆರಿಕಾ ಲೋಹದ ಹಕ್ಕಿಯ ದಾಳಿಗೆ ಒಳಗಾಗಲಿದ್ದಾರೆ

"ಈ ವರ್ಷದಲ್ಲಿ ಕ್ಯಾನ್ಸರ್ ಮಹಾಮಾರಿಗೂ ಔಷಧಿ ಸಿಗಲಿದೆ. ಕ್ಯಾನ್ಸರ್ ಅನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕುವ ದಿನ ಹತ್ತಿರ ಬಂದಿದೆ. ಕೆಲವೊಂದೆಡೆ ಅಭಿವೃದ್ದಿಯೂ ಕಾಣಲಿದೆ"ಎಂದು ಬಾಬಾ ವಂಗಾ, 2021ರ ಭವಿಷ್ಯವನ್ನು ನುಡಿದಿದ್ದಾರೆ. 'ಅಮೆರಿಕಾ ಲೋಹದ ಹಕ್ಕಿಯ ದಾಳಿಗೆ ಒಳಗಾಗಲಿದೆ'ಎಂದು ವಂಗಾ ಭವಿಷ್ಯ ನುಡಿದಿದ್ದರು. ಅವಳಿ ಕಟ್ಟದ ಮೇಲೆ ದಾಳಿ ನಡೆದದ್ದನ್ನು ವಂಗಾ ಮೊದಲೇ ಗ್ರಹಿಸಿದ್ದರು ಎಂದು ಅರ್ಥೈಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+