Bengaluru Accidents: ವಾರಾಂತ್ಯದಲ್ಲಿ ಬೆಂಗಳೂರಿನ ರಸ್ತೆಗಳು ಹೆಚ್ಚು ಅಪಾಯಕಾರಿ ಎಂದ ಅಂಕಿಅಂಶಗಳು
ಬೆಂಗಳೂರು, ಏಪ್ರಿಲ್. 22: ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೆ ಇವೆ. ಇದರ ಜೊತೆಗೆ ಅಪಘಾತ ಪ್ರಕರಣಗಳು ಸಹ ಹೆಚ್ಚಾಗುತ್ತಲೆ ಇರುತ್ತವೆ. ಕಳೆದ ವರ್ಷ ಬೆಂಗಳೂರಿನಲ್ಲಿ ವಾರದ ಇತರ ದಿನಗಳಿಗೆ ಹೊಲಿಸಿದರೆ ವಾರಾಂತ್ಯದಲ್ಲಿ ಮಾರಣಾಂತಿಕ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಡೇಟಾ ತೋರಿಸಿದೆ.
ವಾರದ ದಿನಗಳಲ್ಲಿ ಐಟಿ ಸಿಟಿಯಲ್ಲಿ ಟ್ರಾಫಿಕ್ ಹೆಚ್ಚಾಗುತ್ತಲೆ ಇದೆ. ಆದರೆ, ಅಪಘಾತಗಳ ಪ್ರಚಾರಕ್ಕೆ ಬಂದರೆ, ಭಾನುವಾರ ಮತ್ತು ಶನಿವಾರ ಅತಿ ಹೆಚ್ಚು ಮಾರಣಾಂತಿಕ ಅಪಘಾತಗಳು ನಡೆಯುತ್ತಿವೆ. ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿಅಂಶಗಳ ಪ್ರಕಾರ, ಶನಿವಾರ ಮತ್ತು ಭಾನುವಾರದಂದು ಅತಿ ಹೆಚ್ಚು ಅಪಘಾತಗಳು ಸಂಭವಿಸಿವೆ. ಕಳೆದ ವರ್ಷ 883 ಮಾರಣಾಂತಿಕ ಅಪಘಾತಗಳಲ್ಲಿ 32% ಕ್ಕಿಂತ ಹೆಚ್ಚು ವಾರಾಂತ್ಯದಲ್ಲಿ ನಡೆದಿವೆ.

2022 ಕ್ಕೆ ಹೋಲಿಸಿದರೆ, ಭಾನುವಾರದಂದು ಸಾವುಗಳು 115 ರಿಂದ 152 ಕ್ಕೆ ಏರಿದೆ. ಆದರೆ, ಶನಿವಾರದಂದು ಸಾವುಗಳು 103 ರಿಂದ 133 ಕ್ಕೆ ಏರಿಕೆಯಾಗಿದೆ. ಇದು ಸುಮಾರು 30% ರಷ್ಟು ಹೆಚ್ಚಾಗಿದೆ. ವಾರದ ಇತರ ದಿನಗಳಲ್ಲಿ ಕಳೆದ ವರ್ಷದಲ್ಲಿ ತಲಾ ಸರಾಸರಿ 120 ಮಾರಣಾಂತಿಕ ಅಪಘಾತಗಳು ಅಥವಾ ಪ್ರತಿದಿನ ಸುಮಾರು 2.3 ಸಾವುಗಳು ಸಂಭವಿಸಿದ್ದರೂ, ವಾರಾಂತ್ಯಗಲ್ಲಿ ನಗರದಲ್ಲಿ ವಾಹನ ಸವಾರರು ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ.
ಕಳೆದ ವರ್ಷ ಜಾನ್ಸ್ ಹಾಪ್ಕಿನ್ಸ್ ಇಂಟರ್ನ್ಯಾಷನಲ್ ಇಂಜುರಿ ರಿಸರ್ಚ್ ಯೂನಿಟ್ ಮತ್ತು ನಿಮ್ಹಾನ್ಸ್ ನಡೆಸಿದ Status Summary Report 2022: Road Safety Risk Factors ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿ ಸಿದ್ಧಪಡಿಸಿದ ತಂಡದ ಭಾಗವಾಗಿದ್ದ ಸದಸ್ಯರೊಬ್ಬರು, ವಾರದ ದಿನಗಳಿಗಿಂತ ವಾರಾಂತ್ಯದಲ್ಲಿ ನಗರದ ರಸ್ತೆಗಳಲ್ಲಿ ಕಡಿಮೆ ಟ್ರಾಫಿಕ್ ಇರುವುದರಿಂದ ವಾಹನ ಸವಾರರು ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಲು ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.
"ವಾರಾಂತ್ಯದಲ್ಲಿ, ಜನರು ಬಿಡುವಿನ ಚಟುವಟಿಕೆಗಳಿಗಾಗಿ ತಿರುಗಾಡುತ್ತಾರೆ ಮತ್ತು ಆದ್ದರಿಂದ ಕಡಿಮೆ ಜಾಗ್ರತೆ ವಹಿಸುತ್ತಾರೆ. ರಸ್ತೆಗಳಲ್ಲಿ ಕಡಿಮೆ ಟ್ರಾಫಿಕ್ ಎಂದರೆ ಜನರು ಹೆಚ್ಚಿನ ವೇಗದಲ್ಲಿ ಪ್ರಯಾಣಿಸಬಹುದು. ಕುಡಿದು ವಾಹನ ಚಲಾಯಿಸುವುದು, ಮಾದಕ ದ್ರವ್ಯ ಸೇವನೆ, ದುಡುಕಿನ ಚಾಲನೆ ಮುಂತಾದ ಅನೇಕ ಅಪಾಯಕಾರಿ ಅಂಶಗಳೂ ಇದರಲ್ಲಿ ಒಳಗೊಂಡಿವೆ" ಎಂದು ತಿಳಿಸಿದ್ದಾರೆ.
ಕನಕಪುರ, ಬಳ್ಳಾರಿ ರಸ್ತೆಯಲ್ಲಿ ಹೆಚ್ಚು ಅಪಘಾತ
ಗ್ರಾಮೀಣ ಭಾಗಗಳ ರಸ್ತೆಗಳಲ್ಲಿ ಮತ್ತು ಹೊರವಲಯಕ್ಕೆ ಹೋಗುವ ಕನಕಪುರ ರಸ್ತೆ ಅಥವಾ ಬಳ್ಳಾರಿ ರಸ್ತೆಯಂತಹ ಕಾರಿಡಾರ್‌ಗಳಲ್ಲಿ ಈ ಅಪಘಾತಗಳು ಹೆಚ್ಚು ಸಾಮಾನ್ಯವಾಗಿದೆ. ವಾರಾಂತ್ಯದಲ್ಲಿ ಹೊರಗೆ ಪ್ರಯಾಣಿಸುವ ಜನರು ಲೇನ್ ಶಿಸ್ತು ಮತ್ತು ಸೈನ್‌ಬೋರ್ಡ್‌ಗಳ ಬಗ್ಗೆ ಗಮನ ಹರಿಸುವುದಿಲ್ಲ. ಜೊತೆಗೆ ವೇಗವಾಗಿ ಓಡಾತ್ತಿರುತ್ತಾರೆ. ಹೊರವಲಯಕ್ಕೆ ಹೋಗುತ್ತಿದ್ದಂತೆ, ಸೀಟ್ ಬೆಲ್ಟ್‌ಗಳನ್ನು ತೆಗೆಯುವುದು ಮತ್ತು ಹೆಲ್ಮೆಟ್‌ಗಳನ್ನು ಹಾಕದೇ ಇರುವುದು ಕೂಡ ಅಪಘಾತಗಳಿಗೆ ಕಾರಣ ಎಂದಿದೆ ವರದಿ.
ಹೆಚ್ಚುವರಿಯಾಗಿ, ರಾತ್ರಿ 9 ರಿಂದ ಬೆಳಗ್ಗೆ 6 ರ ನಡುವೆ ಪ್ರತಿ ವರ್ಷ ಅತ್ಯಧಿಕ ಸಂಖ್ಯೆಯ ಮಾರಣಾಂತಿಕ ಅಪಘಾತಗಳು ನಡೆದಿವೆ. ಕಳೆದ ವರ್ಷ ಇಂತಹ ಅಪಘಾತಗಳ ಸಂಖ್ಯೆಯಲ್ಲಿ ಮಧ್ಯಾಹ್ನ 3 ರಿಂದ ಸಂಜೆ 6 ರವರ ಸಮಯದಲ್ಲಿ ಹೆಚ್ಚಳವಾಗಿದೆ. 2022 ಕ್ಕೆ ಹೋಲಿಸಿದರೆ, ಈ ಅವಧಿಯಲ್ಲಿ ಅಪಘಾತಗಳು 48% ಹೆಚ್ಚಾಗಿದೆ.












Click it and Unblock the Notifications